ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ.ಬಿ.ವೈ.ಎಲ್.ಡಿ-VBYLD) ಯುವ ನೇತೃತ್ವದ ಪ್ರಜಾಪ್ರಭುತ್ವಕ್ಕೆ ನೈಜ ಉದಾಹರಣೆಯಾಗಿದೆ, ಇದು ಚಿಂತನಾ ದೃಷ್ಟಿಯನ್ನು ಧ್ವನಿಯಾಗಿ ಮತ್ತು ಧ್ವನಿಯನ್ನು ಪರಿಣಾಮವಾಗಿ ಪರಿವರ್ತಿಸುತ್ತದೆ ಎಂದು ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ
ವಿ.ಬಿ.ವೈ.ಎಲ್.ಡಿ ಯುವ ಭಾರತೀಯರಿಗೆ ವೇದಿಕೆಯನ್ನು ನೀಡುತ್ತದೆ, ಅಲ್ಲಿ ಅವರು ತಮ್ಮ ಆಲೋಚನೆಗಳನ್ನು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಸ್ತುತಪಡಿಸಬಹುದು -ಡಾ. ಮಾಂಡವಿಯಾ
ವಿ.ಬಿ.ವೈ.ಎಲ್.ಡಿ 2026, ಬಹು-ಹಂತದ, ಪ್ಯಾನ್-ಇಂಡಿಯಾ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಳ್ಳಲಿದೆ; 3,000 ಯುವ ಭಾಗವಹಿಸುವವರ ವೈವಿಧ್ಯಮಯ ಸಮೂಹವನ್ನು ಒಟ್ಟುಗೂಡಿಸುವ ಗ್ರ್ಯಾಂಡ್ ಫಿನಾಲೆ 2026ರ ಜನವರಿ 10-12ರವರೆಗೆ ನವದೆಹಲಿಯಲ್ಲಿ ನಡೆಯಲಿದೆ
ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ವಿಕಸಿತ ಭಾರತ ಯುವ ನಾಯಕರ ಸಂವಾದ (2026)ದ ಎರಡನೇ ಆವೃತ್ತಿಯನ್ನು ಘೋಷಿಸಿದರು
ವಿ.ಬಿ.ವೈ.ಎಲ್.ಡಿ ವಿಕಸಿತ ಭಾರತ ಟ್ರ್ಯಾಕ್ ನ ಮೊದಲ ಹಂತವಾಗಿ ವಿಕಸಿತ ಭಾರತ ರಸಪ್ರಶ್ನೆಯನ್ನು ಡಾ. ಮಾಂಡವಿಯಾ ಪ್ರಾರಂಭಿಸಿದರು; ರಸಪ್ರಶ್ನೆ ಮೈ ಭಾರತ್ ವೇದಿಕೆಯಲ್ಲಿ ನೇರಪ್ರಸಾರದಲ್ಲಿದೆ
Posted On:
13 SEP 2025 3:00PM by PIB Bengaluru
ಸ್ವಾತಂತ್ರ್ಯ ದಿನದಂದು ಗೌರವಾನ್ವಿತ ಪ್ರಧಾನಮಂತ್ರಿ ರಾಜಕೀಯ ಹಿನ್ನೆಲೆ ಇಲ್ಲದ 1 ಲಕ್ಷ ಯುವಜನರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ನೀಡಿದ ಕರೆಯಿಂದ ಪ್ರೇರಿತರಾಗಿ, ರಾಷ್ಟ್ರೀಯ ಯುವ ಉತ್ಸವವನ್ನು 2025ರಲ್ಲಿ ಮೊದಲ ಆವೃತ್ತಿಯೊಂದಿಗೆ ವಿಕಸಿತ ಭಾರತ ಯುವ ನಾಯಕರ ಸಂವಾದ (VBYLD) ಎಂದು ಮರುರೂಪಿಸಲಾಯಿತು. ಸಾಂಪ್ರದಾಯಿಕ ರಾಷ್ಟ್ರೀಯ ಯುವ ಉತ್ಸವದ 25 ವರ್ಷಗಳ ಹಳೆಯ ಸಂಪ್ರದಾಯವನ್ನು ಮುರಿದು, 15-29 ವರ್ಷ ವಯಸ್ಸಿನ ಯುವಜನರಿಗೆ ವಿಕಸಿತ ಭಾರತಕ್ಕಾಗಿ ತಮ್ಮ ಆಲೋಚನೆಗಳನ್ನು ವಾಸ್ತವಕ್ಕೆ ತರಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸುವ ಮೂಲಕ ಯುವ ನಾಯಕತ್ವವನ್ನು ಬೆಳೆಸುವ ಗುರಿಯನ್ನು ಇದು ಹೊಂದಿದೆ. ಯುವಜನರು ವಿಕಸಿತ ಭಾರತಕ್ಕಾಗಿ ತಮ್ಮ ಆಲೋಚನೆಗಳನ್ನು ನೇರವಾಗಿ ಗೌರವಾನ್ವಿತ ಪ್ರಧಾನಮಂತ್ರಿ ಅವರಿಗೆ ಪ್ರಸ್ತುತಪಡಿಸಲು ಸಮಗ್ರ ಮತ್ತು ಕ್ರಿಯಾತ್ಮಕ ವೇದಿಕೆಯನ್ನು ರಚಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.

