ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಬಿ.ಎಸ್.ಎನ್.ಎಲ್. ತನ್ನ "ಫ್ರೀಡಂ ಪ್ಲಾನ್" ಅನ್ನು 15 ದಿನಗಳವರೆಗೆ ವಿಸ್ತರಿಸಲಾಗಿದೆ

Posted On: 01 SEP 2025 1:42PM by PIB Bengaluru

ಗ್ರಾಹಕರಿಂದ ಬಂದಿರುವ ಉತ್ತಮ ಸ್ಪಂದನೆಯನ್ನು ಗಮನದಲ್ಲಿಟ್ಟುಕೊಂಡು ಬಿ.ಎಸ್.ಎನ್.ಎಲ್ ತನ್ನ "ಫ್ರೀಡಂ ಪ್ಲಾನ್" ಅನ್ನು ಹೆಚ್ಚುವರಿಯಾಗಿ 15 ದಿನಗಳವರೆಗೆ ವಿಸ್ತರಿಸಿದೆ. ಆಗಸ್ಟ್ 1, 2025 ರಂದು ₹1 ಟೋಕನ್ ಗೆ ಪ್ರಾರಂಭಿಸಲಾದ ಈ ಕೊಡುಗೆಯು ಹೊಸ ಸಕ್ರಿಯಗೊಳಿಸುವಿಕೆಗಳಿಗೆ 30 ದಿನಗಳವರೆಗೆ ಉಚಿತ 4ಜಿ ಮೊಬೈಲ್ ಸೇವೆಗಳನ್ನು ಒದಗಿಸುತ್ತದೆ. ಮೂಲತಃ ಆಗಸ್ಟ್ 31, 2025 ರವರೆಗೆ ಸಕ್ರಿಯಗೊಳಿಸುವಿಕೆಗಳಿಗೆ ಲಭ್ಯವಿದ್ದ ಈ ಅವಕಾಶವನ್ನು ಈಗ ಸೆಪ್ಟೆಂಬರ್ 15, 2025 ರವರೆಗೆ ವಿಸ್ತರಿಸಲಾಗಿದೆ.

ಯೋಜನೆಯ ಪ್ರಯೋಜನಗಳು (ಫ್ರೀಡಮ್ ಪ್ಲಾನ್):

  • ಅನಿಯಮಿತ ಧ್ವನಿ ಕರೆಗಳು (ಯೋಜನೆ ನಿಯಮಗಳು ಮತ್ತು ಷರತ್ತುಗಳ ಪ್ರಕಾರ)
  • 2 ಜಿಬಿ/ದಿನಕ್ಕೆ ಹೈ-ಸ್ಪೀಡ್ ಡೇಟಾ
  • 100 ಎಸ್. ಎಂ. ಎಸ್/ದಿನ
  • ಉಚಿತ ಸಿಮ್ (ಡಿಒಟಿ ಮಾರ್ಗಸೂಚಿಗಳ ಪ್ರಕಾರ ಕೆವೈಸಿ)

ಬಿ.ಎಸ್.ಎನ್.ಎಲ್. ನ ಸಿ.ಎಂ.ಡಿ ಶ್ರೀ ಎ. ರಾಬರ್ಟ್ ಜೆ. ರವಿ ಅವರು ಅವಧಿ ವಿಸ್ತರಣೆಯನ್ನು ಘೋಷಿಸುತ್ತಾ, ಹೀಗೆ ಹೇಳಿದರು:

"ಬಿ.ಎಸ್.ಎನ್.ಎಲ್. ಇತ್ತೀಚೆಗೆ ದೇಶಾದ್ಯಂತ ಮೇಕ್-ಇನ್-ಇಂಡಿಯಾ ಯೋಜನೆ ಮೂಲಕ, ಅತ್ಯಾಧುನಿಕ 4ಜಿ ಮೊಬೈಲ್ ನೆಟ್ವರ್ಕ್ ಅನ್ನು ನಿಯೋಜಿಸಿದೆ. ಇದು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ. ಫ್ರೀಡಮ್ ಪ್ಲಾನ್ - ಮೊದಲ 30 ದಿನಗಳವರೆಗೆ ಸೇವಾ ಶುಲ್ಕಗಳಿಲ್ಲದೆ - ನಮ್ಮ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4ಜಿ ನೆಟ್ವರ್ಕ್ ಅನ್ನು ಬಳಸಿಕೊಳ್ಳಲು ಗ್ರಾಹಕರಿಗೆ ಉತ್ತಮ ಅವಕಾಶವನ್ನು ನೀಡುತ್ತದೆ. ಬಿ.ಎಸ್.ಎನ್.ಎಲ್. ಬ್ರ್ಯಾಂಡ್ ನೊಂದಿಗೆ ಸಂಬಂಧಿಸಿದ ಸೇವಾ ಗುಣಮಟ್ಟ, ವ್ಯಾಪ್ತಿ ಮತ್ತು ನಂಬಿಕೆಯು ಪರಿಚಯಾತ್ಮಕ ಅವಧಿಯನ್ನು ಮೀರಿ ನಮ್ಮೊಂದಿಗೆ ಇರಲು ಗ್ರಾಹಕರನ್ನು ಪ್ರೋತ್ಸಾಹಿಸುತ್ತದೆ ಎಂದು ನಮಗೆ ವಿಶ್ವಾಸವಿದೆ."

ಫ್ರೀಡಂ ಪ್ಲಾನ್ ಪಡೆಯುವುದು ಹೇಗೆ

  1. ಹತ್ತಿರದ ಬಿ.ಎಸ್.ಎನ್.ಎಲ್. ಗ್ರಾಹಕ ಸೇವಾ ಕೇಂದ್ರಕ್ಕೆ (ಸಿ.ಎಸ್.ಸಿ.) ಭೇಟಿ ನೀಡಿ (ಹೋಗುವಾಗ ಅಧಿಕೃತ ಕೆವೈಸಿ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು).
  2. ಫ್ರೀಡಂ ಪ್ಲಾನ್ ಗೆ ವಿನಂತಿಸಿ (₹1 ಸಕ್ರಿಯಗೊಳಿಸುವಿಕೆ); ಕೆವೈಸಿ ಅನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಉಚಿತ ಸಿಮ್ ಅನ್ನು ಸಂಗ್ರಹಿಸಿ.
  3. ಮಾರ್ಗದರ್ಶನದಂತೆ ಸಿಮ್ ಅನ್ನು ಸೇರಿಸಿ ಮತ್ತು ಸಕ್ರಿಯಗೊಳಿಸುವಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ; ಸಕ್ರಿಯಗೊಳಿಸಿದ ದಿನಾಂಕದಿಂದ ನಿಮ್ಮ 30-ದಿನಗಳ ಉಚಿತ ಪ್ರಯೋಜನಗಳು ಪ್ರಾರಂಭವಾಗುತ್ತವೆ.
  4. ಸಹಾಯಕ್ಕಾಗಿ, 1800-180-1503 ಗೆ ಕರೆ ಮಾಡಿ ಅಥವಾ bsnl.co.in ಗೆ ಭೇಟಿ ನೀಡಿ.

 

***** 


(Release ID: 2162753) Visitor Counter : 2