ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಗುರು ಗೋಬಿಂದ್ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಅತ್ಯಂತ ಪುಣ್ಯಮಯ ಮತ್ತು ಅಮೂಲ್ಯವಾದ ಪವಿತ್ರ 'ಜೋರೆ ಸಾಹಿಬ್' ನ ಸುರಕ್ಷತೆ ಮತ್ತು ಸೂಕ್ತ ಪ್ರದರ್ಶನಕ್ಕೆ ಸಂಬಂಧಿಸಿದ ಶಿಫಾರಸ್ಸು ಸಲ್ಲಿಸಿರುವ ಸಿಖ್ ನಿಯೋಗದ ಗಣ್ಯರು ಮತ್ತು ಕೌಶಲ್ಯಯುತ ಸದಸ್ಯರಿಗೆ ಪ್ರಧಾನಮಂತ್ರಿ ಸ್ವಾಗತ
Posted On:
19 SEP 2025 4:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಖ್ ನಿಯೋಗದ ಗಣ್ಯರು ಮತ್ತು ಕೌಶಲ್ಯಯುತ ಸದಸ್ಯರನ್ನು ಬರಮಾಡಿಕೊಂಡರು. ಅವರು ಶ್ರೀ ಗುರು ಗೋವಿಂದ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಅತ್ಯಂತ ಪುಣ್ಯ ಮತ್ತು ಅಮೂಲ್ಯವಾದ ಪವಿತ್ರ 'ಜೋರ್ ಸಾಹಿಬ್' ನ ಸುರಕ್ಷತೆ ಮತ್ತು ಸೂಕ್ತ ಪ್ರದರ್ಶನಕ್ಕೆ ಸಂಬಂಧಿಸಿದಂತೆ ತಮ್ಮ ಶಿಫಾರಸುಗಳನ್ನು ಸಲ್ಲಿಸಿದರು. ಸಿಖ್ ಇತಿಹಾಸದ ಭವ್ಯ ಭಾಗವಾಗಿರುವ 'ಜೋರ್ ಸಾಹಿಬ್' ಆಧ್ಯಾತ್ಮಿಕವಾಗಿ ಪ್ರಮುಖವಾಗಿರುವಷ್ಟೇ ನಮ್ಮ ರಾಷ್ಟ್ರದ ಸಾಂಸ್ಕೃತಿಕ ಚೈತನ್ಯದ ಅಂಗವಾಗಿರುವ ಪವಿತ್ರ ಅವಶೇಷಗಳು ಸಹ ಮಹತ್ವದ್ದಾಗಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. "ಶ್ರೀ ಗುರು ಗೋವಿಂದ ಸಿಂಗ್ ಅವರು ತೋರಿದ ಶೌರ್ಯ, ಸದಾಚಾರ, ನ್ಯಾಯ ಮತ್ತು ಸಾಮಾಜಿಕ ಸಾಮರಸ್ಯದ ಮಾರ್ಗವನ್ನು ಅನುಸರಿಸಲು ಪವಿತ್ರ ಅವಶೇಷಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ" ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"ಶ್ರೀ ಗುರು ಗೋಬಿಂದ್ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಅತ್ಯಂತ ಪುಣ್ಯಮಯ ಮತ್ತು ಅಮೂಲ್ಯವಾದ ಪವಿತ್ರ 'ಜೋರ್ ಸಾಹಿಬ್' ನ ಸುರಕ್ಷತೆ ಮತ್ತು ಸೂಕ್ತ ಪ್ರದರ್ಶನಕ್ಕೆ ಸಂಬಂಧಿಸಿದಂತೆ ತಮ್ಮ ಶಿಫಾರಸುಗಳನ್ನು ಸಲ್ಲಿಸಿದ ಸಿಖ್ ನಿಯೋಗದ ಗಣ್ಯರು ಮತ್ತು ಕೌಶಲ್ಯಯುತ ಸದಸ್ಯರನ್ನು ಬರಮಾಡಿಕೊಂಡು ನನಗೆ ಅತೀವ ಸಂತೋಷವಾಯಿತು.
ನಮ್ಮ ರಾಷ್ಟ್ರದ ಸಾಂಸ್ಕೃತಿಕ ಚೈತನ್ಯದ ಅಂಗವಾಗಿರುವ ಪವಿತ್ರ ಅವಶೇಷಗಳು ವೈಭವಯುತ ಸಿಖ್ ಇತಿಹಾಸದ ಭಾಗವಾದ 'ಜೋರ್ ಸಾಹಿಬ್' ನಷ್ಟೇ ಆಧ್ಯಾತ್ಮಿಕವಾಗಿ ಪ್ರಮುಖವಾಗಿವೆ ಮತ್ತು ಮಹತ್ವದ್ದಾಗಿವೆ.
ಶ್ರೀ ಗುರು ಗೋವಿಂದ ಸಿಂಗ್ ಅವರು ತೋರಿದ ಶೌರ್ಯ, ಸದಾಚಾರ, ನ್ಯಾಯ ಮತ್ತು ಸಾಮಾಜಿಕ ಸಾಮರಸ್ಯದ ಮಾರ್ಗವನ್ನು ಅನುಸರಿಸಲು ಭವಿಷ್ಯದ ಪೀಳಿಗೆಗೆ ಪವಿತ್ರ ಅವಶೇಷಗಳು ಸ್ಫೂರ್ತಿ ನೀಡುತ್ತಲಿರಲಿವೆ."
*****
(Release ID: 2168561)
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam