ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಾಸ್ತವಾಂಶ ಪತ್ರ (ಫ್ಯಾಕ್ಟ್ ಶೀಟ್) : ಭಾರತ-ಜಪಾನ್ ಆರ್ಥಿಕ ಭದ್ರತಾ ಸಹಕಾರ

Posted On: 29 AUG 2025 8:12PM by PIB Bengaluru

ನಮ್ಮ ಹಂಚಿಕೆಯ ಮೌಲ್ಯಗಳು ಮತ್ತು ಪರಸ್ಪರ ಗೌರವದಲ್ಲಿ ನೆಲೆಗೊಂಡಿರುವ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯು ಎರಡೂ ದೇಶಗಳ ಭದ್ರತೆ ಮತ್ತು ಸಮೃದ್ಧಿಯನ್ನು ಮುನ್ನಡೆಸುವಲ್ಲಿ ನಿರ್ಣಾಯಕವಾಗಿದೆ. ಆರ್ಥಿಕ ಭದ್ರತೆಯ ಕ್ಷೇತ್ರದಲ್ಲಿ ಸಹಕಾರವು ನಮ್ಮ ಕಾರ್ಯತಂತ್ರ ದೃಷ್ಟಿಕೋನ ಮತ್ತು ಆರ್ಥಿಕ ಅಗತ್ಯಗಳಲ್ಲಿ ಬೆಳೆಯುತ್ತಿರುವ ಏಕರೂಪತೆಯು(ಒಮ್ಮುಖದಿಂದ ಹೊರಹೊಮ್ಮುವ) ನಮ್ಮ ದ್ವಿಪಕ್ಷೀಯ ಸಹಕಾರದ ಪ್ರಮುಖ ಆಧಾರಸ್ತಂಭವಾಗಿದೆ.

ಎರಡು ಚೈತನ್ಯಶೀಲ ಅಥವಾ ರೋಮಾಂಚನಾಕಾರಿ ಪ್ರಜಾಪ್ರಭುತ್ವಗಳಾಗಿ ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಗಳಾಗಿ, ಭಾರತ ಮತ್ತು ಜಪಾನ್ ನಮ್ಮ ರಾಜಕೀಯ ನಂಬಿಕೆ, ಆರ್ಥಿಕ ಚೈತನ್ಯ ಮತ್ತು ನೈಸರ್ಗಿಕ ಪೂರಕತೆಯ ಆಧಾರದ ಮೇಲೆ ನಿರ್ಣಾಯಕ ಮತ್ತು ಉದಯೋನ್ಮುಖ ವಲಯಗಳಲ್ಲಿ ತಮ್ಮ ಪಾಲುದಾರಿಕೆಯನ್ನು ವೇಗಗೊಳಿಸಲು ಬದ್ಧವಾಗಿವೆ.