ವಿ.ಬಿ.ಎಲ್. ಡಿ. (VBYLD) 2025 - ಮೊದಲ ಆವೃತ್ತಿ - ಒಂದು ಐತಿಹಾಸಿಕ ಆರಂಭ:
2025ರಲ್ಲಿ ವಿ.ಬಿ.ಎಲ್.ಡಿ.ಯ ಉದ್ಘಾಟನಾ ಆವೃತ್ತಿಯು ಯುವ ಭಾಗವಹಿಸುವಿಕೆ ಮತ್ತು ನಾಯಕತ್ವದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿತು. ಭಾರತದಾದ್ಯಂತ ಸುಮಾರು 30 ಲಕ್ಷ ಯುವಜನರು ವಿಕಸಿತ ಭಾರತ ಸವಾಲಿನ ಮೂಲಕ ತೊಡಗಿಸಿಕೊಂಡಿದ್ದರೆ, ಎರಡು ಲಕ್ಷಕ್ಕೂ ಹೆಚ್ಚು ಪ್ರಬಂಧಗಳನ್ನು ಸಲ್ಲಿಸಲಾಗಿತ್ತು ಮತ್ತು 9,000 ಯುವಜನರು ರಾಜ್ಯ ಚಾಂಪಿಯನ್ ಶಿಪ್ ಗಳಲ್ಲಿ ತಮ್ಮ ಚಿಂತನಾ ದೃಷ್ಟಿಕೋನವನ್ನು ಪ್ರದರ್ಶಿಸಿದ್ದರು. ಈ ಪ್ರಯಾಣವು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ಸಮಾರೋಪಗೊಂಡಿತು, ಅಲ್ಲಿ 3,000 ಯುವ ಪರಿವರ್ತನಕಾರರು ಭಾಗವಹಿಸಿದ್ದರು, ಇದರಲ್ಲಿ 1,500 ವಿಕಸಿತ ಭಾರತ ಚಾಲೆಂಜ್ ಟ್ರ್ಯಾಕ್ ನಿಂದ, 1,000 ಸಾಂಸ್ಕೃತಿಕ ಟ್ರ್ಯಾಕ್ ನಿಂದ ಮತ್ತು 500 ಪಾತ್‌ಬ್ರೇಕರ್ಸ್ ಗಳು (ವಿವಿಧ ಕ್ಷೇತ್ರಗಳಲ್ಲಿ ಯುವ ಐಕಾನ್ ಗಳು ಮತ್ತು ಸಾಧಕರನ್ನು ಪ್ರತಿನಿಧಿಸುತ್ತಾರೆ) ಸೇರಿದ್ದಾರೆ.
