PIB Headquarters
azadi ka amrit mahotsav

ವಿಕಸಿತ ಭಾರತ ಬಿಲ್ಡಥಾನ್ 2025


ಶಾಲಾ ಮಟ್ಟದ ನಾವೀನ್ಯಕಾರರಿಗಾಗಿ ರಾಷ್ಟ್ರವ್ಯಾಪಿ ಕಾರ್ಯಕ್ರಮ

Posted On: 07 OCT 2025 3:19PM by PIB Bengaluru

ಪ್ರಮುಖ ಅಂಶಗಳು

  • ಸ್ವದೇಶಿ, ಆತ್ಮನಿರ್ಭರ ಭಾರತ, ವೋಕಲ್ ಫಾರ್ ಲೋಕಲ್ ಮತ್ತು ಸಮೃದ್ಧ ಭಾರತ್‌ ನಂತಹ ವಿಷಯಗಳ ಮೇಲೆ ಮೂಲಮಾದರಿಗಳನ್ನು ನಿರ್ಮಿಸಲು 10 ಮಿಲಿಯನ್ ವಿದ್ಯಾರ್ಥಿಗಳು (6-12 ನೇ ತರಗತಿ) ಭಾಗವಹಿಸಿರುವ ಭಾರತದ ಅತಿದೊಡ್ಡ ಶಾಲಾ ಹ್ಯಾಕಥಾನ್.
  • ಅಕ್ಟೋಬರ್ 13, 2025 ರಂದು ರಾಷ್ಟ್ರವ್ಯಾಪಿ ನೇರ ಕಾರ್ಯಕ್ರಮ: ಲೈವ್ ಸ್ಟ್ರೀಮಿಂಗ್ ಮೂಲಕ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರವ್ಯಾಪಿ ಲೈವ್ ಬಿಲ್ಡಥಾನ್.
  • 10 ರಾಷ್ಟ್ರೀಯ ಮಟ್ಟದ ವಿಜೇತರು, 100 ರಾಜ್ಯ ಮಟ್ಟದ ವಿಜೇತರು ಮತ್ತು 1,000 ಜಿಲ್ಲಾ ಮಟ್ಟದ ವಿಜೇತರಿಗೆ ಒಟ್ಟು ₹1 ಕೋಟಿ ಬಹುಮಾನ ನಿಧಿ.

ಪರಿಚಯ

ವಿಕಸಿತ ಭಾರತ ಬಿಲ್ಡಥಾನ್ 2025 ರಾಷ್ಟ್ರವ್ಯಾಪಿ ನಾವೀನ್ಯತೆ ಆಂದೋಲನವಾಗಿದ್ದು, ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ನೀತಿ ಆಯೋಗದ ಅಟಲ್ ನಾವೀನ್ಯತೆ ಮಿಷನ್ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ.

ಇದುವರೆಗಿನ ಅತಿದೊಡ್ಡ ಶಾಲಾ ಹ್ಯಾಕಥಾನ್ ಆಗಿರುವ ಇದು ಆತ್ಮನಿರ್ಭರ ಭಾರತ, ಸ್ವದೇಶಿ, ವೋಕಲ್ ಫಾರ್ ಲೋಕಲ್ ಮತ್ತು ಸಮೃದ್ಧ ಭಾರತ್ ಎಂಬ ನಾಲ್ಕು ವಿಷಯಗಳ ಕುರಿತು ಆಲೋಚನೆಗಳು ಅಥವಾ ಮೂಲಮಾದರಿಗಳನ್ನು ನಿರ್ಮಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಶಾಲಾ ಮಟ್ಟದಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ನಮ್ಮ ಯುವಜನರಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ಸಮಸ್ಯೆ ಪರಿಹಾರವನ್ನು ಬೆಳೆಸುವುದು ಬಿಲ್ಡಥಾನ್‌ ನ ಉದ್ದೇಶವಾಗಿದೆ, ಇದರಿಂದಾಗಿ ಅವರು ಸಮೃದ್ಧ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಪ್ರಮುಖ ಚಾಲಕರಾಗುತ್ತಾರೆ.

ಬಿಲ್ಡಥಾನ್ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ ಇ ಪಿ) 2020ಕ್ಕೆ ಅನುಗುಣವಾಗಿ ಪ್ರಾಯೋಗಿಕ, ಅನುಭವದ ಕಲಿಕೆಯನ್ನು ಒದಗಿಸುತ್ತದೆ. ಭಾಗವಹಿಸುವಿಕೆಯು ಎಲ್ಲರನ್ನೂ ಒಳಗೊಂಡಿದ್ದು, ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಬುಡಕಟ್ಟು ಮತ್ತು ದೂರದ ಪ್ರದೇಶಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ.

