ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದಲ್ಲಿ ದೇಶಾದ್ಯಂತ ಭಾರಿ ಭಾಗವಹಿಸುವಿಕೆ


ಅಭಿಯಾನದ ಅಡಿಯಲ್ಲಿ2.83 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆಸಲಾಗಿದ್ದು, ದೇಶಾದ್ಯಂತ 76 ಲಕ್ಷಕ್ಕೂ ಹೆಚ್ಚು ನಾಗರಿಕರು ಭೇಟಿ ನೀಡಿದ್ದಾರೆ

Posted On: 21 SEP 2025 6:53PM by PIB Bengaluru

2025ರ ಸೆಪ್ಟೆಂಬರ್‌ 17ರಂದು ಪ್ರಾರಂಭಿಸಲಾದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವು ಭಾರತದಾದ್ಯಂತ ಲಕ್ಷಾಂತರ ಮಹಿಳೆಯರು, ಮಕ್ಕಳು ಮತ್ತು ಕುಟುಂಬಗಳು ಸಮಗ್ರ ಆರೋಗ್ಯ ಸೇವೆಗಳಿಂದ ಪ್ರಯೋಜನ ಪಡೆಯುವುದರೊಂದಿಗೆ ಅಗಾಧ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ.

20ನೇ ಸೆಪ್ಟೆಂಬರ್‌ 2025ರ ಹೊತ್ತಿಗೆ, ಅಭಿಯಾನದ ಅಡಿಯಲ್ಲಿ2.83 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು (ತಪಾಸಣೆ ಮತ್ತು ವಿಶೇಷ ಶಿಬಿರಗಳು) ನಡೆಸಲಾಗಿದ್ದು, ದೇಶಾದ್ಯಂತ 76ಲಕ್ಷಕ್ಕೂ ಹೆಚ್ಚು ನಾಗರಿಕರು ಭೇಟಿ ನೀಡಿದ್ದಾರೆ.

ಪ್ರಮುಖ ಮುಖ್ಯಾಂಶಗಳು ಸೇರಿವೆ:

  • ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ: 37 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಅಧಿಕ ರಕ್ತದೊತ್ತಡ ಮತ್ತು 35 ಲಕ್ಷ  ಮಧುಮೇಹಕ್ಕಾಗಿ ತಪಾಸಣೆ ಮಾಡಲಾಗಿದೆ.
  • ಕ್ಯಾನ್ಸರ್‌ ತಪಾಸಣೆ: ಸ್ತನ ಕ್ಯಾನ್ಸರ್‌ಗಾಗಿ 9 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಮತ್ತು 4.7 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ ಮಾಡಲಾಗಿದೆ . ಬಾಯಿಯ ಕ್ಯಾನ್ಸರ್‌ ತಪಾಸಣೆಯು 16 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡಿದೆ.
  • ತಾಯಿ ಮತ್ತು ಮಕ್ಕಳ ಆರೋಗ್ಯ: 18 ಲಕ್ಷಕ್ಕೂ ಹೆಚ್ಚು ಪ್ರಸವಪೂರ್ವ ತಪಾಸಣೆಗಳನ್ನು ನಡೆಸಲಾಗಿದ್ದು, 51 ಲಕ್ಷಕ್ಕೂ ಹೆಚ್ಚು ಮಕ್ಕಳು ಜೀವ ಉಳಿಸುವ ಲಸಿಕೆಗಳನ್ನು ಪಡೆದಿದ್ದಾರೆ.
  • ರಕ್ತಹೀನತೆ ಮತ್ತು ಪೌಷ್ಠಿಕಾಂಶ: ರಕ್ತಹೀನತೆಗಾಗಿ 15 ಲಕ್ಷಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ. ಪೌಷ್ಠಿಕಾಂಶ ಸಮಾಲೋಚನೆ ಕಾರ್ಯಕ್ರಮಗಳು ಲಕ್ಷಾಂತರ ಕುಟುಂಬಗಳನ್ನು ತಲುಪಿದವು.
  • ಕ್ಷಯರೋಗ ಮತ್ತು ಕುಡಗೋಲು ಕೋಶ ತಪಾಸಣೆ: 22 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಕ್ಷಯರೋಗ ಮತ್ತು 2.3 ಲಕ್ಷ  ಜನರನ್ನು ಕುಡಗೋಲು ಕೋಶ ರೋಗಕ್ಕಾಗಿ ಪರೀಕ್ಷಿಸಲಾಗಿದೆ.
  • ರಕ್ತದಾನ ಮತ್ತು ಪಿ.ಎಂ.-ಜೆ.ಎ.ವೈ: 1.6 ಲಕ್ಷಕ್ಕೂ ಹೆಚ್ಚು ರಕ್ತದಾನಿಗಳು ನೋಂದಾಯಿಸಿಕೊಂಡಿದ್ದಾರೆ, ಜೊತೆಗೆ 4.7 ಲಕ್ಷ  ಹೊಸ ಆಯುಷ್ಮಾನ್‌ / ಪಿಎಂ-ಜೆಎವೈ ಕಾರ್ಡ್‌ಗಳನ್ನು ನೀಡಲಾಗಿದೆ.