ಈ ಕಾರ್ಯಕ್ರಮವು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಸ್ಥಿತಿಯಿಂದ ಹೆಚ್ಚು ಪರಿಣಾಮಕಾರಿಯಾಯಿತು, ಅವರು ಸುಮಾರು ಆರು ಗಂಟೆಗಳ ಕಾಲ ಯುವಜನರೊಂದಿಗೆ ಸಂವಾದ ನಡೆಸಿದರು, ವಿಕಸಿತ ಭಾರತವನ್ನು ಸಾಧಿಸಲು ಅವರ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಧೋರಣೆಗಳನ್ನು ಆಲಿಸಿದರು ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳಲು ಅವರನ್ನು ಪ್ರೇರೇಪಿಸಿದರು. ಅವರೊಂದಿಗೆ ಶ್ರೀ ಅಮಿತಾಭ್ ಕಾಂತ್, ಮಾಜಿ ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್, ವ್ಯಾಪಾರೋದ್ಯಮದ ನಾಯಕರಾದ ಶ್ರೀ ಆನಂದ್ ಮಹೀಂದ್ರಾ ಮತ್ತು ಶ್ರೀ ರಿತೇಶ್ ಅಗರ್ವಾಲ್, ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಮತ್ತು ಹಿರಿಯ ಪತ್ರಕರ್ತೆ ಶ್ರೀಮತಿ ಪಾಲ್ಕಿ ಶರ್ಮಾ ಉಪಾಧ್ಯಾಯ ಅವರಂತಹ ಗಣ್ಯರು ಭಾಗವಹಿಸಿದ್ದರು, ಅವರು ವಿಕಸಿತ ಭಾರತಕ್ಕಾಗಿ ತಮ್ಮ ಒಳನೋಟಗಳು ಮತ್ತು ದೃಷ್ಟಿಕೋನದಿಂದ ಸಭೆಗೆ ಸ್ಫೂರ್ತಿ ತುಂಬಿದರು.
ವಿ.ಬಿ.ಎಲ್. ಡಿ. 2026 ರ ಆರಂಭ:
ಮೊದಲ ಆವೃತ್ತಿಯ ಯಶಸ್ಸಿನ ಮೇಲೆ ಅವಲಂಬಿಸಿ, ವಿಕಸಿತ ಭಾರತ ಯುವ ನಾಯಕರ ಸಂವಾದ - 2026 (VBYLD - 2026) ನ ಎರಡನೇ ಆವೃತ್ತಿಯು ಹೆಚ್ಚಿನ ನೋಂದಣಿಗಳು, ಹೊಸ ಟ್ರ್ಯಾಕ್ ಗಳ ಸೇರ್ಪಡೆ, ವ್ಯಾಪಕವಾದ ಸಂಪರ್ಕ ಮತ್ತು ಹೆಚ್ಚು ಮಹತ್ವಾಕಾಂಕ್ಷೆಯ ಉದ್ದೇಶಗಳನ್ನು ಗುರಿಯಾಗಿರಿಸಿಕೊಂಡಿದೆ. ಎರಡನೇ ಆವೃತ್ತಿಯನ್ನು ಘೋಷಿಸುವ ಪತ್ರಿಕಾಗೋಷ್ಠಿಯನ್ನು 2025ರ ಸೆಪ್ಟೆಂಬರ್ 13 ರಂದು ಹೊಸದಿಲ್ಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸಲಾಯಿತು, ಅಲ್ಲಿ ಗೌರವಾನ್ವಿತ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ವಿವರ ನೀಡುವ ಸಮಯದಲ್ಲಿ, ಗೌರವಾನ್ವಿತ ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯ ಅವರು, ಯುವ ಭಾರತೀಯರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವುದಲ್ಲದೆ, ಗೌರವಾನ್ವಿತ ಪ್ರಧಾನಮಂತ್ರಿ ಅವರಿಗೆ ನೇರವಾಗಿ ಪ್ರಸ್ತುತಪಡಿಸುವ ಏಕೈಕ ವೇದಿಕೆ ವಿ.ಬಿ.ವೈ.ಎಲ್.ಡಿ ಎಂದು ಒತ್ತಿ ಹೇಳಿದರು. ಯುವಜನರ ನೇತೃತ್ವದ ಪ್ರಜಾಪ್ರಭುತ್ವಕ್ಕೆ ಇದು ನೈಜ ಉದಾಹರಣೆ, ಜೊತೆಗೆ ಇದು, ಚಿಂತನೆಯನ್ನು ಧ್ವನಿಯಾಗಿ ಮತ್ತು ಧ್ವನಿಯನ್ನು ಪರಿಣಾಮವಾಗಿ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು.