ಬಿಲ್ಡಥಾನ್ 2025 ಘಟನಾವಳಿ

A blue and white timeline with white textAI-generated content may be incorrect.

  • ಸೆಪ್ಟೆಂಬರ್ 23, 2025: ಗೌರವಾನ್ವಿತ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಂದ ವಿಕಸಿತ ಭಾರತ ಬಿಲ್ಡಥಾನ್ ಉದ್ಘಾಟನೆ
  • ಸೆಪ್ಟೆಂಬರ್ 23 – ಅಕ್ಟೋಬರ್ 11: ಪೋರ್ಟಲ್‌ ನಲ್ಲಿ ಕಾರ್ಯಕ್ರಮಕ್ಕಾಗಿ ನೋಂದಣಿಗಳು
  • ಅಕ್ಟೋಬರ್ 11 – ಅಕ್ಟೋಬರ್ 12: ವಿದ್ಯಾರ್ಥಿಗಳು ಸಿದ್ಧವಾಗಲು, ಥೀಮ್‌ ಗಳನ್ನು ಆಯ್ಕೆ ಮಾಡಲು ಮತ್ತು ಪರಿಹಾರಗಳನ್ನು ನಿರ್ಮಿಸಲು ಸಹಾಯ ಮಾಡಲು ತಂಡ ರಚನೆ, ನೋಂದಣಿ, ಮಾರ್ಗದರ್ಶನ, ಚಿಂತನಾಗೋಷ್ಠಿಗಳು, ಆಲೋಚನಾ ಶಿಬಿರಗಳು ಮತ್ತು ನಾವೀನ್ಯತೆ ಸರ್ಕಲ್‌ ಗಳು ಸೇರಿದಂತೆ ಪೂರ್ವಸಿದ್ಧತಾ ಚಟುವಟಿಕೆಗಳನ್ನು ಯೋಜಿಸುವುದು
  • ಅಕ್ಟೋಬರ್ 13: ಲೈವ್ ಸ್ಟ್ರೀಮಿಂಗ್ ಮೂಲಕ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರವ್ಯಾಪಿ ಲೈವ್ ಬಿಲ್ಡಥಾನ್
  • ಅಕ್ಟೋಬರ್ 13 – ಅಕ್ಟೋಬರ್ 31: ಪೋರ್ಟಲ್‌ ನಲ್ಲಿ ಶಾಲೆಗಳಿಂದ ನಮೂದುಗಳ ಸಲ್ಲಿಕೆ
  • ನವೆಂಬರ್ 1 – ಡಿಸೆಂಬರ್ 31: ತಜ್ಞರ ಸಮಿತಿಯಿಂದ ನಮೂದುಗಳ ಮೌಲ್ಯಮಾಪನ
  • ಜನವರಿ 2026: ಉನ್ನತ ತಂಡಗಳ ಘೋಷಣೆ ಮತ್ತು ಗೌರವ ಪ್ರದಾನ

