ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್‌ 26ರಂದು ಬಿಹಾರ ನಲ್ಲಿ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್‌ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ


ಸ್ವಯಂ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಈ ಯೋಜನೆ ಹೊಂದಿದೆ

ಯೋಜನೆಯಡಿ ರಾಜ್ಯದ ಪ್ರತಿ ಕುಟುಂಬದಿಂದ ಒಬ್ಬ ಮಹಿಳೆಗೆ ಆರ್ಥಿಕ ನೆರವು ನೀಡಲಾಗುವುದು

ಬಿಹಾರದಾದ್ಯಂತ 75 ಲಕ್ಷ  ಮಹಿಳೆಯರಿಗೆ ನೇರವಾಗಿ 7500 ಕೋಟಿ ರೂ. ವರ್ಗಾವಣೆ ಮಾಡಲಿರುವ ಪ್ರಧಾನಮಂತ್ರಿ

​​​​​​​ತಲಾ 10,000 ರೂ.ಗಳ ಆರಂಭಿಕ ವರ್ಗಾವಣೆಯೊಂದಿಗೆ, ನಂತರ 2 ಲಕ್ಷ  ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ಬೆಂಬಲದ ವ್ಯಾಪ್ತಿ

Posted On: 25 SEP 2025 6:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ 26ರಂದು ಬೆಳಗ್ಗೆ 11 ಗಂಟೆಗೆ ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್‌ ಯೋಜನೆಗೆ ವಿಡಿಯೊ ಕಾನಧಿರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಬಿಹಾರದಾದ್ಯಂತ 75 ಲಕ್ಷ ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ ತಲಾ 10,000 ರೂ.ಗಳನ್ನು ಒಟ್ಟು 7,500 ಕೋಟಿ ರೂ.ಗಳನ್ನು ನೇರವಾಗಿ ವರ್ಗಾಯಿಸಲಿದ್ದಾರೆ.

ಬಿಹಾರ ಸರ್ಕಾರದ ಉಪಕ್ರಮವಾದ ಈ ಯೋಜನೆಯು ಮಹಿಳೆಯರನ್ನು ಆತ್ಮನಿರ್ಭರನ್ನಾಗಿ ಮಾಡುವ ಮತ್ತು ಸ್ವಯಂ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ರಾಜ್ಯದ ಪ್ರತಿ ಕುಟುಂಬದಿಂದ ಒಬ್ಬ ಮಹಿಳೆಗೆ ಆರ್ಥಿಕ ನೆರವು ನೀಡುತ್ತದೆ. ಅವರು ತಮ್ಮ ಆಯ್ಕೆಯ ಉದ್ಯೋಗ ಅಥವಾ ಜೀವನೋಪಾಯ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ, ಆ ಮೂಲಕ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುತ್ತದೆ.

ಯೋಜನೆಯಡಿಯಲ್ಲಿ, ಪ್ರತಿ ಫಲಾನುಭವಿಯು ನೇರ ಲಾಭ ವರ್ಗಾವಣೆಯ ಮೂಲಕ 10,000 ರೂ.ಗಳ ಆರಂಭಿಕ ಅನುದಾನವನ್ನು ಪಡೆಯುತ್ತಾರೆ. ನಂತರದ ಹಂತಗಳಲ್ಲಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ಬೆಂಬಲದ ಸಾಧ್ಯತೆಯಿದೆ. ಈ ಸಹಾಯವನ್ನು ಕೃಷಿ, ಪಶುಸಂಗೋಪನೆ, ಕರಕುಶಲ ವಸ್ತುಗಳು, ಟೈಲರಿಂಗ್‌, ನೇಯ್ಗೆ ಮತ್ತು ಇತರ ಸಣ್ಣ ಪ್ರಮಾಣದ ಉದ್ಯಮಗಳು ಸೇರಿದಂತೆ ಫಲಾನುಭವಿಗಳ ಆಯ್ಕೆಯ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು.

ಈ ಯೋಜನೆಯು ಸಮುದಾಯ ಚಾಲಿತವಾಗಿರುತ್ತದೆ, ಇದರಲ್ಲಿ ಆರ್ಥಿಕ ಬೆಂಬಲದ ಜೊತೆಗೆ, ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಅವರ ಪ್ರಯತ್ನವನ್ನು ಬೆಂಬಲಿಸಲು ತರಬೇತಿ ನೀಡುತ್ತಾರೆ. ಅವರ ಉತ್ಪನ್ನಗಳ ಮಾರಾಟವನ್ನು ಬೆಂಬಲಿಸಲು, ರಾಜ್ಯದಲ್ಲಿ ಗ್ರಾಮೀಣ ಹಾತ್‌-ಬಜಾರ್‌ಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು.

ಮುಖ್ಯಮಂತ್ರಿ ಮಹಿಳಾ ರೋಜ್ಗಾರ್‌ ಯೋಜನೆಯ ಪ್ರಾರಂಭವು ರಾಜ್ಯದ ಅನೇಕ ಆಡಳಿತ ಹಂತಗಳಲ್ಲಿ- ಜಿಲ್ಲೆ, ಬ್ಲಾಕ್‌, ಕ್ಲಸ್ಟರ್‌ ಮತ್ತು ಗ್ರಾಮಗಳಲ್ಲಿ ರಾಜ್ಯವ್ಯಾಪಿ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. 1 ಕೋಟಿಗೂ ಹೆಚ್ಚು ಮಹಿಳೆಯರು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ.

****


(Release ID: 2171457) Visitor Counter : 14