ಆಯುಷ್
ಆಯುಷ್ ಸಚಿವಾಲಯದಿಂದ ಪ್ರಧಾನಮಂತ್ರಿ ಅವರ ದೂರದರ್ಶಿ ನಾಯಕತ್ವದಡಿ 'ರಾಷ್ಟ್ರೀಯ ಆಯುಷ್ ಮಿಷನ್ ಮತ್ತು ರಾಜ್ಯಗಳಲ್ಲಿ ಸಾಮರ್ಥ್ಯ ವೃದ್ಧಿ' ಕುರಿತು ಇಲಾಖಾ ಶೃಂಗಸಭೆ ಆಯೋಜನೆ
2025 ರ ಸೆಪ್ಟೆಂಬರ್ 3 ಮತ್ತು 4 ರಂದು ನವದೆಹಲಿಯ ಸರಿತಾ ವಿಹಾರ್‌ನ ಎಐಐಎಯಲ್ಲಿ ನಡೆಯಲಿರುವ 'ರಾಷ್ಟ್ರೀಯ ಆಯುಷ್ ಮಿಷನ್ ಮತ್ತು ರಾಜ್ಯಗಳಲ್ಲಿ ಸಾಮರ್ಥ್ಯ ವೃದ್ಧಿ' ಕುರಿತ ಇಲಾಖಾ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿರುವ ಕೇಂದ್ರ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್
ರಾಷ್ಟ್ರೀಯ ಆಯುಷ್ ಮಿಷನ್ ಬಲವರ್ಧನೆಗೊಳಿಸಲು ರಾಜ್ಯಗಳ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಸಹಯೋಗ ವೃದ್ಧಿಗೆ ಎರಡು ದಿನಗಳ ರಾಷ್ಟ್ರೀಯ ಶೃಂಗಸಭೆ
ಆಯುಷ್ ಶೃಂಗಸಭೆಯಲ್ಲಿ ಹಣಕಾಸು ನಿರ್ವಹಣೆ, ಗುಣಮಟ್ಟ ಖಾತ್ರಿ, ಐಟಿ ಮತ್ತು ಹೆಚ್ಚಿನವುಗಳ ಕುರಿತು ಚರ್ಚೆಗಳನ್ನು ನಡೆಸಲು ಆರು ವಿಷಯಾಧಾರಿತ ಉಪ-ಗುಂಪುಗಳ ರಚನೆ
ಶೃಂಗಸಭೆಯಲ್ಲಿ ಆಯುಷ್ ಏಕೀಕರಣ ಮತ್ತು ಸಾಮರ್ಥ್ಯ ವೃದ್ಧಿಯ ಕುರಿತು ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಚರ್ಚೆ
Posted On:
31 AUG 2025 9:18AM by PIB Bengaluru
ಆಯುಷ್ ಸಚಿವಾಲಯವು ನವದೆಹಲಿಯ ಸರಿತಾ ವಿಹಾರ್ ನಲ್ಲಿರುವ ಆಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ)ಯಲ್ಲಿ 2025ರ ಸೆಪ್ಟಂಬರ್ 3 ಮತ್ತು 4 ರಂದು “ರಾಷ್ಟ್ರೀಯ ಆಯುಷ್ ಮಿಷನ್ ಮತ್ತು ರಾಜ್ಯಗಳಲ್ಲಿ ಸಾಮರ್ಥ್ಯ ವೃದ್ಧಿ’’ ಕುರಿತು ಎರಡು ದಿನಗಳ ವಿಭಾಗೀಯ ಶೃಂಗಸಭೆಯ ಆಯೋಜಿಸಲು ಸಜ್ಜಾಗಿದೆ. ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಸಚಿವರಾದ (ಸ್ವತಂತ್ರ ಖಾತೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಪ್ರತಾವ್ ಜಾಧವ್ ಅವರು ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಂಬರುವ ಶೃಂಗಸಭೆಯು ರಾಜ್ಯ/ಕೇಂದ್ರಾಳಿತ ಪ್ರದೇಶಗಳ ಅಧಿಕಾರಿಗಳಿಂದ ಪಡೆದ ನಿರ್ದಿಷ್ಟ ರಾಜ್ಯ ಟಿಪ್ಪಣಿಗಳು ಮತ್ತು ಪ್ರತಿಕ್ರಿಯೆ ಟಿಪ್ಪಣಿಗಳ ಕುರಿತು ವಿವರವಾದ ಚರ್ಚೆಗಳಿಗೆ ಒಂದು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ತಳಮಟ್ಟದ ಮಟ್ಟದ ಒಳನೋಟಗಳನ್ನೂ ಸಹ ಒಳಗೊಂಡಿರಲಿದೆ. ಅಂತಹ ಭಾಗವಹಿಸುವಿಕೆಯ ವಿಧಾನವು ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ, ಸೋವಾ ರಿಗ್ಪಾ ಮತ್ತು ಹೋಮಿಯೋಪತಿ ವ್ಯವಸ್ಥೆಗಳನ್ನು ಸಂಯೋಜಿಸುವ ಮೂಲಕ ಸಮಗ್ರ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವ ಪ್ರಮುಖ ಕಾರ್ಯಕ್ರಮವಾದ ರಾಷ್ಟ್ರೀಯ ಆಯುಷ್ ಮಿಷನ್ (ಎನ್ಎಎಂ) ಅನ್ನು ಬಲವರ್ಧನೆಗೊಳಿಸಲು ಮತ್ತು ಕಾರ್ಯತಂತ್ರಿಕವಾಗಿ ವಿಸ್ತರಿಸಲು ಉದ್ದೇಶಿಸಲಾಗಿದೆ.
