ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಬೇಡಿಕೆಯನ್ನು ಹೆಚ್ಚಿಸಲು, ಸ್ಥಳೀಕರಣವನ್ನು ಉತ್ತೇಜಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯಲ್ಲಿ ಜಾಗತಿಕ ಮೌಲ್ಯ ಸರಪಳಿ ಏಕೀಕರಣವನ್ನು ಹೆಚ್ಚಿಸಲು ಈ ಮುಂದಿನ ಪೀಳಿಗೆಯ ಜಿ.ಎಸ್.ಟಿ. ಸುಧಾರಣೆಯು ಪೂರಕವಾಗಲಿದೆ
ಡಿಜಿಟಲ್ ಬೆಳವಣಿಗೆ ಮತ್ತು ಕೈಗೆಟುಕುವ ಐಸಿಟಿ ಹಾರ್ಡ್‌ವೇರ್ ಸಕ್ರಿಯಗೊಳಿಸಲು ಹವಾನಿಯಂತ್ರಣಗಳು, ಟಿ.ವಿಗಳು, ಮಾನಿಟರ್‌ಗಳು, ಪ್ರೊಜೆಕ್ಟರ್‌ಗಳು ಮತ್ತು ಪವರ್ ಬ್ಯಾಂಕ್‌ಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲಾಗಿದೆ
Posted On:
09 SEP 2025 4:20PM by PIB Bengaluru
ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಯಲ್ಲಿನ ಇತ್ತೀಚಿನ ಮುಂದಿನ ಪೀಳಿಗೆಯ ಸುಧಾರಣೆಗಳು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಮೈಟಿ) ಅಡಿಯಲ್ಲಿನ ವಲಯಗಳನ್ನು, ವಿಶೇಷವಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಐ.ಸಿ.ಟಿ ಹಾರ್ಡ್‌ವೇರ್ ಅನ್ನು ಉತ್ತೇಜಿಸಲು ಸಜ್ಜಾಗಿವೆ. ದರ ಕಡಿತಗಳು ಅಗತ್ಯ ಉತ್ಪನ್ನಗಳನ್ನು ನಾಗರಿಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಮತ್ತು ಈ ಮೂಲಕ ದೇಶೀಯ ಉತ್ಪಾದನೆಯನ್ನು ಬಲಪಡಿಸುತ್ತದೆ, ಎಂ.ಎಸ್.ಎಂ.ಇ.ಗಳು ಮತ್ತು ಸ್ಟಾರ್ಟ್-ಅಪ್ ಗಳನ್ನು ಬೆಂಬಲಿಸುತ್ತದೆ ಮತ್ತು ಡಿಜಿಟಲ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಗುರಿಗಳನ್ನು ಮುನ್ನಡೆಸುತ್ತದೆ.
ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಉತ್ತೇಜನ
ಹವಾನಿಯಂತ್ರಣ ಉಪಕರಣಗಳು, ಡಿಶ್ವಾಶರ್ ಗಳು ಮತ್ತು ದೊಡ್ಡ ಪರದೆಯ ಟೆಲಿವಿಷನ್ ಗಳ (ಎಲ್.ಸಿ.ಡಿ ಮತ್ತು ಎಲ್.ಇ.ಡಿ) ಮೇಲಿನ ಜಿ.ಎಸ್.ಟಿ.ಯನ್ನು ಶೇಕಡಾ 28 ರಿಂದ 18ಕ್ಕೆ ಇಳಿಸುವುದರಿಂದ ದೇಶೀಯ ಬೇಡಿಕೆ ವಿಸ್ತರಿಸುವ ಜೊತೆಗೆ ಮನೆಗಳಿಗೆ ಕೈಗೆಟುಕುವಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಕಂಪ್ರೆಸರ್ ಗಳು, ಡಿಸ್ ಪ್ಲೇಗಳು ಮತ್ತು ಸೆಮಿಕಂಡಕ್ಟರ್ ಗಳಂತಹ ಘಟಕಗಳಲ್ಲಿ ಬಲವಾದ ಉತ್ತಮ ಸಂಪರ್ಕಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಮತ್ತು ಪ್ಲಾಸ್ಟಿಕ್ ಗಳು, ವೈರಿಂಗ್, ಕೂಲಿಂಗ್ ಸಿಸ್ಟಮ್ ಗಳು, ಎಲ್.ಇ.ಡಿ ಪ್ಯಾನೆಲ್ ಗಳು ಮತ್ತು ಅಸೆಂಬ್ಲಿ ಸೇವೆಗಳಲ್ಲಿ ತೊಡಗಿರುವ ಎಂ.ಎಸ್.ಎಂ.ಇ.ಗಳಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಸುಧಾರಣೆಗಳು ಸ್ಥಳೀಕರಣವನ್ನು ಬೆಂಬಲಿಸುತ್ತವೆ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ, ಡಿಶ್ವಾಶರ್ ಗಳ ಮೇಲಿನ ಜಿ.ಎಸ್.ಟಿ ಕಡಿತವು ಕುಟುಂಬ ಹಾಗೂ ಮನೆಗಳ ಜೀವನ ವ್ಯವಸ್ಥೆ ಸುಲಭತೆಯನ್ನು ಸುಧಾರಿಸುತ್ತದೆ.