ಭಾರತದ ಭವಿಷ್ಯಕ್ಕಾಗಿ ನೀಲನಕ್ಷೆಯನ್ನು ಸಿದ್ಧಪಡಿಸಲು ಯುವಜನರ ಸಾಮರ್ಥ್ಯ ಮತ್ತು ಶಕ್ತಿಯನ್ನು ಕ್ರೋಢೀಕರಿಸುವ ಒಂದು ವೇದಿಕೆ ವಿ.ಬಿ.ವೈ.ಎಲ್.ಡಿ ಎಂದು ಅವರು ಹೇಳಿದರು. ಇಂದಿನ ಯುವಜನರು ದೇಶದ ಭವಿಷ್ಯ ಮಾತ್ರವಲ್ಲ, ರಾಷ್ಟ್ರನಿರ್ಮಾಪಕರೂ ಆಗಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ವಿ.ಬಿ.ವೈ.ಎಲ್.ಡಿ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ಬದಲು ಅದು ದೇಶಾದ್ಯಂತ ಯುವಜನರನ್ನು ಒಟ್ಟುಗೂಡಿಸುವ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು, ಸಮುದಾಯಗಳನ್ನು ಬಲಪಡಿಸಲು ಮತ್ತು ನಿಜವಾದ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಸಾಧಿಸಲು ಅವರ ನಾಯಕತ್ವವನ್ನು ಪೋಷಿಸುವ ನಿರಂತರ ಚಲನಶೀಲ ವೇದಿಕೆಯಾಗಿದೆ ಎಂದೂ ಅವರು ಹೇಳಿದರು.
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಪಲ್ಲವಿ ಜೈನ್ ಗೋವಿಲ್ ಅವರು ವಿ.ಬಿ.ವೈ.ಎಲ್.ಡಿ - 2026ರ ಚೌಕಟ್ಟನ್ನು ವಿವರಿಸಿದರು. ಆನ್ಲೈನ್ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳಿಂದ ಹಿಡಿದು ರಾಜ್ಯ ಮಟ್ಟದ ಪ್ರಸ್ತುತಿಗಳವರೆಗೆ ಸ್ಪರ್ಧೆಯ ಮೂಲಕ ಭಾಗವಹಿಸುವವರು ಹೇಗೆ ಪ್ರಗತಿ ಸಾಧಿಸುತ್ತಾರೆ ಎಂಬುದನ್ನು ಅವರು ವಿವರಿಸಿದರು, ಇದು ದಿಲ್ಲಿಯಲ್ಲಿ ರಾಷ್ಟ್ರೀಯ ಸುತ್ತಿನಲ್ಲಿ ಕೊನೆಗೊಳ್ಳುತ್ತದೆ. ವಿ.ಬಿ.ವೈ.ಎಲ್.ಡಿ - 2026 ರ ಎರಡನೇ ಆವೃತ್ತಿಯಲ್ಲಿ ಹೊಸ ಟ್ರ್ಯಾಕ್ಗಳ ಸೇರ್ಪಡೆಯನ್ನು ಅವರು ಉಲ್ಲೇಖಿಸಿದರು, ಇದು ಜನವರಿ 2026 ರಲ್ಲಿ ರಾಷ್ಟ್ರೀಯ ಯುವ ಉತ್ಸವಕ್ಕೆ ಕಾರಣವಾಗುವ ಪ್ರಮುಖ ಮೈಲಿಗಲ್ಲುಗಳನ್ನು ಎತ್ತಿ ತೋರಿಸುತ್ತದೆ.
ವಿ.ಬಿ.ವೈ.ಎಲ್.ಡಿ - 2026 ರಲ್ಲಿ ಪ್ರಮುಖ ಸೇರ್ಪಡೆಗಳು:
ವಿ.ಬಿ.ವೈ.ಎಲ್.ಡಿ - 2026 ರ ಎರಡನೇ ಆವೃತ್ತಿಯು ಮೊದಲ ಆವೃತ್ತಿಯ ಪ್ರಮುಖ ವಿಷಯಗಳು ಮತ್ತು ಟ್ರ್ಯಾಕ್ಗಳನ್ನು ಉಳಿಸಿಕೊಳ್ಳುತ್ತದೆ ಮತ್ತು ಹೊಸ ಕಾರ್ಯಕ್ರಮ ಪಟ್ಟಿಯನ್ನು ಪರಿಚಯಿಸುತ್ತದೆ, ಅಸ್ತಿತ್ವದಲ್ಲಿರುವ ಕಾರ್ಯಕ್ರಮ ಪಟ್ಟಿಯ (ಲಂಬದಲ್ಲಿ) ವಿಧಾನದಲ್ಲಿ ಬದಲಾವಣೆ ಮತ್ತು ಮೊದಲ ಬಾರಿಗೆ ಅಂತರರಾಷ್ಟ್ರೀಯ ಭಾಗವಹಿಸುವಿಕೆಯನ್ನು ಒಳಗೊಂಡಿದ್ದು, ಅದನ್ನು ಕೆಳಗೆ ವಿವರಿಸಲಾಗಿದೆ.