  • ಭಾರತ ಮತ್ತು ಜಪಾನ್ 2024 ನವೆಂಬರ್ ನಲ್ಲಿ ವಿದೇಶಾಂಗ ಸಹಾಯಕ ಸಚಿವರು/ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಅಧ್ಯಕ್ಷತೆಯಲ್ಲಿ ಕಾರ್ಯತಂತ್ರ ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ಆರ್ಥಿಕ ಭದ್ರತೆ  ಕುರಿತ ಭಾರತ-ಜಪಾನ್ ಸಂವಾದದ ಮೊದಲ ಸುತ್ತು ಪ್ರಾರಂಭಿಸಿದವು.
  • ಅಸ್ತಿತ್ವದಲ್ಲಿರುವ ಸರ್ಕಾರಗಳ ನಡುವಿನ ಕಾರ್ಯವಿಧಾನಗಳು ಹಾಗೂ ಕಾರ್ಯತಂತ್ರ ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ಆರ್ಥಿಕ ಭದ್ರತೆ ಕುರಿತ ಸಂವಾದದ ಮೂಲಕ, ಭಾರತ ಮತ್ತು ಜಪಾನ್ ವಿದೇಶಾಂಗ ನೀತಿ ಮತ್ತು ಕೆಲವು ಆರ್ಥಿಕ ಅಂತರ್-ಸಂಪರ್ಕಗಳಿಂದ ಹೊರಹೊಮ್ಮುವ ಭದ್ರತಾ ಸವಾಲುಗಳ ಕುರಿತ ನೀತಿ ದೃಷ್ಟಿಕೋನಗಳನ್ನು ಹಂಚಿಕೊಂಡವು.
  • ಭಾರತ ಮತ್ತು ಜಪಾನ್ ಚೇತರಿಕೆಯ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ಸುರಕ್ಷಿತಗೊಳಿಸುವುದು, ಪ್ರಮುಖ ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಮತ್ತು ರಕ್ಷಿಸುವುದು, ಕಾರ್ಯತಂತ್ರ ವ್ಯಾಪಾರ ಮತ್ತು ತಂತ್ರಜ್ಞಾನ ಸಹಭಾಗಿತ್ವಕ್ಕೆ ದ್ವಿಪಕ್ಷೀಯ ಅಡೆತಡೆಗಳನ್ನು ಪರಿಹರಿಸುವಲ್ಲಿ ದ್ವಿಪಕ್ಷೀಯ ಸಹಕಾರ ಮುಂದುವರಿಸಲು ನಿರ್ಧರಿಸಿವೆ.
  • ಭಾರತ ಮತ್ತು ಜಪಾನ್ ಕಾರ್ಯತಂತ್ರ ಸಹಭಾಗಿತ್ವಕ್ಕಾಗಿ ಹೆಚ್ಚಿನ ಆದ್ಯತೆ ನೀಡುವ ಪ್ರಮುಖ ವಲಯಗಳನ್ನು ಗುರುತಿಸಿವೆ: ಸೆಮಿಕಂಡಕ್ಟರ್ ಗಳು, ನಿರ್ಣಾಯಕ ಖನಿಜಗಳು, ಔಷಧಗಳು, ಸ್ವಚ್ಛ ಇಂಧನ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ.
  • ಭಾರತ ಮತ್ತು ಜಪಾನ್ ಸರ್ಕಾರ ಎರಡೂ ದೇಶಗಳ ರಾಷ್ಟ್ರೀಯ ಆರ್ಥಿಕ ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವ ಖಾಸಗಿ ವಲಯದ ನೇತೃತ್ವದ ಪ್ರಯತ್ನಗಳನ್ನು ಬೆಂಬಲಿಸಲಿವೆ.
  • ಕೀಡನ್ರೆನ್(ಜಪಾನ್ ವ್ಯಾಪಾರ ಒಕ್ಕೂಟ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ನಡುವಿನ ಆರ್ಥಿಕ ಭದ್ರತೆ ಕುರಿತ ಭಾರತ-ಜಪಾನ್ ಖಾಸಗಿ ವಲಯದ ಸಂವಾದ ಆರಂಭವನ್ನು ಭಾರತ ಮತ್ತು ಜಪಾನ್ ಸ್ವಾಗತಿಸಿದವು. ಜಪಾನ್ ಬಾಹ್ಯ ವ್ಯಾಪಾರ ಸಂಸ್ಥೆ(ಜೆಟಿಆರ್ ಒ), ಸಿಐಐ ಮತ್ತು ಭಾರತದಲ್ಲಿನ ಜಪಾನ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ(ಜೆಸಿಸಿಐಐ) ಪ್ರಸ್ತಾಪಿಸಿದ ಭಾರತ-ಜಪಾನ್ ಆರ್ಥಿಕ ಮತ್ತು ಭದ್ರತಾ ಸಹಕಾರದ ಜಂಟಿ ಕ್ರಿಯಾಯೋಜನೆ ಅನುಸರಿಸಿ, ಕಾರ್ಯತಂತ್ರ ಕ್ಷೇತ್ರಗಳಲ್ಲಿ ಸಂಕೀರ್ಣ ಕ್ರಮಗಳನ್ನು ಮುನ್ನಡೆಸಲು ನಿಕಟ ಸಾರ್ವಜನಿಕ-ಖಾಸಗಿ ಸಹಕಾರದ ನಿರೀಕ್ಷೆಯನ್ನು ವ್ಯಕ್ತಪಡಿಸಿದವು.