ಪ್ರಮುಖ ಲಕ್ಷಣಗಳು

  • ಮೀಸಲಾದ ಪೋರ್ಟಲ್: ಅಂತಿಮ ನಮೂದುಗಳ ನೋಂದಣಿ ಮತ್ತು ಸಲ್ಲಿಕೆಗಾಗಿ ರಾಷ್ಟ್ರೀಯ ಪೋರ್ಟಲ್ ಇದೆ (ಆಲೋಚನೆಗಳು ಅಥವಾ ಮೂಲಮಾದರಿಗಳು)
  • ಭಾಗವಹಿಸುವಿಕೆಯ ವಿಧಾನ: 3-5 ವಿದ್ಯಾರ್ಥಿಗಳ ತಂಡವು ಬಿಲ್ಡಥಾನ್‌ ನಲ್ಲಿ ಭಾಗವಹಿಸುತ್ತದೆ ಮತ್ತು ವೀಡಿಯೊಗಳ ರೂಪದಲ್ಲಿ ನಮೂದುಗಳನ್ನು (ಆಲೋಚನೆಗಳು/ಮಾದರಿಗಳು) ಸಲ್ಲಿಸುತ್ತದೆ. ಒಂದು ಶಾಲೆಯಿಂದ ತಂಡಗಳ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ.
  • ಮಾರ್ಗದರ್ಶನ ಬೆಂಬಲ: ವಿದ್ಯಾರ್ಥಿಗಳು ಶಾಲಾ ಮಟ್ಟದಲ್ಲಿ ತಮ್ಮ ಯೋಜನೆಗಳನ್ನು ನಿರ್ಮಿಸಲು ಸಹಾಯ ಮಾಡಲು ಇನ್ಕ್ಯುಬೇಷನ್ ಕೇಂದ್ರಗಳು, ಬದಲಾವಣೆಯ ಮಾರ್ಗದರ್ಶಕ ಜಾಲ, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕಾರ್ಪೊರೇಟ್‌ ಗಳ ಸ್ವಯಂಸೇವಕರು ಮತ್ತು ಮಾರ್ಗದರ್ಶಕರು ಸಮರ್ಪಿತ ಬೆಂಬಲವನ್ನು ಒದಗಿಸುತ್ತಾರೆ.
  • ರಾಷ್ಟ್ರೀಯ ಲೈವ್ ಈವೆಂಟ್: ಎಲ್ಲಾ ಶಾಲೆಗಳನ್ನು (6 ರಿಂದ 12 ನೇ ತರಗತಿ) ಒಳಗೊಂಡಂತೆ ರಾಷ್ಟ್ರೀಯ ಮಟ್ಟದಲ್ಲಿ ವರ್ಚುವಲ್ ಲೈವ್ ಸ್ಟ್ರೀಮಿಂಗ್ ಸೆಷನ್ ನಡೆಸಲಾಗುವುದು.
  • ಜಾಗತಿಕ ಸ್ಟ್ರೀಮಿಂಗ್: ಈ ಕಾರ್ಯಕ್ರಮವನ್ನು ದೇಶಾದ್ಯಂತ ಸುದ್ದಿ ಮತ್ತು ಮಾಧ್ಯಮ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
  • ಸಮಗ್ರ ಗಮನ: ಮಹತ್ವಾಕಾಂಕ್ಷೆಯ ಬ್ಲಾಕ್‌ ಗಳು, ಬುಡಕಟ್ಟು ಪ್ರದೇಶಗಳು, ಗಡಿ ಗ್ರಾಮಗಳು ಮತ್ತು ದೂರ ಪ್ರದೇಶಗಳ ಶಾಲೆಗಳಿಗೆ ವಿಶೇಷ ಗಮನ ನೀಡಲಾಗುವುದು.
  • ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳು: ಶಾಲೆಗಳು ನಾವೀನ್ಯತೆ ಚಟುವಟಿಕೆಗಳನ್ನು ಆಯೋಜಿಸುತ್ತವೆ. ಸಮುದಾಯ ಮಟ್ಟದ ನಾವೀನ್ಯತೆ ಕಾರ್ಯಕ್ರಮಗಳನ್ನು ಆಯೋಜಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತದೆ, ಬಹು ಶಾಲೆಗಳು ಮತ್ತು ಗಣ್ಯರನ್ನು ಆಹ್ವಾನಿಸಲಾಗುತ್ತದೆ.
  • ನಮೂದುಗಳ ಸಲ್ಲಿಕೆ: ಕಾರ್ಯಕ್ರಮದ ನಂತರ, ಶಾಲೆಗಳು ತಮ್ಮ ನಾವೀನ್ಯತೆ ನಮೂದುಗಳ (ಆಲೋಚನೆಗಳು ಅಥವಾ ಮೂಲಮಾದರಿಗಳು) ವೀಡಿಯೊಗಳನ್ನು ಸಲ್ಲಿಸುತ್ತವೆ.

A diagram of a key featuresAI-generated content may be incorrect.

ಭಾಗವಹಿಸುವುದು ಹೇಗೆ

A diagram of a building functionDescription automatically generated with medium confidence