- “ಭಾರತಕ್ಕಾಗಿ ವಿನ್ಯಾಸ”, Viksit Bharat@2047 ರ ದೃಷ್ಟಿಕೋನಕ್ಕೆ ಹೊಂದಿಕೊಂಡ ಬಹು-ಹಂತದ ರಾಷ್ಟ್ರೀಯ ವಿನ್ಯಾಸ ಸವಾಲು/ಸ್ಪರ್ಧೆ.
- “ತಂತ್ರಜ್ಞಾನಕ್ಕಾಗಿ ವಿಕ್ಷಿತ್ ಭಾರತ - ಹ್ಯಾಕ್ ಫಾರ್ ಎ ಸೋಷಿಯಲ್ ಕಾಸ್”, Viksit Bharat @2047 ಎಂಬ ಶೀರ್ಷಿಕೆ ಅಡಿಯಲ್ಲಿ ಮೂಲಮಾದರಿ, ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಬಹು-ಹಂತದ ಹ್ಯಾಕಥಾನ್.
- ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪಕ್ರಮ “ಭಾರತವನ್ನು ತಿಳಿಯಿರಿ ಕಾರ್ಯಕ್ರಮ (ನೋ ಇಂಡಿಯಾ ಪ್ರೋಗ್ರಾಂ”) ಮೂಲಕ 80 ಯುವಜನರು ಮತ್ತು ಬಿಮ್ ಸ್ಟೆಕ್ (BIMSTEC) ರಾಷ್ಟ್ರಗಳಿಂದ 20 ಪ್ರತಿನಿಧಿಗಳನ್ನು ಒಳಗೊಂಡು ಅಂತರರಾಷ್ಟ್ರೀಯ ಭಾಗವಹಿಸುವಿಕೆ.
ರಾಜ್ಯ ಮಟ್ಟದಲ್ಲಿ, ಸ್ಪರ್ಧೆಗಳನ್ನು ಗೊತ್ತುಪಡಿಸಿದ ನೋಡಲ್ ಸಂಸ್ಥೆಗಳಲ್ಲಿ ಆಯೋಜಿಸಲಾಗುವುದು, ಆದರೆ ರಾಷ್ಟ್ರೀಯ ಮಟ್ಟದಲ್ಲಿ, ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಮೂರು ಸದಸ್ಯರ ತಂಡಗಳು ಭಾಗವಹಿಸುತ್ತವೆ. ಒಟ್ಟಾರೆಯಾಗಿ, 100 ಭಾಗವಹಿಸುವವರು ಹ್ಯಾಕಥಾನ್/ವಿನ್ಯಾಸ ಸವಾಲಿನ ಅಂತಿಮ ರಾಷ್ಟ್ರೀಯ ಸುತ್ತಿಗೆ ಅರ್ಹತೆ ಪಡೆಯುತ್ತಾರೆ, ಇದು ಕೆಲವು ಪ್ರಕಾಶಮಾನವಾದ, ಪ್ರತಿಭಾವಂತ ಯುವ ನಾವೀನ್ಯಕಾರರನ್ನು ಪ್ರದರ್ಶಿಸುತ್ತದೆ.