ಸೆಮಿಕಂಡಕ್ಟರ್‌ಗಳು

ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ) ಮತ್ತು ಜಪಾನ್‌ನ ಆರ್ಥಿಕ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ(ಎಂಇಟಿಐ) 2023 ಜುಲೈ  ನಲ್ಲಿ ಭಾರತ-ಜಪಾನ್ ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಪಾಲುದಾರಿಕೆಯ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು, ಇದು ಸೆಮಿಕಂಡಕ್ಟರ್‌ ಪೂರೈಕೆ ಸರಪಳಿ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ಬಲಪಡಿಸುತ್ತದೆ.

● ಸೆಮಿಕಂಡಕ್ಟರ್ ನೀತಿ ಸಂವಾದದ ಅಡಿ ಭಾರತ ಮತ್ತು ಜಪಾನ್, ಸಭೆಗಳನ್ನು ನಡೆಸಿದವು. ಇದು ಸರ್ಕಾರಿ ಸಂಸ್ಥೆಗಳು, ಕಂಪನಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಟ್ಟುಗೂಡಿಸಿತು, ಇದು ಸೆಮಿಕಂಡಕ್ಟರ್ ವಲಯದಲ್ಲಿ ಸುಧಾರಿತ ಪೂರೈಕೆ ಸರಪಳಿಗಳು, ಪ್ರತಿಭೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ಅನ್ವೇಷಿಸಲು ಸಹಾಯ ಮಾಡಿತು.

ಆರ್ಥಿಕ ಭದ್ರತೆಗೆ ಕೊಡುಗೆ ನೀಡುವ ಚಟುವಟಿಕೆಗಳು ಸೇರಿದಂತೆ ಖಾಸಗಿ ವಲಯವು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಭಾರತ ಮತ್ತು ಜಪಾನ್ ಶ್ಲಾಘಿಸಿದವು. ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ವೈವಿಧ್ಯಗೊಳಿಸುವ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿ ಭಾರತದಲ್ಲಿ ಸೆಮಿಕಂಡಕ್ಟರ್ ಕೈಗಾರಿಕೆಗಳ ಅಭಿವೃದ್ಧಿಯನ್ನು ಬೆಂಬಲಿಸುವುದು, ಪ್ರತಿಭೆ ಸೇರಿದಂತೆ ದ್ವಿಪಕ್ಷೀಯ ಸಹಕಾರ ಬಲಪಡಿಸುವ ಕೆಳಗಿನ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು:

ಗುಜರಾತ್‌ನ ಸನಂದ್‌ನಲ್ಲಿ ಜಪಾನಿನ ಸೆಮಿಕಂಡಕ್ಟರ್ ಸಂಸ್ಥೆ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಮತ್ತು ಸಿಜಿ ಪವರ್ ನಡುವೆ ಸೆಮಿಕಂಡಕ್ಟರ್ ಓಎಸ್‌ಎಟಿ ಸ್ಥಾಪನೆ.

◦ 2025 ಮೇ ನಲ್ಲಿ ರೆನೆಸಾಸ್ ಮತ್ತು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ ನಡುವೆ ಎಂಇಐಟಿವೈ ನ ಚಿಪ್ಸ್ ಟು ಸ್ಟಾರ್ಟಪ್(ಸಿ2ಎಸ್) ಕಾರ್ಯಕ್ರಮದಡಿ, 2 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಒಪ್ಪಂದಗಳು ಉದ್ಯಮ-ಶೈಕ್ಷಣಿಕ ಸಹಭಾಗಿತ್ವ ಹೆಚ್ಚಿಸುತ್ತವೆ ಮತ್ತು ಸ್ಥಳೀಯ ನವೋದ್ಯಮಗಳಿಗೆ ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸಲು ಮತ್ತು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಅನುವು ಮಾಡಿಕೊಡುತ್ತದೆ. ಮತ್ತು,

