ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಿಂಗ್ ಚಾರ್ಲ್ಸ್ III ಅವರು ಉಡುಗೊರೆಯಾಗಿ ನೀಡಿದ ಕದಂಬ ಸಸಿಯನ್ನು ತಮ್ಮ ನಿವಾಸದಲ್ಲಿ ನೆಟ್ಟ ಪ್ರಧಾನಮಂತ್ರಿ

Posted On: 19 SEP 2025 5:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ತಮ್ಮ ನಿವಾಸವಾದ 7, ಲೋಕ ಕಲ್ಯಾಣ್ ಮಾರ್ಗ್‌ನಲ್ಲಿ ಕದಂಬ ಸಸಿಯನ್ನು ನೆಟ್ಟರು, ಇದನ್ನು ಘನತೆವೆತ್ತ ರಾಜ ಚಾರ್ಲ್ಸ್ III ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ. "ಅವರು ಪರಿಸರ ಮತ್ತು ಸುಸ್ಥಿರತೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ, ಈ ವಿಷಯವು ನಮ್ಮ ಚರ್ಚೆಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ" ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

Xನ ಪೋಸ್ಟ್ ನಲ್ಲಿ ಶ್ರೀ ಮೋದಿಯವರು:

"ಇಂದು ಬೆಳಿಗ್ಗೆ, 7, ಲೋಕ ಕಲ್ಯಾಣ್ ಮಾರ್ಗ್‌ನಲ್ಲಿ ಕದಂಬ ಸಸಿಯನ್ನು ನೆಡಲಾಯಿತು, ಈ ಗಿಡವನ್ನು ಮಹಾರಾಜ ಚಾರ್ಲ್ಸ್ III ರವರು ಉಡುಗೊರೆಯಾಗಿ ನೀಡಿದ್ದಾರೆ. ಅವರು ಪರಿಸರ ಮತ್ತು ಸುಸ್ಥಿರತೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ, ಈ ವಿಷಯವು ನಮ್ಮ ಚರ್ಚೆಗಳಲ್ಲಿಯೂ ಕಂಡುಬರುತ್ತದೆ."

@RoyalFamily

 

*****


(Release ID: 2168599)