ಮುಂಬರುವ ಶೃಂಗಸಭೆಯು 2025ರಲ್ಲಿ ನಡೆದ 4ನೇ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಒತ್ತಿಹೇಳಿದ ಆರು ವಿಷಯಾಧಾರಿತ ಶೃಂಗಸಭೆಗಳ ಸರಣಿಯಲ್ಲಿ ಅಂತಿಮ ಕಾರ್ಯಕ್ರಮವಾಗಿದೆ. ಈ ಶೃಂಗಸಭೆಗಳು ವರ್ಷವಿಡೀ ನಡೆದಿದ್ದು, ಅವು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಮತ್ತು ಪ್ರಮುಖ ವಿಷಯಗಳ ಕೇಂದ್ರೀಕೃತ ಚರ್ಚೆಗಳಿಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಎಲ್ಲಾ ಹಂತಗಳಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತವೆ.
ಈ ದೂರದೃಷ್ಟಿಗೆ ಅನುಗುಣವಾಗಿ ನೀತಿ ಆಯೋಗ, ಶೃಂಗಸಭೆಗಳಿಗೆ ಆರು ವಿಷಯಾಧಾರಿತ ವಲಯಗಳನ್ನು ಗುರುತಿಸಿದೆ. "ರಾಷ್ಟ್ರೀಯ ಆಯುಷ್ ಮಿಷನ್ ಮತ್ತು ರಾಜ್ಯಗಳಲ್ಲಿನ ಸಾಮರ್ಥ್ಯ ವೃದ್ಧಿ" ಯನ್ನು ಆರನೇ ಮತ್ತು ಅಂತಿಮ ವಿಷಯವಾಗಿ ಆಯ್ಕೆ ಮಾಡಲಾಗಿದ್ದು, ಆಯುಷ್ ಸಚಿವಾಲಯವನ್ನು ನೋಡಲ್ ಸಚಿವಾಲಯವೆಂದು ಗುರುತಿಸಲಾಗಿದ್ದು, ಅದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬೆಂಬಲಿಸಿದೆ.
ನೀತಿ ಆಯೋಗದ ನಿರ್ದೇಶನಗಳ ಪ್ರಕಾರ, ಆಯುಷ್ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪುನರ್ ಮನನ ಗೋಷ್ಠಿಗಳು ಮತ್ತು ಪರಿಕಲ್ಪನೆಯ ಟಿಪ್ಪಣಿಯ ಪ್ರಸಾರ (ಮೇ 6, 2025) ಸೇರಿದಂತೆ ವ್ಯಾಪಕವಾದ ಪೂರ್ವಸಿದ್ಧತಾ ಚಟುವಟಿಕೆಗಳನ್ನು ಕೈಗೊಂಡಿದೆ.