◦ ವಿಎಲ್ಎಸ್ಐ ಮತ್ತು ಎಂಬೆಡೆಡ್ ಸೆಮಿಕಂಡಕ್ಟರ್ ವ್ಯವಸ್ಥೆಗಳ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಸಹಭಾಗಿತ್ವಕ್ಕಾಗಿ ರೆನೆಸಾಸ್ 2024 ಜೂನ್ ನಲ್ಲಿ ಐಐಟಿ-ಹೈದರಾಬಾದ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು.

◦ ಭಾರತದಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಟೋಕಿಯೊ ಎಲೆಕ್ಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಯತಂತ್ರ ಪಾಲುದಾರಿಕೆಯನ್ನು ಪ್ರಾರಂಭಿಸಿದವು.

● ಜಪಾನ್ ಮತ್ತು ಭಾರತವು ಕ್ವಾಡ್ ಮೂಲಕ, ವಿಶೇಷವಾಗಿ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳ ಅನಿರೀಕ್ಷಿತ ಜಾಲದ ಮೂಲಕ ಆರ್ಥಿಕ ಭದ್ರತೆ ಮತ್ತು ಸಾಮೂಹಿಕ ಚೇತರಿಕೆ ಅಥವಾ ಸುಧಾರಣೆ ಕುರಿತು ತಮ್ಮ ಸಹಭಾಗಿತ್ವ ಬಲಪಡಿಸುವುದನ್ನು ಮುಂದುವರೆಸಿದೆ.

●ಸೆಮಿಕಂಡಕ್ಟರ್ ಉದ್ಯಮ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯ ಉದ್ಯಮ ಮತ್ತು ಸ್ಟಾರ್ಟಪ್ ಕಂಪನಿಗಳಿಗಾಗಿ ತಮಿಳುನಾಡು ಸರ್ಕಾರವು ಸ್ಥಾಪಿಸಿದ ನಿಧಿಯನ್ನು ಬೆಂಬಲಿಸಲು ತಮಿಳುನಾಡು ಹೂಡಿಕೆ ಉತ್ತೇಜನಾ ಕಾರ್ಯಕ್ರಮ(ಹಂತ 3) ಶೀರ್ಷಿಕೆಯ ಜಪಾನ್‌ನ ಯೆನ್ ಸಾಲ ಯೋಜನೆಗೆ ಸಂಬಂಧಿಸಿದಂತೆ, ಭಾರತ ಮತ್ತು ಜಪಾನ್ ಸಹಿ ಹಾಕಿ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಂಡವು.

ನಿರ್ಣಾಯಕ ಖನಿಜಗಳು

● ಖನಿಜ ಭದ್ರತಾ ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್ ಆರ್ಥಿಕ ಮಾರ್ಗಸೂಚಿ ಮತ್ತು ಕ್ವಾಡ್ ನಿರ್ಣಾಯಕ ಖನಿಜಗಳ ಉಪಕ್ರಮಗಳಲ್ಲಿ ಪಾಲುದಾರಿಕೆಯ ಮೂಲಕ ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳನ್ನು ಬಲಪಡಿಸಲು ಭಾರತ ಮತ್ತು ಜಪಾನ್ ಒಟ್ಟಾಗಿ ಕೆಲಸ ಮಾಡುತ್ತಿವೆ.

● ಭಾರತದ ಗಣಿ ಸಚಿವಾಲಯ ಮತ್ತು ಜಪಾನ್‌ನ ಎಂಇಟಿಐ 2025 ಆಗಸ್ಟ್ ನಲ್ಲಿ ಖನಿಜ ಸಂಪನ್ಮೂಲಗಳ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು.

