ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಜಾಗತಿಕ ಉತ್ಸಾಹದ ಬಗ್ಗೆ ಪ್ರಧಾನಮಂತ್ರಿ ಮೋದಿ ಸಂತಸ

Posted On: 28 NOV 2024 4:49PM by PIB Bengaluru

ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನರು ತೋರಿಸುತ್ತಿರುವ ಉತ್ಸಾಹದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿ ಜಾಗತಿಕವಾಗಿ ಪ್ರತಿಧ್ವನಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ವಿದೇಶ ಪ್ರವಾಸಗಳ ಕ್ಷಣಗಳನ್ನು ಹಂಚಿಕೊಂಡ ನಂತರ ಪ್ರಧಾನಮಂತ್ರಿ ಅವರು, ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನರು ತೋರಿಸುತ್ತಿರುವ ಉತ್ಸಾಹವು ಅತ್ಯಂತ ಸಂತಸಕರ ವಿಚಾರ ಎಂದಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:  

"ಭಾರತೀಯ ಸಂಸ್ಕೃತಿ ಜಾಗತಿಕವಾಗಿ ಪ್ರತಿಧ್ವನಿಸುತ್ತದೆ!

ನಾನು ಎಲ್ಲಿಗೆ ಹೋದರೂ, ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಜನರು ತೋರಿಸುತ್ತಿರುವ ಅಪಾರ ಉತ್ಸಾಹ ಕಂಡಾಗ ಅತ್ಯಂತ ಸಂತಸವಾಗುತ್ತದೆ. ಅದರ ಒಂದು ನೋಟ ಇಲ್ಲಿದೆ....''

****


(Release ID: 2178369) Visitor Counter : 15