ಡಿಜಿಟಲ್ ಬೆಳವಣಿಗೆ ಮತ್ತು ಕೈಗೆಟುಕುವ ಐ.ಸಿ.ಟಿ ಹಾರ್ಡ್‌ವೇರ್ ಅನ್ನು ಸಕ್ರಿಯಗೊಳಿಸುವುದು
ಮಾನಿಟರ್‌ಗಳು ಮತ್ತು ಪ್ರೊಜೆಕ್ಟರ್‌ಗಳ (ಟಿ.ವಿ. ಅಲ್ಲದ ಇತರೇ) ಮೇಲಿನ ಜಿ.ಎಸ್.ಟಿ.ಯನ್ನು ಶೇಕಡಾ 28 ರಿಂದ 18 ಕ್ಕೆ ಇಳಿಸಲಾಗಿದೆ, ಇದು ಶಿಕ್ಷಣ ಸಂಸ್ಥೆಗಳು, ಕಚೇರಿಗಳು ಮತ್ತು ಡಿಜಿಟಲ್ ಕಲಿಕಾ ಕೇಂದ್ರಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ. ಕೈಗೆಟುಕುವ ಐ.ಸಿ.ಟಿ ಹಾರ್ಡ್‌ವೇರ್ ನೇರವಾಗಿ ಐಟಿ ವಲಯ, ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಮತ್ತು ಡಿಜಿಟಲ್ ಶಿಕ್ಷಣವನ್ನು ಬೆಂಬಲಿಸುತ್ತದೆ. ಅದೇ ರೀತಿ, ವಿದ್ಯುತ್ ಸಂಚಯಕಗಳ (ಲಿ-ಅಯಾನ್ ಅಲ್ಲದ ಇತರೇ ಹಾಗೂ ಪವರ್ ಬ್ಯಾಂಕ್ ಗಳು ಸೇರಿದಂತೆ) ಮೇಲಿನ ಜಿ.ಎಸ್.ಟಿ.ಯನ್ನು ಶೇಕಡಾ 28 ರಿಂದ 18 ಕ್ಕೆ ಇಳಿಸುವುದರಿಂದ ಇಂಧನ ಸಂಗ್ರಹ ಪರಿಹಾರಗಳು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ, ಡಿಜಿಟಲ್ ಸಾಧನಗಳಿಗೆ ಬ್ಯಾಕಪ್ ವಿದ್ಯುತ್ ಪ್ರವೇಶವನ್ನು ಸುಧಾರಿಸುತ್ತದೆ ಮತ್ತು ಮನೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ದಕ್ಷ ಇಂಧನ ವ್ಯವಸ್ಥೆಗಳ ಅಳವಡಿಕೆಯನ್ನು ಉತ್ತೇಜಿಸುತ್ತದೆ.
ಈ ನೂತನ ಸುಧಾರಣೆಗಳು ದೇಶದ ಆಂತರಿಕ ಭದ್ರತಾ ಸಂವಹನ ಮೂಲಸೌಕರ್ಯವನ್ನು ಬಲಪಡಿಸುತ್ತವೆ. ದ್ವಿಮುಖ ರೇಡಿಯೋಗಳ (ವಾಕಿ-ಟಾಕಿಗಳು) ಮೇಲಿನ ಜಿ.ಎಸ್.ಟಿ.ಯನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗಿದೆ, ಇದರಿಂದಾಗಿ ಪೊಲೀಸ್, ಅರೆಸೈನಿಕ ಮತ್ತು ರಕ್ಷಣಾ ಪಡೆಗಳಿಗೆ ಖರೀದಿ ವೆಚ್ಚ ಕಡಿಮೆಯಾಗುತ್ತದೆ.
ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವುದು
ನವೀಕರಿಸಬಹುದಾದ ಇಂಧನ ಸಾಧನಗಳು ಮತ್ತು ಸೌರ ದ್ಯುತಿವಿದ್ಯುಜ್ಜನಕ ಕೋಶಗಳ ಮೇಲಿನ ಜಿಎಸ್ಟಿಯನ್ನು ಶೇಕಡಾ 12 ರಿಂದ 5ಕ್ಕೆ ಇಳಿಸಲಾಗಿದೆ, ಇದು ಗೃಹ ಮತ್ತು ಕೈಗಾರಿಕಾ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನ ನಿಯೋಜನೆಯ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕಾಂಪೋಸ್ಟಿಂಗ್ ಯಂತ್ರಗಳು ಈಗ ಶೇಕಡಾ 12ರ ಬದಲು ಶೇಕಡಾ 5 ರಷ್ಟು ಜಿ.ಎಸ್.ಟಿ.ಯನ್ನು ಆಕರ್ಷಿಸುತ್ತವೆ, ತ್ಯಾಜ್ಯದಿಂದ ಶಕ್ತಿಯ ಪರಿಹಾರಗಳು ಮತ್ತು ಮಿಶ್ರಗೊಬ್ಬರ ತಂತ್ರಜ್ಞಾನಗಳನ್ನು ಸುಸ್ಥಿರ ಮತ್ತು ಸ್ಮಾರ್ಟ್ ನಗರಗಳ ದೃಷ್ಟಿಕೋನವನ್ನು ಮತ್ತಷ್ಟು ಹೆಚ್ಚಿಸಲು ಪ್ರೋತ್ಸಾಹಿಸುತ್ತವೆ.
ಈ ಸುಧಾರಣೆಗಳು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಬಹು ವಿಭಾಗಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಬೇಡಿಕೆಯನ್ನು ಉತ್ತೇಜಿಸುವ ಮೂಲಕ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಮತ್ತು ದೇಶೀಯ ತಯಾರಕರು ಮತ್ತು ಎಂ.ಎಸ್.ಎಂ.ಇ.ಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ, ಜಿ.ಎಸ್.ಟಿ. ದರ ಕಡಿತವು ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಸ್ಥಳೀಕರಣವನ್ನು ಬೆಂಬಲಿಸುತ್ತದೆ ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಏಕೀಕರಣವನ್ನು ಬಲಪಡಿಸುತ್ತದೆ.
*****
(Release ID: 2165088)
Visitor Counter : 2