● ಆಂಧ್ರಪ್ರದೇಶದ ಟೊಯೋಟಾ ತ್ಸುಶೋ ರೇರ್ ಅರ್ಥ್ ರಿಫೈನಿಂಗ್ ಪ್ರಾಜೆಕ್ಟ್ ಮೂಲಕ ಭೂಮಿಯ ಅಪರೂಪದ ಖನಿಜಗಳಿಗೆ ಸ್ಥಿರವಾದ ಪೂರೈಕೆ ಸರಪಳಿ ಸ್ಥಾಪಿಸುವ ಗುರಿ ಹೊಂದಲು ಭಾರತ ಮತ್ತು ಜಪಾನ್ ತಮ್ಮ ಸಹಭಾಗಿತ್ವ ಹೆಚ್ಚಿಸಿಕೊಂಡವು.

ಮಾಹಿತಿ ಮತ್ತು ಸಂಪರ್ಕ(ಸಂವಹನ) ತಂತ್ರಜ್ಞಾನ

● ಆಂತರಿಕ ವ್ಯವಹಾರಗಳು ಮತ್ತು ಸಂವಹನ ಸಚಿವಾಲಯ(ಎಂಐಸಿ)ವು ಭಾರತದಲ್ಲಿ ಓಪನ್ RAN ಪೈಲಟ್ ಯೋಜನೆಯನ್ನು ಬೆಂಬಲಿಸಿದೆ, ಈ ವಲಯದಲ್ಲಿ ಸಹಭಾಗಿತ್ವವನ್ನು ಇನ್ನಷ್ಟು ಗಾಢಗೊಳಿಸಲು ನಿರ್ಧರಿಸಿದೆ.

● ಎನ್ಇಸಿ ಮತ್ತು ರಿಲಯನ್ಸ್ ಜಿಯೋ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ, ವಿಶೇಷವಾಗಿ 5ಜಿ ತಂತ್ರಜ್ಞಾನ ಮತ್ತು ಓಪನ್ RAN ನಲ್ಲಿ ಸಹಕರಿಸಲು ಕಾರ್ಯತಂತ್ರ ಪಾಲುದಾರಿಕೆ ಸ್ಥಾಪಿಸಿವೆ.

● ಎನ್ಇಸಿ, ಚೆನ್ನೈನಲ್ಲಿರುವ ತನ್ನ ಶ್ರೇಷ್ಠತಾ ಕೇಂದ್ರದ ಪ್ರಯೋಗಾಲಯದ ಮೂಲಕ, ಪರಿಪೂರ್ಣವಾಗಿ ತೆರೆದ(ಎಂಡ್-ಟು-ಎಂಡ್ ಓಪನ್) RAN ಸಿಸ್ಟಮ್ ಅಭಿವೃದ್ಧಿಯನ್ನು ಉತ್ತೇಜಿಸಿದೆ.

● ಭಾರತದ ಸಂಪರ್ಕ(ಸಂವಹನ) ಸಚಿವಾಲಯ ಮತ್ತು ಜಪಾನ್‌ನ ಎಂಐಸಿ, 2022 ಮೇ ನಲ್ಲಿ ಭಾರತ-ಜಪಾನ್ ಐಸಿಟಿ ಸಹಕಾರ ಮಾರ್ಗಸೂಚಿ ಅಡಿಯಲ್ಲಿ 7ನೇ ಭಾರತ-ಜಪಾನ್ ಐಸಿಟಿ ಜಂಟಿ ಕಾರ್ಯಕಾರಿ ಗುಂಪಿನ ಸಭೆ ನಡೆಸಿತು, ಇದು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಭಾಗಿತ್ವ ಬೆಳೆಸುವ ಗುರಿ ಹೊಂದಿದೆ.

● ಜಪಾನ್ ಐಸಿಟಿ ನಿಧಿ(ಜೆಐಸಿಟಿ) ಮತ್ತು ಜಪಾನ್ ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಕೋ-ಆಪರೇಷನ್(ಜೆಬಿಐಸಿ) ಮೂಲಕ ಜಂಟಿ ಯೋಜನೆಗಳಲ್ಲಿ ಸಹಭಾಗಿತ್ವ ಗಾಢವಾಗಿಸುವುದನ್ನು ಭಾರತ ಮತ್ತು ಜಪಾನ್ ಮುಂದುವರಿಸುತ್ತವೆ.

