ಪ್ರಧಾನ ಮಂತ್ರಿಯವರ ಕಛೇರಿ
ಹಿಂದಿ ದಿವಸದ ಶುಭಾಶಯ ಕೋರಿದ ಪ್ರಧಾನಮಂತ್ರಿ, ಎಲ್ಲಾ ಭಾರತೀಯ ಭಾಷೆಗಳ ಸಮೃದ್ಧಿಗೆ ಕರೆ
Posted On:
14 SEP 2025 11:00AM by PIB Bengaluru
ಹಿಂದಿ ದಿವಸದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು. ಭಾರತದ ಅಸ್ಮಿತೆ ಮತ್ತು ಮೌಲ್ಯಗಳ ಜೀವಂತ ಪರಂಪರೆಯಾಗಿ ಹಿಂದಿಯ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಮಹತ್ವವನ್ನು ಒತ್ತಿ ಹೇಳಿದರು. ಎಲ್ಲಾ ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸಲು ಮತ್ತು ಅವುಗಳನ್ನು ಹೆಮ್ಮೆಯಿಂದ ಮುಂದಿನ ಪೀಳಿಗೆಗೆ ತಲುಪಿಸಲು ಸಾಮೂಹಿಕವಾಗಿ ಕೆಲಸ ಮಾಡುವಂತೆ ಅವರು ನಾಗರಿಕರಿಗೆ ಕರೆ ನೀಡಿದರು.
ಈ ಕುರಿತು ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ನಿಮ್ಮೆಲ್ಲರಿಗೂ ಹಿಂದಿ ದಿವಸದ ಶುಭಾಶಯಗಳು. ಹಿಂದಿ ಕೇವಲ ಸಂವಹನ ಮಾಧ್ಯಮವಲ್ಲ, ನಮ್ಮ ಅಸ್ಮಿತೆ ಮತ್ತು ಮೌಲ್ಯಗಳ ಜೀವಂತ ಪರಂಪರೆಯಾಗಿದೆ. ಈ ಸಂದರ್ಭದಲ್ಲಿ, ಹಿಂದಿ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸಲು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ರವಾನಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ವಿಶ್ವ ವೇದಿಕೆಯಲ್ಲಿ ಹಿಂದಿಯ ಬಗ್ಗೆ ಹೆಚ್ಚುತ್ತಿರುವ ಗೌರವವು ನಮ್ಮೆಲ್ಲರಿಗೂ ಹೆಮ್ಮೆ ಮತ್ತು ಸ್ಫೂರ್ತಿಯ ವಿಷಯವಾಗಿದೆ.”
****
(Release ID: 2166460)
Visitor Counter : 2