ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತ ಸರ್ಕಾರವು ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರ ಅಡಿಯಲ್ಲಿ ಒಟ್ಟು ₹5.85 ಕೋಟಿ ಬಹುಮಾನ ನಿಧಿಯೊಂದಿಗೆ ಮೂರು ಜಾಗತಿಕ ಇಂಪ್ಯಾಕ್ಟ್ ಸವಾಲುಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ; ಅರ್ಜಿಗಳು ಅಕ್ಟೋಬರ್ 31, 2025 ರವರೆಗೆ ತೆರೆದಿರುತ್ತವೆ
ಈ ಸವಾಲುಗಳು ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಕ್ಕೆ ಹೆಚ್ಚಿನ ಸಾಮರ್ಥ್ಯದೊಂದಿಗೆ ಎಐ-ಚಾಲಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾವೀನ್ಯಕಾರರಿಗೆ ಮಾರ್ಗದರ್ಶನ, ಹೂಡಿಕೆದಾರರ ಪ್ರವೇಶ ಮತ್ತು ಅವರ ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯಲು ಜಾಗತಿಕ ವೇದಿಕೆಯನ್ನು ಒದಗಿಸುತ್ತವೆ
'ಎಲ್ಲರಿಗೂ ಎಐ' ರಾಷ್ಟ್ರೀಯ ಮತ್ತು ಜಾಗತಿಕ ಅಗತ್ಯಗಳನ್ನು; 'ಎಐ ಬೈ ಹರ್' ಮಹಿಳಾ ನೇತೃತ್ವದ ಎಐ ನಾವೀನ್ಯತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ; 'YUVAi' ಸಾರ್ವಜನಿಕ ಒಳಿತಿಗಾಗಿ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಯುವ ನಾವೀನ್ಯಕಾರರಿಗೆ ಸ್ಫೂರ್ತಿ ನೀಡುತ್ತದೆ
ಜಾಗತಿಕ ಎಐ ಸವಾಲುಗಳು ನಾವೀನ್ಯಕಾರರಿಗೆ ಮಾರ್ಗದರ್ಶನ, ಹೂಡಿಕೆದಾರರ ಪ್ರವೇಶ ಮತ್ತು ಸಮಗ್ರ, ಜವಾಬ್ದಾರಿಯುತ ಎಐ ನಾವೀನ್ಯತೆಯನ್ನು ವೇಗಗೊಳಿಸಲು ಜಾಗತಿಕ ವೇದಿಕೆಯನ್ನು ಒದಗಿಸುತ್ತವೆ
Posted On:
13 OCT 2025 2:22PM by PIB Bengaluru
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸೆಪ್ಟೆಂಬರ್ 2025 ರಲ್ಲಿ ಘೋಷಿಸಿದ ಒಟ್ಟು ₹5.85 ಕೋಟಿ ಮೌಲ್ಯದ ಪ್ರಶಸ್ತಿಗಳ ಮೂರು ಪ್ರಮುಖ ಜಾಗತಿಕ ಇಂಪ್ಯಾಕ್ಟ್ ಸವಾಲುಗಳಿಗೆ ಈಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಐ ಫಾರ್ ಆಲ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್, ಎಐ ಬೈ ಅರ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್, ಮತ್ತು YUVAi: ಗ್ಲೋಬಲ್ ಯೂತ್ ಚಾಲೆಂಜ್ ಎಂಬ ಮೂರು ಉಪಕ್ರಮಗಳು ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಕ್ಕೆ ಹೆಚ್ಚಿನ ಸಾಮರ್ಥ್ಯದೊಂದಿಗೆ ಪರಿವರ್ತಕ ಎಐ-ಚಾಲಿತ ಪರಿಹಾರಗಳನ್ನು ಗುರುತಿಸುವುದು, ಪೋಷಿಸುವುದು ಮತ್ತು ಪ್ರದರ್ಶಿಸುವ ಗುರಿಯನ್ನು ಹೊಂದಿವೆ. ಈ ಕಾರ್ಯಕ್ರಮಗಳು ನಾವೀನ್ಯಕಾರರಿಗೆ ಮಾರ್ಗದರ್ಶನ, ಹೂಡಿಕೆದಾರರ ಪ್ರವೇಶ ಮತ್ತು ಅವರ ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯಲು ಜಾಗತಿಕ ವೇದಿಕೆಯನ್ನು ಒದಗಿಸುತ್ತವೆ. ಈ ಸವಾಲುಗಳು ಶೃಂಗಸಭೆಯ ಅಧಿಕೃತ ವೆಬ್‌ಸೈಟ್ https://impact.indiaai.gov.in/ ನಲ್ಲಿ ನೇರಪ್ರಸಾರದಲ್ಲಿವೆ.
ಜಾಗತಿಕ ಪರಿಣಾಮ ಸವಾಲುಗಳನ್ನು ಸಮಗ್ರ, ಜವಾಬ್ದಾರಿಯುತ ಮತ್ತು ಹೆಚ್ಚಿಸಬಹುದಾದ ಎಐ ನಾವೀನ್ಯತೆಯನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಕೃತಕ ಬುದ್ಧಿಮತ್ತೆಯಲ್ಲಿ ಸಕಾರಾತ್ಮಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗುವ ನವೀನ ವಿಚಾರಗಳನ್ನು ಪ್ರೇರೇಪಿಸುವ ಮತ್ತು ಬೆಂಬಲಿಸುವ ಗುರಿಯನ್ನು ಅವು ಹೊಂದಿವೆ. ಆಯ್ದ ನಾವೀನ್ಯತೆಗಳನ್ನು ಫೆಬ್ರವರಿ 19–20, 2026 ರಿಂದ ನವದೆಹಲಿಯಲ್ಲಿ ನಡೆಯಲಿರುವ ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಪ್ರದರ್ಶಿಸಲಾಗುತ್ತದೆ.
ಮೂರು ಪ್ರಮುಖ ಜಾಗತಿಕ ಪರಿಣಾಮ ಸವಾಲುಗಳು ಯಾವುವು
1) ಎಐ ಫಾರ್ ಆಲ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್
ಪ್ರಮಾಣದಲ್ಲಿ ಹೆಚ್ಚಿನ ಸಂಭಾವ್ಯ ಮೌಲ್ಯವನ್ನು ಪ್ರದರ್ಶಿಸುವ ಮತ್ತು ನಿರ್ಣಾಯಕ ರಾಷ್ಟ್ರೀಯ ಮತ್ತು ಜಾಗತಿಕ ಅಗತ್ಯಗಳನ್ನು ಪೂರೈಸುವ ಎಐ ನಾವೀನ್ಯತೆಗಳಿಗೆ ಜಾಗತಿಕ ಆಹ್ವಾನ. ಈ ಸವಾಲು ಕೃಷಿ, ಹವಾಮಾನ ಮತ್ತು ಸುಸ್ಥಿರತೆ, ಶಿಕ್ಷಣ, ಹಣಕಾಸು ಸೇರ್ಪಡೆ, ಆರೋಗ್ಯ ರಕ್ಷಣೆ, ಉತ್ಪಾದನೆ, ನಗರ ಮೂಲಸೌಕರ್ಯ ಮತ್ತು ಚಲನಶೀಲತೆ ಮತ್ತು ವೈಲ್ಡ್‌ಕಾರ್ಡ್/ಮುಕ್ತ ನಾವೀನ್ಯತೆ ಟ್ರ್ಯಾಕ್ ನಂತಹ ಪ್ರಮುಖ ವಲಯಗಳಲ್ಲಿ ನಿಯೋಜಿಸಬಹುದಾದ ಎಐ ಪರಿಹಾರಗಳನ್ನು ಆಹ್ವಾನಿಸುತ್ತದೆ.
ಪ್ರಶಸ್ತಿಗಳು ಮತ್ತು ಬೆಂಬಲ:
- ಅಗ್ರ 10 ವಿಜೇತರಿಗೆ ₹ 2.5 ಕೋಟಿ ವರೆಗೆ ಬಹುಮಾನಗಳು.
- ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಭಾಗವಹಿಸಲು 20 ಅಂತಿಮ ಸ್ಪರ್ಧಿಗಳು (ತಲಾ ಇಬ್ಬರು ಸದಸ್ಯರವರೆಗೆ) ಪ್ರಯಾಣ ನೆರವು ಪಡೆಯುತ್ತಾರೆ.
- ಮಾರ್ಗದರ್ಶನ, ಹೂಡಿಕೆದಾರರ ಸಂಪರ್ಕಗಳು, ಕಂಪ್ಯೂಟ್/ಕ್ಲೌಡ್ ಕ್ರೆಡಿಟ್ ಗಳು ಮತ್ತು ಶೃಂಗಸಭೆಯ ನಂತರದ ವೇಗವರ್ಧಕ ಮಾರ್ಗಗಳಿಗೆ ಪ್ರವೇಶ.
ಅರ್ಹತೆ: ಪ್ರಾಯೋಗಿಕ ಹಂತದಲ್ಲಿರುವ ಅಥವಾ ಸಿದ್ಧವಾಗಿರುವ ಎಐ ಪರಿಹಾರಗಳನ್ನು ಹೊಂದಿರುವ ವಿದ್ಯಾರ್ಥಿಗಳು, ಸಂಶೋಧಕರು, ಕೆಲಸ ಮಾಡುವ ವೃತ್ತಿಪರರು, ಕಂಪನಿಗಳು ಮತ್ತು ನವೋದ್ಯಮಗಳಿಗೆ ಜಾಗತಿಕವಾಗಿ ಮುಕ್ತವಾಗಿದೆ.