● ಜೆಐಸಿಟಿ ಮತ್ತು ಜೆಬಿಐಸಿ ಮೂಲಕ ಹೂಡಿಕೆ ಮತ್ತು ಹಣಕಾಸು ಅನುಷ್ಠಾನದ ಮೂಲಕ ತನ್ನ ಡೇಟಾ ಸೆಂಟರ್ ವ್ಯವಹಾರವನ್ನು(ಪ್ರಸ್ತುತ 20 ಡೇಟಾ ಕೇಂದ್ರಗಳು) ವಿಸ್ತರಿಸುವುದನ್ನು ಮುಂದುವರಿಸಲು ಎನ್ ಟಿಟಿ ಯೋಜಿಸಿದೆ.

ಸ್ವಚ್ಛ ಇಂಧನ

● 2025 ಆಗಸ್ಟ್ ನಲ್ಲಿ ನಡೆದ 11ನೇ ಭಾರತ-ಜಪಾನ್ ಇಂಧನ ಸಂವಾದದ ಜಂಟಿ ಹೇಳಿಕೆಯನ್ನು ಭಾರತ ಮತ್ತು ಜಪಾನ್ ಸ್ವಾಗತಿಸಿದವು.

● ಜಂಟಿ ಕ್ರೆಡಿಟಿಂಗ್ ಮೆಕ್ಯಾನಿಸಂ(ಜೆಸಿಎಂ) ಕುರಿತ ಸಹಕಾರ ಜ್ಞಾಪಕ ಪತ್ರಕ್ಕೆ ಸಹಿ ಹಾಕಿರುವುದನ್ನು ಭಾರತ ಮತ್ತು ಜಪಾನ್ ಸ್ವಾಗತಿಸಿದವು.

● ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಎಂಇಟಿಐ, ಸ್ವಚ್ಛ ಹೈಡ್ರೋಜನ್ ಮತ್ತು ಅಮೋನಿಯಕ್ಕೆ ಸಂಬಂಧಿಸಿದ ಜಂಟಿ ಹೇಳಿಕೆಗಳನ್ನು ಹೊರಡಿಸಿದವು.

● ಗುಜರಾತ್‌ನ ಮುಂಡ್ರಾ ವಿದ್ಯುತ್ ಸ್ಥಾವರದಲ್ಲಿ ಅಮೋನಿಯಾ ಕೋ-ಫೈರಿಂಗ್  ಪ್ರದರ್ಶನಕ್ಕಾಗಿ(co-firing demonstration) ಐಎಚ್‌ಐ ಕಾರ್ಪೊರೇಷನ್, ಕೋವಾ ಮತ್ತು ಅದಾನಿ ಪವರ್ ಲಿಮಿಟೆಡ್ ಸಹಭಾಗಿತ್ವಕ್ಕೆ ಸಹಿ ಹಾಕಿದವು.

● ಜೆಬಿಐಸಿ ಮತ್ತು ಒಸಾಕಾ ಗ್ಯಾಸ್, ಕ್ಲೀನ್ ಮ್ಯಾಕ್ಸ್ ಜೊತೆ ಸಹ-ಹೂಡಿಕೆ ಪಾಲುದಾರಿಕೆ ರೂಪಿಸುವ ಒಪ್ಪಂದಕ್ಕೆ ಸಹಿ ಹಾಕಿವೆ, ಇದನ್ನು ಕ್ಲೀನ್ ಮ್ಯಾಕ್ಸ್ ಒಸಾಕಾ ಗ್ಯಾಸ್ ನವೀಕರಿಸಬಹುದಾದ ಇಂಧನ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ, ಇದು ಮುಂದಿನ 3 ವರ್ಷಗಳಲ್ಲಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊಸ ಅಭಿವೃದ್ಧಿ ಸ್ವತ್ತುಗಳನ್ನು ಒಳಗೊಂಡಂತೆ 400 ಮೆಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ನಿರ್ವಹಣೆಗೆ ಅನುವು ಮಾಡಿಕೊಡುತ್ತದೆ.