ಆಯುಷ್ಮಾನ್‌ ಆರೋಗ್ಯ ಮಂದಿರಗಳು, ಏಮ್ಸ್, ಇತರ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು (ಐ.ಎನ್‌.ಐಗಳು), ತೃತೀಯ ಆರೈಕೆ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳು ಸೇರಿದಂತೆ ಎನ್‌ಎಚ್‌ಎಂ ಆರೋಗ್ಯ ಶಿಬಿರಗಳ ವ್ಯಾಪಕ ಜಾಲದ ಜೊತೆಗೆ ಈ ರಾಷ್ಟ್ರೀಯ ಅಭಿಯಾನದಲ್ಲಿ ಮುಂಚೂಣಿಯಲ್ಲಿವೆ. ಈ ಸೌಲಭ್ಯಗಳು ಸಾವಿರಾರು ವಿಶೇಷ ಶಿಬಿರಗಳನ್ನು ಆಯೋಜಿಸಿವೆ, ಫಲಾನುಭವಿಗಳಿಗೆ ಸುಧಾರಿತ ತಪಾಸಣೆ, ರೋಗನಿರ್ಣಯ, ಸಮಾಲೋಚನೆ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತವೆ, ಆ ಮೂಲಕ ರಾಜ್ಯ ಸರ್ಕಾರಗಳು ಮತ್ತು ಸಮುದಾಯ ಮಟ್ಟದ ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳಿಗೆ ಪೂರಕವಾಗಿವೆ.

ಕೇಂದ್ರ ಸರ್ಕಾರಿ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾರೆಯಾಗಿ 3,410 ಸ್ಕ್ರೀನಿಂಗ್‌(ತಪಾಸಣೆ) ಮತ್ತು ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು, 5.8 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಪ್ರಯೋಜನವನ್ನು ನೀಡಿವೆ.

ಪ್ರಾದೇಶಿಕ ಮುಖ್ಯಾಂಶಗಳು

ಅಭಿಯಾನವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಾಂದೋಲನವಾಗಿ ಆಚರಿಸಲಾಗುತ್ತಿದೆ:

