ಪ್ರಧಾನ ಮಂತ್ರಿಯವರ ಕಛೇರಿ
ಕೀನ್ಯಾದ ಮಾಜಿ ಪ್ರಧಾನಮಂತ್ರಿ ಶ್ರೀ ರೈಲಾ ಒಡಿಂಗಾ ಅವರ ನಿಧನಕ್ಕೆ ಅತೀವ ಸಂತಾಪ ಸೂಚಿಸಿದ ಪ್ರಧಾನಮಂತ್ರಿ
Posted On:
15 OCT 2025 2:41PM by PIB Bengaluru
ಕೀನ್ಯಾದ ಮಾಜಿ ಪ್ರಧಾನಮಂತ್ರಿ ಶ್ರೀ ರೈಲಾ ಒಡಿಂಗಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. "ನನ್ನ ಆತ್ಮೀಯ ಸ್ನೇಹಿತ ಮತ್ತು ಕೀನ್ಯಾದ ಮಾಜಿ ಪ್ರಧಾನಮಂತ್ರಿ ಶ್ರೀ ರೈಲಾ ಒಡಿಂಗಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಒಬ್ಬ ಉನ್ನತ ರಾಜನೀತಿಜ್ಞ ಮತ್ತು ಭಾರತದ ಪ್ರೀತಿಯ ಸ್ನೇಹಿತರಾಗಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ದಿನಗಳಿಂದ ಅವರನ್ನು ಹತ್ತಿರದಿಂದ ತಿಳಿದುಕೊಳ್ಳುವ ಸೌಭಾಗ್ಯ ನನಗೆ ಸಿಕ್ಕಿತು ಮತ್ತು ನಮ್ಮ ಒಡನಾಟವು ವರ್ಷಗಳಿಂದ ಮುಂದುವರೆದಿದೆ" ಎಂದು ಶ್ರೀ ಮೋದಿ ಅವರು ಹೇಳಿದರು. ಶ್ರೀ ರೈಲಾ ಒಡಿಂಗಾ ಅವರು ಭಾರತದ ಸಂಸ್ಕೃತಿ, ಮೌಲ್ಯಗಳು ಮತ್ತು ಪ್ರಾಚೀನ ಜ್ಞಾನದ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು, ಇದು ಭಾರತ-ಕೀನ್ಯಾ ಸಂಬಂಧಗಳನ್ನು ಬಲಪಡಿಸುವ ಅವರ ಪ್ರಯತ್ನಗಳಲ್ಲಿ ಪ್ರತಿಫಲಿಸುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದರು.
ಎಕ್ಸ್ ತಾಣದ ತಮ್ಮ ಖಾತೆಯಲ್ಲಿ ಪ್ರಧಾನಮಂತ್ರಿ ಈ ರೀತಿ ಸಂತಾಪ ಸಂದೇಶ ತಿಳಿಸಿದ್ದಾರೆ:
"ನನ್ನ ಆತ್ಮೀಯ ಸ್ನೇಹಿತ ಮತ್ತು ಕೀನ್ಯಾದ ಮಾಜಿ ಪ್ರಧಾನಮಂತ್ರಿ ಶ್ರೀ ರೈಲಾ ಒಡಿಂಗಾ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರು ಒಬ್ಬ ಉನ್ನತ ರಾಜನೀತಿಜ್ಞ ಮತ್ತು ಭಾರತದ ಪ್ರೀತಿಯ ಸ್ನೇಹಿತ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ದಿನಗಳಿಂದ ಅವರನ್ನು ಹತ್ತಿರದಿಂದ ತಿಳಿದುಕೊಳ್ಳುವ ಸೌಭಾಗ್ಯ ನನಗೆ ಸಿಕ್ಕಿತು ಮತ್ತು ನಮ್ಮ ಒಡನಾಟವು ವರ್ಷಗಳಿಂದ ಮುಂದುವರೆಯಿತು. ಅವರು ಭಾರತದ ಸಂಸ್ಕೃತಿ, ಮೌಲ್ಯಗಳು ಮತ್ತು ಪ್ರಾಚೀನ ಬುದ್ಧಿವಂತಿಕೆಯ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ಭಾರತ-ಕೀನ್ಯಾ ಸಂಬಂಧಗಳನ್ನು ಬಲಪಡಿಸುವ ಅವರ ಪ್ರಯತ್ನಗಳಲ್ಲಿ ಇದು ಪ್ರತಿಫಲಿಸುತ್ತದೆ. ಅವರು ವಿಶೇಷವಾಗಿ ಆಯುರ್ವೇದ ಮತ್ತು ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಗಳನ್ನು ಮೆಚ್ಚಿದರು, ಅವರ ಮಗಳ ಆರೋಗ್ಯದ ಮೇಲೆ ಅವುಗಳ ಸಕಾರಾತ್ಮಕ ಪರಿಣಾಮವನ್ನು ಕಂಡರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಕೀನ್ಯಾದ ಜನರಿಗೆ ನನ್ನ ಹೃದಯಾಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ."
*****
(Release ID: 2179369)
Visitor Counter : 11
Read this release in:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Gujarati
,
Tamil
,
Telugu
,
Malayalam