● ಜಾಗತಿಕ ಜೈವಿಕ ಇಂಧನ ಒಕ್ಕೂಟದಂತಹ ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಮೂಲಕ ಭಾರತ ಮತ್ತು ಜಪಾನ್ ಜೈವಿಕ ಇಂಧನಗಳಲ್ಲಿ ತಮ್ಮ ಸಹಕಾರವನ್ನು ಮುಂದುವರಿಸುತ್ತವೆ.

● 70ಕ್ಕೂ ಹೆಚ್ಚು ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಬ್ಯಾಟರಿ ಮತ್ತು ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಯ ಕುರಿತು ಜೆಟ್ರೊ ಮತ್ತು ಜಪಾನ್ ಸರ್ಕಾರವು ಭಾರತದಲ್ಲಿ ಆಯೋಜಿಸಿದ ವ್ಯಾಪಾರ ಹೊಂದಾಣಿಕೆ ಮತ್ತು ದುಂಡುಮೇಜಿನ ಸಭೆ ಸೇರಿದಂತೆ ಬ್ಯಾಟರಿ ಪೂರೈಕೆ ಸರಪಳಿ ಸಹಕಾರವನ್ನು ಉತ್ತೇಜಿಸುವ ಉಪಕ್ರಮವನ್ನು ಭಾರತ ಮತ್ತು ಜಪಾನ್ ಸ್ವಾಗತಿಸಿವೆ.

● ಭಾರತ ಸರ್ಕಾರ ಮತ್ತು ಜೆಬಿಐಸಿ ಸ್ಥಾಪಿಸಿದ ಭಾರತ-ಜಪಾನ್ ನಿಧಿಯ ಮೂಲಕ ಪರಿಸರ ಸಂರಕ್ಷಣೆ ಮತ್ತು ಇತರ ಕ್ಷೇತ್ರಗಳಲ್ಲಿ ಹೂಡಿಕೆ ಉತ್ತೇಜಿಸುವುದನ್ನು ಭಾರತ ಮತ್ತು ಜಪಾನ್ ಸ್ವಾಗತಿಸಿವೆ

● ಈಶಾನ್ಯ ಭಾರತದ ಅಸ್ಸಾಂನಲ್ಲಿ ಬಿದಿರು ಆಧಾರಿತ ಬಯೋಇಥೆನಾಲ್ ಉತ್ಪಾದನಾ ಯೋಜನೆಯನ್ನು ಬೆಂಬಲಿಸಲು ಜೆಪಿವೈ, 60 ಶತಕೋಟಿ ಮೊತ್ತದ ಸಾಲ ಒಪ್ಪಂದಕ್ಕೆ ಜೆಬಿಐಸಿ ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ಸಹಿ ಹಾಕಿವೆ, ಇದನ್ನು ಅಸ್ಸಾಂ ಬಯೋ ಎಥೆನಾಲ್ ಪ್ರೈವೇಟ್ ಲಿಮಿಟೆಡ್ ಜಾರಿಗೆ ತರುತ್ತಿದೆ.

