ಚುನಾವಣಾ ಆಯೋಗ
ಪ್ರತಿಸ್ಪರ್ಧಿ ಪಕ್ಷಗಳು/ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಸಂಶ್ಲೇಷಿತ ವಿಡಿಯೊಗಳಿಗೆ ಕೃತಕ ಬುದ್ಧಿಮತ್ತೆ (ಎ.ಐ.) ಬಳಕೆಯ ಕುರಿತು ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜಕೀಯ ಪಕ್ಷಗಳಿಗೆ ಭಾರತದ ಚುನಾವಣಾ ಆಯೋಗ (ಇ.ಸಿ.ಐ) ನಿರ್ದೇಶನ
प्रविष्टि तिथि:
09 OCT 2025 10:03AM by PIB Bengaluru
1. ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಮತ್ತು 8 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ 2025ರ ಅಕ್ಟೋಬರ್ 6 ರಂದು ಚುನಾವಣಾ ವೇಳಾಪಟ್ಟಿ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ (MCC) ಜಾರಿಗೆ ಬಂದಿದೆ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮ ಸೇರಿದಂತೆ ಅಂತರ್ಜಾಲದಲ್ಲಿ ಪೋಸ್ಟ್ ಮಾಡುವ ವಿಷಯಕ್ಕೂ ಈ ನಿಬಂಧನೆಗಳು ಅನ್ವಯಿಸುತ್ತವೆ.
2. ಎಂ.ಸಿ.ಸಿ ನಿಬಂಧನೆಗಳ ಪ್ರಕಾರ, ಇತರ ಪಕ್ಷಗಳ ವಿರುದ್ಧದ ಟೀಕೆಗಳು ಅವರ ನೀತಿಗಳು ಮತ್ತು ಕಾರ್ಯಕ್ರಮ, ಹಿಂದಿನ ದಾಖಲೆ ಮತ್ತು ಕೆಲಸಕ್ಕೆ ಸೀಮಿತವಾಗಿರಬೇಕು. ಪಕ್ಷಗಳು ಮತ್ತು ಅಭ್ಯರ್ಥಿಗಳು ಇತರ ಪಕ್ಷಗಳ ನಾಯಕರು ಅಥವಾ ಕಾರ್ಯಕರ್ತರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧಿಸದ ಖಾಸಗಿ ಜೀವನದ ಎಲ್ಲಾ ವಿಧಗಳ ಟೀಕೆಗಳಿಂದ ದೂರವಿರಬೇಕು.
3. ಪರಿಶೀಲಿಸದ ಆರೋಪಗಳು ಅಥವಾ ವಿರೂಪಗಳ ಆಧಾರದ ಮೇಲೆ ಇತರ ಪಕ್ಷಗಳು ಅಥವಾ ಅವರ ಕಾರ್ಯಕರ್ತರ ಮೇಲೆ ಟೀಕೆಗಳನ್ನು ಮಾಡುವಂತಿಲ್ಲ.
4. ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಎತ್ತಿಹಿಡಿಯುವ ಅಗತ್ಯವನ್ನು ಒತ್ತಿಹೇಳುತ್ತಾ, ಮಾಹಿತಿಯನ್ನು ತಪ್ಪಾಗಿ ಅರ್ಥೈಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡುವುದನ್ನು ಅಥವಾ ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ಡೀಪ್ ಫೇಕ್ ಗಳನ್ನು ರಚಿಸಲು ಎ.ಐ. ಆಧಾರಿತ ಪರಿಕರಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಆಯೋಗವು ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದೆ.
5. ಇದಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು, ಅಭ್ಯರ್ಥಿಗಳು ಮತ್ತು ತಾರಾ ಪ್ರಚಾರಕರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳು/ ವಿಷಯಗಳಿಗೆ "ಎ.ಐ.-ಜನರೇಟೆಡ್", "ಡಿಜಿಟಲಿ ವರ್ಧಿತ", ಅಥವಾ "ಸಂಶ್ಲೇಷಿತ ವಿಷಯ" ಎಂಬ ಬಗ್ಗೆ ಸ್ಪಷ್ಟ ಸಂಕೇತಗಳನ್ನು ನಮೂದಿಸುತ್ತಾ ಜಾಹೀರಾತುಗಳ ರೂಪದಲ್ಲಿ ಪ್ರಚಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
6. ಚುನಾವಣಾ ವಾತಾವರಣವು ಹಾಳಾಗದಂತೆ ನೋಡಿಕೊಳ್ಳಲು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗುತ್ತಿದೆ.
7. ಎಂ.ಸಿ.ಸಿ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಆಯೋಗವು ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ. ಈ ಮಾರ್ಗಸೂಚಿಗಳ ಯಾವುದೇ ಉಲ್ಲಂಘನೆಯಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
*****
(रिलीज़ आईडी: 2176688)
आगंतुक पटल : 20