Apply here
2. ಎಐ ಬೈ ಅರ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್
ಮಹಿಳಾ ನೇತೃತ್ವದ ಎಐ ನಾವೀನ್ಯತೆಗಳನ್ನು ಬಲಪಡಿಸಲು ಮಹಿಳಾ ಉದ್ಯಮಶೀಲತಾ ವೇದಿಕೆ (WEP), ನೀತಿ ಆಯೋಗವು ಇತರ ಜ್ಞಾನ ಪಾಲುದಾರರ ಸಹಯೋಗದೊಂದಿಗೆ ಈ ಸವಾಲನ್ನು ಆಯೋಜಿಸಲಾಗಿದೆ. ಕೃಷಿ, ಸೈಬರ್ ಭದ್ರತೆ ಮತ್ತು ಡಿಜಿಟಲ್ ಯೋಗಕ್ಷೇಮ, ಶಿಕ್ಷಣ, ಆರೋಗ್ಯ ರಕ್ಷಣೆ, ಇಂಧನ ಮತ್ತು ಹವಾಮಾನ ಮತ್ತು ವೈಲ್ಡ್‌ಕಾರ್ಡ್/ಮುಕ್ತ ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ಸ್ಪಷ್ಟವಾದ ಸಾಮಾಜಿಕ ಪರಿಣಾಮವನ್ನು ಉಂಟುಮಾಡುವ ಎಐ ಪರಿಹಾರಗಳನ್ನು ಪ್ರಸ್ತಾಪಿಸಲು ಅರ್ಜಿದಾರರನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಗಳು ಮತ್ತು ಬೆಂಬಲ:
- ಅಗ್ರ 10 ವಿಜೇತರಿಗೆ ₹2.5 ಕೋಟಿ ವರೆಗೆ ಬಹುಮಾನಗಳು.
- ಶೃಂಗಸಭೆಯಲ್ಲಿ ಭಾಗವಹಿಸಲು 30 ಅಂತಿಮ ಸ್ಪರ್ಧಿಗಳು (ತಲಾ ಇಬ್ಬರು ಸದಸ್ಯರವರೆಗೆ) ಪ್ರಯಾಣ ನೆರವನ್ನು ಪಡೆಯುತ್ತಾರೆ.
- ಜವಾಬ್ದಾರಿಯುತ ಎಐ, ಹೂಡಿಕೆದಾರರ ಸಿದ್ಧತೆ ಮತ್ತು ಕಥೆ ಹೇಳುವಿಕೆಯ ಕುರಿತು ವರ್ಚುವಲ್ ಬೂಟ್‌ಕ್ಯಾಂಪ್ ಗಳು.
- 30 ಉನ್ನತ-ಸಾಮರ್ಥ್ಯದ ತಂಡಗಳಿಗೆ ಹೂಡಿಕೆದಾರರೊಂದಿಗೆ ಕ್ಯುರೇಟೆಡ್ ಸಂಪರ್ಕಗಳು.
ಅರ್ಹತೆ: ಕಾರ್ಯನಿರ್ವಹಿಸುವ ಮೂಲಮಾದರಿ ಅಥವಾ ಪ್ರಬುದ್ಧ ಎಐ ಪರಿಹಾರದೊಂದಿಗೆ ಮಹಿಳಾ ನೇತೃತ್ವದ ತಂಡಗಳು, ವಿದ್ಯಾರ್ಥಿ ತಂಡಗಳು ಅಥವಾ ಮಹಿಳಾ ನೇತೃತ್ವದ ಘಟಕಗಳಿಗೆ ಜಾಗತಿಕವಾಗಿ ಮುಕ್ತವಾಗಿದೆ.
Apply here
3. YUVAi: ಗ್ಲೋಬಲ್ ಯೂತ್ ಚಾಲೆಂಜ್
13–21 ವರ್ಷ ವಯಸ್ಸಿನ ಯುವ ನಾವೀನ್ಯಕಾರರು (ವ್ಯಕ್ತಿಗಳು ಅಥವಾ ಇಬ್ಬರವರೆಗಿನ ತಂಡಗಳು) ಸಾರ್ವಜನಿಕ ಒಳಿತಿಗಾಗಿ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ʼಯುವಜನರು-ಮೊದಲುʼ ಉಪಕ್ರಮ ಇದಾಗಿದೆ. ಸೂಚಕ ವಿಷಯಗಳಲ್ಲಿ ವೈಲ್ಡ್‌ಕಾರ್ಡ್/ಮುಕ್ತ ಇನ್ನೋವೇಶನ್ ವರ್ಗದ ಜೊತೆಗೆ ಜನರು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುವುದು, ಪ್ರಮುಖ ವಲಯಗಳನ್ನು ಪರಿವರ್ತಿಸುವುದು ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಮೂಲಸೌಕರ್ಯ ಮತ್ತು ಸ್ಮಾರ್ಟ್ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವುದು ಸೇರಿವೆ.