ಕೇಂದ್ರೀಕೃತ ಸಂವಾದಕ್ಕೆ ಅನುಕೂಲವಾಗುವಂತೆ ಆರು ವಿಷಯಾಧಾರಿತ ಉಪ-ಗುಂಪುಗಳನ್ನು ರಚಿಸಲಾಗಿದೆ. ಅವು ಪ್ರತಿಯೊಂದೂ ಮಿಷನ್‌ನ ನಿರ್ಣಾಯಕ ಅಂಶಗಳನ್ನು ತಿಳಿಸುತ್ತದೆ ಮತ್ತು 6-7 ರಾಜ್ಯಗಳು/ಕೇಂದ್ರಾಡಳಿತ ಪ್ರದೇಗಳನ್ನು ಒಳಗೊಂಡಿದೆ. ಕಾರ್ಯನಿರತ ಗುಂಪು ರಾಜ್ಯಗಳು ಮತ್ತು ಸಮನ್ವಯಕ್ಕಾಗಿ ಲೀಡ್ ನೋಡಲ್ ರಾಜ್ಯಗಳ ಜೊತೆಗೆ ಉಪ-ಥೀಮ್‌ಗಳು:
- ಹಣಕಾಸು ನಿರ್ವಹಣೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಯೋಜನೆ ನಿರ್ವಹಣೆ; ರಾಜಸ್ತಾನ, ಮಿಜೋರಾಂ, ಮೇಘಾಲಯ ಚಂಡಿಗಢ, ಪಶ್ಚಿಮಬಂಗಾಳ, ಲಕ್ಷದ್ವೀಪ, ನೋಡಲ್ ರಾಜ್ಯಗಳು; ರಾಜಸ್ತಾನ ಮತ್ತು ಮಿಜೋರಾಂ
- ಮಾನವ ಸಂಪನ್ಮೂಲ ಬಲವರ್ಧನೆ ಮತ್ತು ಸಾಮರ್ಥ್ಯವೃದ್ಧಿ ಸೇರಿದಂತೆ ಸಾಂಸ್ಥಿಕ ವ್ಯವಸ್ಥೆಯ ಪರಿಶೀಲನೆ; ಮಧ್ಯಪ್ರದೇಶ, ಸಿಕ್ಕಿಂ, ಗೋವಾ, ಬಿಹಾರ, ದೆಹಲಿ, ನಾಗಾಲ್ಯಾಂಡ್. ನೋಡಲ್ ರಾಜ್ಯಗಳು; ಮಧ್ಯಪ್ರದೇಶ ಮತ್ತು ಸಿಕ್ಕಿಂ
- ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಆಯುಷ್ ಮತ್ತು ಆಧುನಿಕ ಆರೋಗ್ಯ ರಕ್ಷಣಾ ಸೇವೆಗಳನ್ನು ಒಗ್ಗೂಡಿಸುವುದು. ಛತ್ತೀಸ್ ಗಢ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಒಡಿಶಾ, ಲಡಾಖ್, ಅರುಣಾಚಲಪ್ರದೇಶ, ನೋಡಲ್ ರಾಜ್ಯಗಳು, ಛತ್ತೀಸ್ ಗಢ ಮತ್ತು ಅರುಣಾಚಲಪ್ರದೇಶ
- ಮೂಲಸೌಕರ್ಯ, ಐಪಿಎಚ್ಎಸ್ ಆಯುಷ್ ಮಾನದಂಡಗಳು, ಆರೋಗ್ಯ ರಕ್ಷಣಾ ವ್ಯವಸ್ಥೆ ಸೇರಿದಂತೆ ಆಯುಷ್ ಸೌಕರ್ಯಗಳಡಿ ಗುಣಮಟ್ಟದ ಸೇವೆಗಳು; ಉತ್ತರ ಪ್ರದೇಶ, ಹಿಮಾಚಲಪ್ರದೇಶ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತ್ರಿಪುರಾ, ಮಣಿಪರು, ನೋಡಲ್ ರಾಜ್ಯಗಳು, ಉತ್ತರ ಪ್ರದೇಶ ಮತ್ತು ಹಿಮಾಚಲಪ್ರದೇಶ
- ಬ್ರಾಂಡಿಂಗ್ ಮತ್ತು ಪ್ಯಾಕಿಂಗ್ ಸೇರಿದಂತೆ ಗುಣಮಟ್ಟದ ಆಯುಷ್ ಔಷಧ ಖಾತ್ರಿ ಮತ್ತು ಅವುಗಳ ಖರೀದಿ ವ್ಯವಸ್ಥೆ; ಕರ್ನಾಟಕ, ತಮಿಳುನಾಡು, ಗುಜರಾತ್ ಜಾರ್ಖಂಡ್, ಪುದುಚೆರಿ, ಅಸ್ಸಾಂ. ನೋಡಲ್ ರಾಜ್ಯಗಳು ಕರ್ನಾಟಕ ಮತ್ತು ಅಸ್ಸಾಂ
- ನಾನಾ ವಲಯಗಳಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಡಿಜಿಟಲ್ ಸೇವೆಗಳು; ಆಂಧ್ರಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಉತ್ತರಾಖಂಡ, ದಾಮನ್ ಮತ್ತು ದಿಯು, ಕೇರಳ. ನೋಡಲ್ ರಾಜ್ಯಗಳು : ಕೇರಳ ಮತ್ತು ಮಹಾರಾಷ್ಟ್ರ