  • ದೆಹಲಿ: ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆ, ಸಿ.ಜಿ.ಎಚ್‌.ಎಸ್‌ ಆರ್‌.ಕೆ.ಪುರಂ ಮತ್ತು ಆಯುಷ್ಮಾನ್‌ ಆರೋಗ್ಯ ಮಂದಿರಗಳಲ್ಲಿ ಮೆಗಾ ಆರೋಗ್ಯ ಶಿಬಿರಗಳು ಕ್ಷಯರೋಗ, ಎನ್‌.ಸಿ.ಡಿ, ಮಾನಸಿಕ ಆರೋಗ್ಯ ಮತ್ತು ತಾಯಿಯ ತಪಾಸಣೆಯನ್ನು ನೀಡಿವೆ.
  • ಗುಜರಾತ್‌: ದಾಹೋದ್‌, ಕಚ್‌ ಮತ್ತು ನವಸಾರಿಯಲ್ಲಿ ನಡೆದ ಶಿಬಿರಗಳು ಕ್ಯಾನ್ಸರ್‌ ತಪಾಸಣೆ ಮತ್ತು ಎನ್‌.ಸಿ.ಡಿ ಆರೈಕೆಯನ್ನು ಒದಗಿಸಿವೆ, ಇದು 42,000ಕ್ಕೂ ಹೆಚ್ಚು ಮಹಿಳೆಯರಿಗೆ ನೇರವಾಗಿ ಪ್ರಯೋಜನವನ್ನು ನೀಡಿದೆ.
  • ಜಮ್ಮು ಮತ್ತು ಕಾಶ್ಮೀರ: ಶ್ರೀನಗರ ಮತ್ತು ಆರ್‌.ಎಸ್‌.ಪುರದಲ್ಲಿ ನಡೆದ ಬೃಹತ್‌ ಆರೋಗ್ಯ ಶಿಬಿರಗಳಲ್ಲಿ ಸೇವಾ ಪಾಕ್ಷಿಕದ ಅಡಿಯಲ್ಲಿದೊಡ್ಡ ಸಮುದಾಯದ ಭಾಗವಹಿಸುವಿಕೆ ಕಂಡುಬಂದಿತು.
  • ಈಶಾನ್ಯ: ಅರುಣಾಚಲದ ಪಾಪುಮ್‌ ಪಾರೆಯಿಂದ ಮಣಿಪುರದ ಇಂಫಾಲದವರೆಗೆ, ಅಭಿಯಾನವು ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಅಭಿಯಾನಗಳೊಂದಿಗೆ ದೂರದ ಬುಡಕಟ್ಟು ಸಮುದಾಯಗಳನ್ನು ತಲುಪಿದೆ.
  • ಗೋವಾ ಮತ್ತು ಮಹಾರಾಷ್ಟ್ರ: ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಪಂಚಾಯತ್‌ಗಳು ಸಕ್ರಿಯ ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ರಾರ‍ಯಲಿಗಳು(ಜಾಥಾಗಳು), ತಪಾಸಣೆ ಶಿಬಿರಗಳು ಮತ್ತು ರಕ್ತದಾನ ಅಭಿಯಾನಗಳನ್ನು ಆಯೋಜಿಸಿದ್ದವು.
  • ಬಿಹಾರ ಮತ್ತು ಉತ್ತರ ಪ್ರದೇಶ: ಜಿಲ್ಲಾ ಆಸ್ಪತ್ರೆಗಳು ಮತ್ತು ಆಯುಷ್ಮಾನ್‌ ಆರೋಗ್ಯ ಮಂದಿರಗಳಲ್ಲಿಎನ್‌.ಸಿ.ಡಿ ತಪಾಸಣೆ ಮತ್ತು ತಾಯಿಯ ಆರೋಗ್ಯ ಸೇವೆಗಳಿಂದ ಸಾವಿರಾರು ಜನರು ಪ್ರಯೋಜನ ಪಡೆದಿದ್ದಾರೆ.
  • ಲಡಾಖ್‌: ದೂರದ ಲಿಂಗ್‌ಶೆಡ್‌ ಗ್ರಾಮದ ಶಿಬಿರಗಳು ಸಾಮಾನ್ಯ ಸಮಾಲೋಚನೆಗಳು, ಕಣ್ಣಿನ ಪೊರೆ ತಪಾಸಣೆ ಮತ್ತು ಋುತುಚಕ್ರದ ನೈರ್ಮಲ್ಯ ಜಾಗೃತಿ ಅಧಿವೇಶನಗಳನ್ನು ಒದಗಿಸಿದವು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆರೋಗ್ಯ ಕಾರ್ಯಕರ್ತರು, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಮುದಾಯ ಸಂಸ್ಥೆಗಳ ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸುತ್ತದೆ, ಅವರ ಸಕ್ರಿಯ ಭಾಗವಹಿಸುವಿಕೆಯು ಈ ಅಭಿಯಾನದ ಯಶಸ್ಸನ್ನು ಮುನ್ನಡೆಸುತ್ತಿದೆ. 2ನೇ ಅಕ್ಟೋಬರ್‌ 2025 ರವರೆಗೆ ನಿರಂತರ ಸಾಮೂಹಿಕ ಪ್ರಯತ್ನಗಳೊಂದಿಗೆ, ಅಭಿಯಾನವು "ಸ್ವಸ್ಥ ನಾರಿ, ಸಶಕ್ತ ಪರಿವಾರ" - ಆರೋಗ್ಯಕರ ಮಹಿಳೆಯರು, ಬಲವಾದ ಕುಟುಂಬ ಮತ್ತು ಚೇತರಿಸಿಕೊಳ್ಳುವ ರಾಷ್ಟ್ರವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

 

*****
 


(Release ID: 2169317)