ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫಿಸಿಯೋಥೆರಪಿ ವೃತ್ತಿಯಲ್ಲಿ ತೊಡಗಿರುವ ಎಲ್ಲರ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ಲಾಘನೆ

Posted On: 08 SEP 2025 8:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಫಿಸಿಯೋಥೆರಪಿ ದಿನದ ಅಂಗವಾಗಿ ಈ ಚಿಕಿತ್ಸಾ ವೃತ್ತಿಯಲ್ಲಿ ತೊಡಗಿರುವ ಎಲ್ಲರ ಪ್ರಯತ್ನಗಳನ್ನು ಇಂದು ಶ್ಲಾಘಿಸಿದ್ದಾರೆ. "ಜನರ, ವಿಶೇಷವಾಗಿ ವೃದ್ಧರ ಯೋಗಕ್ಷೇಮಕ್ಕೆ, ಅವರು ನಡೆದಾಡುವಂತಾಗಲು, ಘನತೆಯಿಂದ ಜೀವಿಸುವಂತಾಗಲು ಮತ್ತು ಅವರಿಗೆ ಉತ್ತಮ ಗುಣಮಟ್ಟದ ಜೀವನವನ್ನು ಖಾತರಿಪಡಿಸಲು ಈ ವೃತ್ತಿಯಲ್ಲಿ ತೊಡಗಿರುವರು ನೀಡುತ್ತಿರುವ ಕೊಡುಗೆ ಶ್ಲಾಘನೀಯ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.  

ಪ್ರಧಾನಮಂತ್ರಿ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ವಿಶ್ವ ಫಿಸಿಯೋಥೆರಪಿ ದಿನವು ಈ ಭೌತಿಕ ಚಿಕಿತ್ಸಾ ವೃತ್ತಿಯಲ್ಲಿ ತೊಡಗಿರುವ ಎಲ್ಲರ ಪ್ರಯತ್ನಗಳನ್ನು ಶ್ಲಾಘಿಸುವ ಸಂದರ್ಭವಾಗಿದೆ. ಜನರ ಯೋಗಕ್ಷೇಮಕ್ಕೆ ವಿಶೇಷವಾಗಿ ವೃದ್ಧರು ನಡೆದಾಡುವಂತಾಗಲು, ಘನತೆಯಿಂದ ಜೀವಿಸಲು ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಖಾತರಿಪಡಿಸಲು ಹೇಗೆ ಕೊಡುಗೆ ನೀಡುತ್ತಾರೆ ಎಂಬುದು ಶ್ಲಾಘನೀಯ."

 

 

*****

 


(Release ID: 2164807) Visitor Counter : 2