  • ಅರ್ಹತೆ: ಭಾರತದಾದ್ಯಂತ 6-12 ನೇ ತರಗತಿಯ ಎಲ್ಲಾ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಥಿಗಳು ಒಂದೇ ಶಾಲೆಗಳಿಂದ 3-5 ಸದಸ್ಯರ ತಂಡವನ್ನು ರಚಿಸಬೇಕು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಸಹಾಯದಿಂದ ನೋಂದಾಯಿಸಿಕೊಳ್ಳಬಹುದು. ಪ್ರತಿ ಶಾಲೆಗೆ ತಂಡಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.
  • ತಂಡದ ನೋಂದಣಿ: ಶಾಲೆಗಳು/ಶಿಕ್ಷಕರು ವಿದ್ಯಾರ್ಥಿಗಳನ್ನು ತಂಡಗಳನ್ನು ರಚಿಸಲು ಪ್ರೋತ್ಸಾಹಿಸಬೇಕು ಮತ್ತು ನಂತರ ಅಧಿಕೃತ ಬಿಲ್ಡಥಾನ್ ಪೋರ್ಟಲ್‌ ನಲ್ಲಿ ತಮ್ಮ ತಂಡಗಳನ್ನು ನೋಂದಾಯಿಸಿಕೊಳ್ಳಬೇಕು, ನಂತರ ಪ್ರತಿ ತಂಡಕ್ಕೂ ವಿಶಿಷ್ಟ ನೋಂದಣಿ ಐಡಿಯನ್ನು ರಚಿಸಲಾಗುತ್ತದೆ. ವಿಕಸಿತ ಭಾರತ್ ಬಿಲ್ಡಥಾನ್‌ ಗಾಗಿ ಶಾಲೆಗಳ ನೋಂದಣಿ ಲಿಂಕ್ - vbb.mic.gov.in.
  • ವಿಷಯದ ಆಯ್ಕೆ: ಪ್ರತಿಯೊಂದು ತಂಡವು ನಾಲ್ಕು ಬಿಲ್ಡಥಾನ್ ಥೀಮ್‌ ಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ಸಮಸ್ಯೆಯನ್ನು ಗುರುತಿಸಬೇಕಾಗುತ್ತದೆ.
  • ಮಂಥನ ಮತ್ತು ನಿರ್ಮಾಣ: ಸಮುದಾಯದ ಸಮಸ್ಯೆಗಳಿಗೆ ಪರಿಹಾರಗಳನ್ನು ಈ ತಂಡ ಚರ್ಚಿಸುತ್ತದೆ.
  • ಸಲ್ಲಿಕೆಗೆ ಸಿದ್ಧತೆ: ತಂಡಗಳು ತಾನು ಪರಿಹರಿಸುತ್ತಿರುವ ಸಮಸ್ಯೆ, ಅವರು ರಚಿಸಿದ ನವೀನ ಪರಿಹಾರ/ಮೂಲಮಾದರಿ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಸಂಭಾವ್ಯ ಪರಿಣಾಮವನ್ನು ವಿವರಿಸುವ 2–5 ನಿಮಿಷಗಳ ವೀಡಿಯೊವನ್ನು ರಚಿಸಬೇಕಾಗುತ್ತದೆ.
  • ಸಲ್ಲಿಕೆ: ಯೋಜನೆಯ ವೀಡಿಯೊ/ ಸಾರಾಂಶಗಳನ್ನು ಅಕ್ಟೋಬರ್ 13 ರಿಂದ ಅಕ್ಟೋಬರ್ 31, 2025 ರವರೆಗಿನ ಸಲ್ಲಿಕೆ ಅವಧಿಯೊಳಗೆ ಪೋರ್ಟಲ್‌ ನಲ್ಲಿ ಸಲ್ಲಿಸಬೇಕು.

ಪ್ರಶಸ್ತಿಗಳು

ತಜ್ಞರ ಸಮಿತಿಯು ನಮೂದುಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಅತ್ಯುತ್ತಮ ವಿದ್ಯಾರ್ಥಿ ತಂಡಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಈ ಶಾಲೆಗಳು ಮತ್ತು ವಿದ್ಯಾರ್ಥಿಗಳು ತಮ್ಮ ನಾವೀನ್ಯತೆಗಳನ್ನು ಮತ್ತಷ್ಟು ಬಲಪಡಿಸಲು ಕಾರ್ಪೊರೇಟ್ ದತ್ತು, ಮಾರ್ಗದರ್ಶನ ಮತ್ತು ಸಂಪನ್ಮೂಲಗಳ ಮೂಲಕ ದೀರ್ಘಕಾಲೀನ ಬೆಂಬಲವನ್ನು ಪಡೆಯುತ್ತವೆ.

ಇದು 1 ಕೋಟಿ ರೂ.ಗಳ ಬಹುಮಾನ ನಿಧಿಯನ್ನು ಹೊಂದಿದ್ದು, 10 ರಾಷ್ಟ್ರಮಟ್ಟದ ವಿಜೇತರು, 100 ರಾಜ್ಯ ಮಟ್ಟದ ವಿಜೇತರು ಮತ್ತು 1000 ಜಿಲ್ಲಾ ಮಟ್ಟದ ವಿಜೇತರನ್ನು ಒಳಗೊಂಡಿರುತ್ತದೆ.

ಯಾವುದೇ ಪ್ರಶ್ನೆಗಳಿಗೆ ದಯವಿಟ್ಟು ಸಂಪರ್ಕಿಸಿ: vbb.mic@aicte-india.org

ನೋಂದಣಿ ಲಿಂಕ್: vbb.mic.gov.in

Click here to see PDF

 

*****


(Release ID: 2175832) Visitor Counter : 10