ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಭಾರತದ ಅತಿದೊಡ್ಡ ನಾವೀನ್ಯತೆ ಆಂದೋಲನವಾದ ವಿಕಸಿತ ಭಾರತ ಬಿಲ್ಡಥಾನ್ 2025ಗೆ ಸೇರಲು ಕೇಂದ್ರ ಶಿಕ್ಷಣ ಸಚಿವಾಲಯ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ
Posted On:
03 OCT 2025 5:28PM by PIB Bengaluru
ಕೇಂದ್ರ ಶಿಕ್ಷಣ ಸಚಿವಾಲಯವು ತನ್ನ ಅಟಲ್ ಇನ್ನೋವೇಶನ್ ಮಿಷನ್ ಯೋಜನೆಯಡಿ , ನೀತಿ ಆಯೋಗದ ಸಹಯೋಗದೊಂದಿಗೆ, 6 ರಿಂದ 12ನೇ ತರಗತಿಯ ಶಾಲೆಗಳ ವಿದ್ಯಾರ್ಥಿಗಳನ್ನು ನಾವೀನ್ಯತೆಯಲ್ಲಿ ತೊಡಗಿಸಿಕೊಳ್ಳಲು ದೇಶಾದ್ಯಂತ ವಿಕಸಿತ ಭಾರತ ಬಿಲ್ಡಥಾನ್ 2025 ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದು ಭಾರತದ ಅತಿದೊಡ್ಡ ವಿದ್ಯಾರ್ಥಿ ನಾವೀನ್ಯತೆ ಉಪಕ್ರಮವಾಗಿದೆ ಮತ್ತು 2047ರ ವಿಕಸಿತ ಭಾರತ ಪರಿಕಲ್ಪನೆಯ (ವಿಕಸಿತ ಭಾರತ @2047 ) ದೃಷ್ಟಿಕೋನದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.
6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ನಾವೀನ್ಯತೆಯ ತಂಡಗಳನ್ನು ಸೇರಲು, ಸೃಜನಾತ್ಮಕವಾಗಿ ಯೋಚಿಸಲು ಮತ್ತು ನಿಜ ಜೀವನದ ಸವಾಲುಗಳನ್ನು ಎದುರಿಸುವ ಆಲೋಚನೆಗಳು ಮತ್ತು ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಲು ಬಿಲ್ಡಥಾನ್ ಕರೆ ನೀಡುತ್ತದೆ. ರಾಷ್ಟ್ರೀಯ ಪ್ರಾಮುಖ್ಯತೆಯ ನಾಲ್ಕು ವಿಷಯಗಳ ಕುರಿತು ವಿದ್ಯಾರ್ಥಿಗಳು ಕೆಲಸ ಮಾಡುತ್ತಾರೆ: ಅವುಗಳೆಂದರೆ,
- ಆತ್ಮನಿರ್ಭರ ಭಾರತ - ಸ್ವಾವಲಂಬಿ ವ್ಯವಸ್ಥೆಗಳು ಮತ್ತು ಪರಿಹಾರಗಳನ್ನು ನಿರ್ಮಿಸುವುದು
- ಸ್ವದೇಶಿ - ಸ್ಥಳೀಯ ವಿಚಾರಗಳು ಮತ್ತು ನಾವೀನ್ಯತೆಯನ್ನು ಪೋಷಿಸುವುದು
- ಸ್ಥಳೀಯರಿಗೆ ಧ್ವನಿ - ಸ್ಥಳೀಯ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಸಂಪನ್ಮೂಲಗಳನ್ನು ಉತ್ತೇಜಿಸುವುದು
- ಸಮೃದ್ಧಿ - ಸಮೃದ್ಧಿ ಮತ್ತು ಸುಸ್ಥಿರ ಬೆಳವಣಿಗೆಗೆ ಮಾರ್ಗಗಳನ್ನು ಸೃಷ್ಟಿಸುವುದು
ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲೆಗಳು ಈ ಆಂದೋಲನದಲ್ಲಿ ಪೂರ್ಣ ಮನಸು , ಚಿಂತನೆ, ಹೃದಯಪೂರ್ವಕ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಇದು ಕೇವಲ ಸ್ಪರ್ಧೆಯಲ್ಲ, ಆದರೆ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ.
ವಿದ್ಯಾರ್ಥಿ ನಾವೀನ್ಯಕಾರರನ್ನು ಪ್ರೋತ್ಸಾಹಿಸಲು ಮತ್ತು ಗುರುತಿಸಲು, ಶಾಲೆಗಳು ತಮ್ಮ ನಮೂದುಗಳನ್ನು ಫೋಟೋಗಳು ಮತ್ತು ವೀಡಿಯೊಗಳ ರೂಪದಲ್ಲಿ ಸಲ್ಲಿಸುತ್ತವೆ. ರಾಷ್ಟ್ರೀಯ ತಜ್ಞರ ಸಮಿತಿಯು ನಮೂದುಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಉನ್ನತ ವಿದ್ಯಾರ್ಥಿ ತಂಡಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಗುರುತಿಸುವಿಕೆ ಮೀರಿ, ಈ ಶಾಲೆಗಳು ಮತ್ತು ವಿದ್ಯಾರ್ಥಿಗಳು ತಮ್ಮ ನಾವೀನ್ಯತೆಗಳನ್ನು ಮತ್ತಷ್ಟು ಬಲಪಡಿಸಲು ಕಾರ್ಪೊರೇಟ್ ದತ್ತು, ಮಾರ್ಗದರ್ಶನ ಮತ್ತು ಸಂಪನ್ಮೂಲಗಳ ಮೂಲಕ ದೀರ್ಘಕಾಲೀನ ಬೆಂಬಲವನ್ನು ಪಡೆಯುತ್ತಾರೆ.