ಈ ಶೃಂಗಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಮಹಾನಿರ್ದೇಶಕರು, ಯೋಜನಾ ನಿರ್ದೇಶಕರು ಮತ್ತು ದೇಶಾದ್ಯಂತ ಇರುವ ಆಯುಷ್ ಆಯುಕ್ತರುಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಆಯುರ್ವೇದ, ಸಂಶೋಧನೆ, ಆರೋಗ್ಯ ನೀತಿ ಮತ್ತು ಡಿಜಿಟಲ್ ಆಡಳಿತ ಮತ್ತಿತರ ವಲಯಗಳ ತಜ್ಞರು ಹಾಗೂ ಸಂವಾದಕಾರರನ್ನು ಈ ಗೋಷ್ಠಿಗೆ ಆಹ್ವಾನಿಸಲಾಗಿದೆ. ಗಣ್ಯರ ಪಟ್ಟಿಯಲ್ಲಿ ಡಾ. ವಿ.ಕೆ. ಪೌಲ್, ಸದಸ್ಯರು, ನೀತಿ ಆಯೋಗ, ಜೆಎಲ್ಎನ್ ಶಾಸ್ತ್ರಿ(ಆಯುರ್ವೇದ ವಿದ್ವಾಂಸರು), ಡಾ. ವಿ. ಎಂ. ಕಟೋಚ್ (ಐಸಿಎಂಆರ್ ನ ಮಾಜಿ ಮಹಾ ನಿರ್ದೇಶಕರು), ಪ್ರೊಫೆಸರ್ ಭೂಷಣ್ ಪಟವರ್ಧನ್ ಮತ್ತು ಇತರರು ಸೇರಿದ್ದಾರೆ.
ಶೃಂಗಸಭೆಯ ಥೀಮ್ ಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚಿಸಿ, ಅಂತಿಮಗೊಳಿಸಿದ್ದು ಅದರಲ್ಲಿ ಐಟಿ ಆಧಾರಿತ ಸೇವೆಗಳು ಮತ್ತು ಗುಣಮಟ್ಟ ಖಾತ್ರಿ ಸಾಂಸ್ಥಿಕ ಸುಧಾರಣೆಗಳು ಮತ್ತು ಹಣಕಾಸು ನಿರ್ವಹಣೆ ಒಳಗೊಂಡಿದೆ. ಪ್ರತಿಯೊಂದು ಉಪ ಥೀಮ್ ಗಳನ್ನು ಎರಡು ನೋಡಲ್ ರಾಜ್ಯಗಳು ಸಮನ್ವಯದೊಂದಿಗೆ ಅಂತಿಮಗೊಳಿಸಲಾಗಿದ್ದು ಅದರಡಿ ನಿರ್ದಿಷ್ಟ ಮತ್ತು ಪರಿಣಾಮಕಾರಿ ಸಂವಾದಗಳನ್ನು ನಡೆಸಲಾಗುವುದು.
ಈ ಇಲಾಖಾ ಶೃಂಗಸಭೆ ಭಾರತ ಸರ್ಕಾರದ ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಆಯುಷ್ ವ್ಯವಸ್ಥೆಯನ್ನು ಅವಿಭಾಜ್ಯ ಅಂಗವನ್ನಾಗಿ ಉತ್ತೇಜಿಸುವ ಬದ್ಧತೆಯೊಂದಿಗೆ ಆಯೋಜಿಸಲಾಗಿದೆ. ಆ ಮೂಲಕ ಆಯುಷ್ ಲಭ್ಯತೆ, ಗುಣಮಟ್ಟ ಮತ್ತು ಪರಿಣಾಮವನ್ನು ವೃದ್ಧಿಸಲಾಗುವುದು. ರಾಷ್ಟ್ರೀಯ ಆಯುಷ್ ಮಿಷನ್ ನ ಸಾಮರ್ಥ್ಯವನ್ನು ಬಳಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಸಾಮರ್ಥ್ಯಗಳನ್ನು ಬಳಸಿಕೊಳ್ಳಲಾಗುವುದು. ರಾಷ್ಟ್ರೀಯ ಆಯುಷ್ ಮಿಷನ್‌ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ಸಾಮರ್ಥ್ಯ ವೃದ್ಧಿಯ ಮಹತ್ವವನ್ನು ಇದು ಒತ್ತಿಹೇಳುತ್ತದೆ.

*****
(Release ID: 2162467)
Visitor Counter : 2