ಈವೆಂಟ್ ರೂಪುರೇಶೆ: ವಿಕಸಿತ ಭಾರತ ಚಾಲೆಂಜ್ ಟ್ರ್ಯಾಕ್ (4 ಹಂತಗಳು)
- ಹಂತ I (ಡಿಜಿಟಲ್): ರಸಪ್ರಶ್ನೆ –2025ರ ಸೆಪ್ಟೆಂಬರ್ 01ರಿಂದ ಅಕ್ಟೋಬರ್ 15
- ಹಂತ II (ಡಿಜಿಟಲ್): ಪ್ರಬಂಧ ಸವಾಲು – 23 ಅಕ್ಟೋಬರ್ ನಿಂದ 5 ನವೆಂಬರ್ 2025
- ಹಂತ III (ವ್ಯಕ್ತಿಗತ): ಪಿ.ಪಿ.ಟಿ. ಸವಾಲು – ರಾಜ್ಯ ಮಟ್ಟ – 24 ನವೆಂಬರ್ ನಿಂದ 8 ಡಿಸೆಂಬರ್ 2025
- ಹಂತ IV (ವ್ಯಕ್ತಿಗತ): ವಿಕಸಿತ ಭಾರತ ಚಾಂಪಿಯನ್ಶಿಪ್, ರಾಷ್ಟ್ರೀಯ ಯುವ ಉತ್ಸವ, ಹೊಸದಿಲ್ಲಿ – 10 - 12, ಜನವರಿ 2026
ಈ ಟ್ರ್ಯಾಕ್ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 1,500 ಭಾಗವಹಿಸುವವರು ರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆ.
ಸಾಂಸ್ಕೃತಿಕ ಮತ್ತು ವಿನ್ಯಾಸ ಟ್ರ್ಯಾಕ್ (3 ಹಂತಗಳು)
- ಜಿಲ್ಲಾ ಮಟ್ಟ - 1 ಸೆಪ್ಟೆಂಬರ್ ನಿಂದ 31 ಅಕ್ಟೋಬರ್ 2025
- ರಾಜ್ಯ ಮಟ್ಟ - 10 ನವೆಂಬರ್ ನಿಂದ 1 ಡಿಸೆಂಬರ್ 2025
- ರಾಷ್ಟ್ರೀಯ ಮಟ್ಟ - 10 - 12 ಜನವರಿ, 2026
ಚಟುವಟಿಕೆಗಳಲ್ಲಿ ಘೋಷಣೆ, ಕಥೆ ಬರೆಯುವುದು, ಚಿತ್ರಕಲೆ, ಜಾನಪದ ಗೀತೆಗಳು, ಜಾನಪದ ನೃತ್ಯ, ಕವನ ಬರೆಯುವುದು ಮತ್ತು ನಾವೀನ್ಯತೆ ಸೇರಿವೆ. ಪ್ರತಿ ವಿಭಾಗದಲ್ಲೂ ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಅತ್ಯುತ್ತಮ ತಂಡವು ರಾಷ್ಟ್ರೀಯ ವೇದಿಕೆಗೆ ಅರ್ಹತೆ ಪಡೆಯುತ್ತದೆ.
ಭಾರತಕ್ಕಾಗಿ ವಿನ್ಯಾಸ ಮತ್ತು ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ - ಸಾಮಾಜಿಕ ಕಾರಣಕ್ಕಾಗಿ ಹ್ಯಾಕ್
ರಾಜ್ಯ ಮಟ್ಟದಲ್ಲಿ, ಪ್ರತಿ ಟ್ರ್ಯಾಕ್ ನ ಅಡಿಯಲ್ಲಿ ಸ್ಪರ್ಧೆಗಳನ್ನು ಗೊತ್ತುಪಡಿಸಿದ ನೋಡಲ್ ಸಂಸ್ಥೆಗಳಲ್ಲಿ ಆಯೋಜಿಸಲಾಗುತ್ತದೆ, ಆದರೆ ರಾಷ್ಟ್ರೀಯ ಮಟ್ಟದಲ್ಲಿ, ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಮೂರು ಸದಸ್ಯರ ತಂಡಗಳು ಭಾಗವಹಿಸುತ್ತವೆ. ದೇಶದ ಕೆಲವು ಪ್ರತಿಭಾವಂತ ಯುವ ನಾವೀನ್ಯಕಾರರನ್ನು ಪ್ರತಿನಿಧಿಸುವ ಪ್ರತಿ ಟ್ರ್ಯಾಕ್ ನ ಅಂತಿಮ ರಾಷ್ಟ್ರೀಯ ಸುತ್ತಿಗೆ 100 ಮಂದಿ ಭಾಗವಹಿಸುವವರು ಅರ್ಹತೆ ಪಡೆಯುತ್ತಾರೆ.