ಪ್ರಶಸ್ತಿಗಳು ಮತ್ತು ಬೆಂಬಲ:
ಒಟ್ಟು ₹85 ಲಕ್ಷ ಮೌಲ್ಯದ ಬಹುಮಾನಗಳು, ಅವುಗಳೆಂದರೆ:
- ಅಗ್ರ 3 ವಿಜೇತರಿಗೆ ತಲಾ ₹15 ಲಕ್ಷ
- ಮುಂದಿನ 3 ವಿಜೇತರಿಗೆ ತಲಾ ₹10 ಲಕ್ಷ
- ತಲಾ ₹5 ಲಕ್ಷದ 2 ವಿಶೇಷ ಪ್ರಶಸ್ತಿಗಳು
- ಅಗ್ರ 20 ಮಂದಿ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಯಾಣ ನೆರವನ್ನು ಬೆಂಬಲವನ್ನು ಪಡೆಯುತ್ತಾರೆ
- 10-ದಿನಗಳ ವರ್ಚುವಲ್ ಬೂಟ್‌ಕ್ಯಾಂಪ್ ಗಳು, ಹೂಡಿಕೆದಾರರ ಪ್ರದರ್ಶನ ಅವಕಾಶಗಳು ಮತ್ತು ಶಾಶ್ವತ ಆನ್‌ಲೈನ್ ಪ್ರದರ್ಶನ ಮತ್ತು ಸಂಕಲನ ಪ್ರಕಟಣೆ
ಅರ್ಹತೆ: ಕೆಲಸ ಮಾಡುವ ಮೂಲಮಾದರಿಗಳು, ಪಿಒಸಿಗಳು ಅಥವಾ ನಿಯೋಜಿಸಬಹುದಾದ ಪರಿಹಾರಗಳನ್ನು ಹೊಂದಿರುವ 13–21 ವರ್ಷ ವಯಸ್ಸಿನ ಯುವ ನಾವೀನ್ಯಕಾರರಿಗೆ ಜಾಗತಿಕವಾಗಿ ಮುಕ್ತವಾಗಿದೆ.
Apply here
ಘಟನಾವಳಿಗಳು ಮತ್ತು ಪ್ರಮುಖ ದಿನಾಂಕಗಳು
- ಅರ್ಜಿಗಳ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ: ಅಕ್ಟೋಬರ್ 10, 2025
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2025
- ವರ್ಚುವಲ್ ಬೂಟ್‌ಕ್ಯಾಂಪ್ ಗಳು: ನವೆಂಬರ್ 2025
- ಅಂತಿಮ ಸ್ಪರ್ಧಿಗಳನ್ನು ಘೋಷಿಸುವ ದಿನಾಂಕ: ಡಿಸೆಂಬರ್ 31, 2025
- ಗ್ರ್ಯಾಂಡ್ ಶೋಕೇಸ್: ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 (ಫೆಬ್ರವರಿ 16–20, 2026, ನವದೆಹಲಿ)
ಅರ್ಜಿ ಸಲ್ಲಿಸುವುದು ಹೇಗೆ
ಮೂರು ಜಾಗತಿಕ ಪರಿಣಾಮ ಸವಾಲುಗಳಿಗೆ ಅರ್ಜಿಗಳನ್ನು ಅಧಿಕೃತ ಪೋರ್ಟಲ್ www.impact.indiaai.gov.in ಮೂಲಕ ಸಲ್ಲಿಸಬಹುದು.
ಪ್ರತಿಯೊಂದು ಸವಾಲು ಪುಟವು ಅರ್ಹತಾ ಮಾನದಂಡಗಳು, ಘಟನಾವಳಿಗಳು, ಸಲ್ಲಿಕೆ ಮಾರ್ಗಸೂಚಿಗಳು, ಸಮ್ಮತಿ ನಮೂನೆಗಳು ಮತ್ತು FAQ ಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಅರ್ಜಿದಾರರು ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಲು ಮತ್ತು ಭಾಗವಹಿಸುವಿಕೆಗೆ ಸಂಬಂಧಿಸಿದ ನವೀಕರಣಗಳು ಮತ್ತು ಪ್ರಕಟಣೆಗಳಿಗಾಗಿ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಲು ಸೂಚಿಸಲಾಗಿದೆ.
*****
(Release ID: 2178511)
Visitor Counter : 6