ಬಿಲ್ಡಥಾನ್ ನ ಪ್ರಮುಖ ಗುಣಲಕ್ಷಣಗಳು:
• ವಿಶ್ವದ ಅತಿದೊಡ್ಡ ಲೈವ್ ನಾವೀನ್ಯತೆ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಒಟ್ಟಾಗಿ ನಾವೀನ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ
• ರಾಷ್ಟ್ರೀಯ ಶಿಕ್ಷಣ ನೀತಿ (ನೆಪ್) 2020 ಕ್ಕೆ ಅನುಗುಣವಾಗಿ ಪ್ರಾಯೋಗಿಕ, ಅನುಭವದ ಕಲಿಕೆ
• ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಬುಡಕಟ್ಟು ಮತ್ತು ದೂರದ ಪ್ರದೇಶಗಳ ಮೇಲೆ ವಿಶೇಷ ಗಮನ ಹರಿಸಿ ಸಮಗ್ರ ಭಾಗವಹಿಸುವಿಕೆ
ವಿಕಸಿತ ಭಾರತ ಬಿಲ್ಡಥಾನ್ 2025 ಎಂಬುದು ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಲು, ನಿರ್ಭಯವಾಗಿ ನಾವೀನ್ಯತೆಯನ್ನು ಕಂಡುಕೊಳ್ಳಲು ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯಾಣಕ್ಕೆ ಕೊಡುಗೆ ನೀಡಲು ಸ್ಪಷ್ಟ ಕರೆಯಾಗಿದೆ. ಪ್ರತಿಯೊಂದು ಶಾಲೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಈ ಆಂದೋಲನದಲ್ಲಿ ಭಾಗವಹಿಸಲು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ನಾಳಿನ ನಾವೀನ್ಯಕಾರರಾಗಿ ತಮ್ಮ ಛಾಪು ಮೂಡಿಸಲು ಆಹ್ವಾನಿಸಲಾಗಿದೆ.
ಸಮತಾವಾದಿ / ವೇಳಾಪಟ್ಟಿ:
• 23ನೇ ಸೆಪ್ಟೆಂಬರ್ 2025: ವಿಕಸಿತ ಭಾರತ ಬಿಲ್ಡಥಾನ್ ಉದ್ಘಾಟನೆ
• 23ನೇ ಸೆಪ್ಟೆಂಬರ್ - 6ನೇ ಅಕ್ಟೋಬರ್ 2025: ನೋಂದಣಿಗಳು
• 6ನೇ ಅಕ್ಟೋಬರ್ - 12ನೇ ಅಕ್ಟೋಬರ್ 2025: ಪೂರ್ವಸಿದ್ಧತಾ ಚಟುವಟಿಕೆಗಳು
• 13ನೇ ಅಕ್ಟೋಬರ್ 2025: ಎಲ್ಲಾ ಶಾಲೆಗಳಲ್ಲಿ ರಾಷ್ಟ್ರವ್ಯಾಪಿ ಲೈವ್ ಬಿಲ್ಡಥಾನ್
• 14ನೇ ಅಕ್ಟೋಬರ್ 2025 - 31ನೇ ಅಕ್ಟೋಬರ್ 2025: ಶಾಲೆಗಳಿಂದ ನಮೂದುಗಳ ಸಲ್ಲಿಕೆ
• ನವೆಂಬರ್ 2025: ನಮೂದುಗಳ ಮೌಲ್ಯಮಾಪನ
• ಡಿಸೆಂಬರ್ 2025: ಉನ್ನತ ವಿಜೇತರ ಘೋಷಣೆ
ವಿಕಸಿತ ಭಾರತ ಬಿಲ್ಡಥಾನ್ 2025 ಕೇವಲ ಒಂದು ಕಾರ್ಯಕ್ರಮಕ್ಕಿಂತ ಹೆಚ್ಚಿನದಾಗಿದೆ - ಇದು ಯುವ ಮನಸ್ಸುಗಳನ್ನು ಬೆಳಗಿಸಲು, ನಾವೀನ್ಯತೆಯನ್ನು ಆಚರಿಸಲು ಮತ್ತು ಆತ್ಮನಿರ್ಭರ ಭಾರತದ ಚೈತನ್ಯವನ್ನು ಬಲಪಡಿಸಲು ಒಂದು ಚಳುವಳಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸವಾಲನ್ನು ಸ್ವೀಕರಿಸಲು ಮತ್ತು ಭಾರತದ ನಾವೀನ್ಯತೆಯ ಕಥೆಗೆ ಹೆಮ್ಮೆಯ ಕೊಡುಗೆದಾರನಾಗಲು ಈ ಕಾರ್ಯಕ್ರಮದ ಮೂಲಕ ಒತ್ತಾಯಿಸಲಾಗುತ್ತದೆ.
*****
(Release ID: 2174672)
Visitor Counter : 27