ರಾಷ್ಟ್ರೀಯ ಭಾಗವಹಿಸುವಿಕೆ 2026 ರ ಜನವರಿಯಲ್ಲಿ
ವಿ.ಬಿ.ವೈ.ಎಲ್.ಡಿ 2026ರ ಗ್ರ್ಯಾಂಡ್ ಫಿನಾಲೆ 2026ರ ಜನವರಿ 10–12 ರವರೆಗೆ ಹೊಸದಿಲ್ಲಿಯಲ್ಲಿ ನಡೆಯಲಿದ್ದು, ಇದರಲ್ಲಿ 3,000 ಭಾಗವಹಿಸುವವರ ವೈವಿಧ್ಯಮಯ ಮತ್ತು ಕ್ರಿಯಾತ್ಮಕ ಸಮೂಹವನ್ನು ಒಟ್ಟುಗೂಡಿಸಲಾಗುತ್ತದೆ, ಅವುಗಳೆಂದರೆ:
• ವಿಕಸಿತ ಭಾರತ ಚಾಲೆಂಜ್ ಟ್ರ್ಯಾಕ್ ನಿಂದ 1,500
• ಸಾಂಸ್ಕೃತಿಕ ಮತ್ತು ವಿನ್ಯಾಸ ಟ್ರ್ಯಾಕ್ ನಿಂದ 1,000
• 100 ಅಂತರರಾಷ್ಟ್ರೀಯ ಪ್ರತಿನಿಧಿಗಳು
• 400 ವಿಶೇಷ ಪಾಲ್ಗೊಳ್ಳುವವರು/ಆಹ್ವಾನಿತರು
ಅವರ ಸಂವಾದಗಳು, ಚರ್ಚೆಗಳು ಮತ್ತು ಪ್ರಸ್ತುತಿಗಳು ರಾಷ್ಟ್ರ ನಿರ್ಮಾಣಕ್ಕಾಗಿ ವಿಚಾರಗಳು, ಪರಿಹಾರಗಳು ಮತ್ತು ಬದ್ಧತೆಗಳ ರೋಮಾಂಚಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತವೆ.
ನೋಂದಣಿಗಳು ಮತ್ತು ಭಾಗವಹಿಸುವಿಕೆ
ಮೈ (MY) ಭಾರತ್ ಪೋರ್ಟಲ್ mybharat.gov.in ನಲ್ಲಿ ರಸಪ್ರಶ್ನೆ ಸುತ್ತಿನ ನೋಂದಣಿಗಳನ್ನು ತೆರೆಯುವುದರೊಂದಿಗೆ ವಿಬಿವೈಎಲ್ಡಿ (VBYLD) 2026ರ ಕಡೆಗೆ ಪ್ರಯಾಣವು ಈಗಾಗಲೇ ಪ್ರಾರಂಭವಾಗಿದೆ. ಈ ಪ್ರವೇಶ ಬಿಂದುವು ದೇಶಾದ್ಯಂತ ಯುವಜನರು ನೋಂದಾಯಿಸಿಕೊಳ್ಳಲು ಮತ್ತು ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ,ಆ ಮೂಲಕ ಅವರು ರಾಷ್ಟ್ರೀಯ ಆಂದೋಲನದ ಭಾಗವಾಗುವ ಪ್ರಯಾಣವನ್ನು ಆರಂಭ ಮಾಡುತ್ತಾರೆ. ಅಲ್ಲದೆ, ಭಾಗವಹಿಸುವವರು www.mygov.in ಮೂಲಕ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು ವಿಬಿವೈಎಲ್ಡಿ (VBYLD) 2026 ರ ರಸಪ್ರಶ್ನೆ ಸುತ್ತಿಗೆ ನೋಂದಾಯಿಸಲು ಕೊನೆಯ ದಿನಾಂಕ 15 ಅಕ್ಟೋಬರ್ 2025.

2047ರ ವಿಕಸಿತ ಭಾರತದತ್ತ (Viksit Bharat@2047) ಪ್ರಯಾಣದಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಮತ್ತು ಯುವಜನರ ತೊಡಗಿಸಿಕೊಳ್ಳುವಿಕೆಯನ್ನು ಪ್ರೇರೇಪಿಸುವಲ್ಲಿ ಈ ಉಪಕ್ರಮವನ್ನು ವರ್ಧಿಸುವಲ್ಲಿ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮ ಚಾನೆಲ್ ಗಳ ನಿರಂತರ ಬೆಂಬಲ ಮತ್ತು ಸಹಕಾರವನ್ನು ನಾವು ಎದುರು ನೋಡುತ್ತಿದ್ದೇವೆ.
*****
(Release ID: 2166395)
Visitor Counter : 2