ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮಿಲಾದ್-ಉನ್-ನಬಿ ಹಬ್ಬದ ಮುನ್ನಾ ದಿನದಂದು ಶುಭಾಶಯ ಕೋರಿದ ಭಾರತದ ರಾಷ್ಟ್ರಪತಿ

Posted On: 04 SEP 2025 6:06PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮಿಲಾದ್-ಉನ್-ನಬಿ ಹಬ್ಬದ ಮುನ್ನಾ ದಿನದಂದು ದೇಶದ ಜನತೆಗೆ ತಿಳಿಸಿದ ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ: -

"ಮಿಲಾದ್-ಉನ್-ನಬಿ ಎಂದು ಆಚರಿಸಲಾಗುವ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದಂದು, ಭಾರತದ ಎಲ್ಲಾ ನನ್ನ ಸಹ ನಾಗರಿಕರಿಗೆ, ವಿಶೇಷವಾಗಿ ನಮ್ಮ ಮುಸ್ಲಿಂ ಸಹೋದರ ಸಹೋದರಿಯರಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ಪ್ರವಾದಿ ಮುಹಮ್ಮದ್ ಅವರು ಜನರಿಗೆ ಏಕತೆ ಮತ್ತು ಮಾನವೀಯತೆಯ ಸೇವೆಯ ಸಂದೇಶವನ್ನು ನೀಡಿದರು. ಈ ಹಬ್ಬವು ಅವರ ಬೋಧನೆಗಳನ್ನು ಅಳವಡಿಸಿಕೊಳ್ಳಲು ಮತ್ತು ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ನಮಗೆ ಸ್ಫೂರ್ತಿ ನೀಡುತ್ತದೆ.

ಈ ಶುಭ ಸಂದರ್ಭದಲ್ಲಿ, ನಾವು ಪ್ರವಾದಿ ಮುಹಮ್ಮದ್ ಅವರ ಬೋಧನೆಗಳಿಂದ ಸ್ಫೂರ್ತಿ ಪಡೆದು ಪ್ರೀತಿ ಮತ್ತು ಸಹೋದರತ್ವದ ಮನೋಭಾವದಲ್ಲಿ ಶ್ರಮಿಸೋಣ".

ರಾಷ್ಟ್ರಪತಿಯವರ ಸಂದೇಶವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
 

 

*****


(Release ID: 2164028) Visitor Counter : 2