ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಉತ್ಪಾದನಾ ವಲಯದ ಮೇಲೆ ಇತ್ತೀಚಿನ ಜಿ.ಎಸ್‌.ಟಿ ಸುಧಾರಣೆಗಳ ಪರಿವರ್ತನಾತ್ಮಕ ಪರಿಣಾಮವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ

प्रविष्टि तिथि: 04 SEP 2025 8:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಉತ್ಪಾದನಾ ವಲಯದ ಮೇಲೆ ಇತ್ತೀಚಿನ ಜಿ.ಎಸ್‌.ಟಿ ಸುಧಾರಣೆಗಳ ಪರಿವರ್ತನಾತ್ಮಕ ಪರಿಣಾಮವನ್ನು ಒತ್ತಿ ಹೇಳಿದ್ದಾರೆ. #NextGenGST ಉಪಕ್ರಮವು ಸರಳೀಕೃತ ತೆರಿಗೆ ಸ್ಲ್ಯಾಬ್‌ಗಳು, ಸುವ್ಯವಸ್ಥಿತ ಡಿಜಿಟಲ್ ಅನುಸರಣೆ ಮತ್ತು ವೆಚ್ಚ ದಕ್ಷತೆಯ ಬಗ್ಗೆ ವಿವರಿಸುತ್ತದೆ, ಇದು ದೇಶೀಯ ಉತ್ಪಾದನೆ ಹೆಚ್ಚಿಸಿ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಉತ್ತೇಜಿಸುತ್ತದೆ.

ಎಕ್ಸ ನಲ್ಲಿ ಶ್ರೀ ಪ್ರಕಾಶ್ ದದ್ಲಾನಿ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು:

"#NextGenGST ತಯಾರಕರಿಗೆ ಒಂದು ಪ್ರಮುಖ ಸಾಧನವಾಗಿದೆ. 5% ಮತ್ತು 18% ಸರಳೀಕೃತ ಸ್ಲ್ಯಾಬ್‌ಗಳನ್ನು ಒಳಗೊಂಡ ಕಡಿಮೆ ಇನ್‌ಪುಟ್ ವೆಚ್ಚಗಳು, ವೇಗವಾದ ಡಿಜಿಟಲ್ ಅನುಸರಣೆ ಮತ್ತು ಹೆಚ್ಚುತ್ತಿರುವ ಬೇಡಿಕೆಯು 'ಭಾರತದಲ್ಲಿ ತಯಾರಿಸಿದ' ಉತ್ಪನ್ನಗಳಿಗೆ ಹೆಚ್ಚಿನ ಉತ್ತೇಜನ ನೀಡಿ ಬೇಡಿಕೆಯನ್ನು ಹೆಚ್ಚಿಸುತ್ತದೆ" ಎಂದು ಹೇಳಿದ್ದಾರೆ.

 

 

*****

 


(रिलीज़ आईडी: 2164025) आगंतुक पटल : 18
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Bengali , Manipuri , Assamese , Punjabi , Gujarati , Tamil , Telugu , Malayalam