● ಭಾರತದ ಮಾದರಿ ಬದಲಾವಣೆಗೆ ಕೊಡುಗೆ ನೀಡಲು ಜಪಾನಿನ ಆಟೋಮೊಬೈಲ್ ಬಿಡಿಭಾಗಗಳ ಕಂಪನಿಗಳ(ಯೊಕೊಹಾಮಾ ರಬ್ಬರ್, ಯಝಾಕಿ ಕಾರ್ಪೊರೇಷನ್, ಇತ್ಯಾದಿ) ಹೂಡಿಕೆ ಯೋಜನೆಗಳಿಗೆ ಹಣಕಾಸು ಒದಗಿಸುವುದು, ಜಪಾನಿನ ಆಟೋಮೊಬೈಲ್ ತಯಾರಕರ ಪೂರೈಕೆ ಸರಪಳಿಗಳನ್ನು ಬಲಪಡಿಸಲು ಸಾಲಗಳು (ಪರಿಸರಸ್ನೇಹಿ ವಾಹನಗಳು) ಮತ್ತು ಜಪಾನಿನ ಸರಕು ಸಾಗಣೆ ಕಂಪನಿಗಳ ರೈಲ್ವೆ ಕಂಟೇನರ್ ಸಾರಿಗೆ ವ್ಯವಹಾರಕ್ಕೆ(ಕೊನೊಯಿಕೆ ಸಾರಿಗೆ) ಬೆಂಬಲ ಸೇರಿದಂತೆ ಹಣಕಾಸು ಬೆಂಬಲದ ಕ್ರಮಗಳನ್ನು ಜೆಬಿಐಸಿ ಜಾರಿಗೆ ತಂದಿದೆ.

ವೈಜ್ಞಾನಿಕ ಸಹಕಾರ

● ಈ ವರ್ಷ ಭಾರತ ಮತ್ತು ಜಪಾನ್ ತಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತಿದ್ದು, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ವಿನಿಮಯದ ವರ್ಷವನ್ನಾಗಿ ಆಚರಿಸುತ್ತಿವೆ.

● ಭಾರತ ಮತ್ತು ಜಪಾನ್ ಜೂನ್ 2025ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಕುರಿತಾದ 11ನೇ ಜಂಟಿ ಸಮಿತಿ ಸಭೆ ನಡೆಸಿತು, ವಿಶೇಷವಾಗಿ ಕೃತಕ ಬುದ್ಧಿಮತ್ತೆ,  ಕ್ವಾಂಟಮ್ ತಂತ್ರಜ್ಞಾನಗಳು, ಜೈವಿಕ ತಂತ್ರಜ್ಞಾನ, ಹವಾಮಾನ ಬದಲಾವಣೆ ತಂತ್ರಜ್ಞಾನ ಮತ್ತು ಬಾಹ್ಯಾಕಾಶದಂತಹ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಪೂರ್ಣ ಶ್ರೇಣಿಯ ವೈಜ್ಞಾನಿಕ ಸಹಕಾರ ಕುರಿತು ಚರ್ಚೆಗಳನ್ನು ನಡೆಸಿತು.

● ಭಾರತ ಮತ್ತು ಜಪಾನ್ ವಾಹನದಿಂದ ಎಲ್ಲವನ್ನೂ (ವಿ2ಎಕ್ಸ್) ಕುರಿತು ಹಲವಾರು ಜಂಟಿ ಪ್ರದರ್ಶನ ಪ್ರಯೋಗಗಳನ್ನು ನಡೆಸಿವೆ, 2019ರಿಂದ ವಿ2ಎಕ್ಸ್ ವ್ಯವಸ್ಥೆಯಲ್ಲಿ ವಾರ್ಷಿಕ ತಾಂತ್ರಿಕ-ಕಾರ್ಯಾಗಾರಗಳನ್ನು ನಡೆಸಿವೆ ಮತ್ತು ವಿ2ಎಕ್ಸ್ ತಂತ್ರಜ್ಞಾನಗಳು ಮತ್ತು ಬುದ್ಧಿವಂತ ಸಾರಿಗೆ ವ್ಯವಸ್ಥೆಗಳಲ್ಲಿ ಸಹಕರಿಸುವ ಅವಕಾಶಗಳನ್ನು ಅನುಸರಿಸಿವೆ.

● ಜಪಾನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(ಜೆಎಟ್ ಟಿ) ಮತ್ತು ಡಿಎಸ್ ಟಿ ನಡುವೆ SICORP ಮೂಲಕ ಅತ್ಯಾಧುನಿಕ ಕ್ಷೇತ್ರಗಳ ಪ್ರಸ್ತಾವನೆಗಳಿಗಾಗಿ ಅಂತಾರಾಷ್ಟ್ರೀಯ ಜಂಟಿ ಕರೆಗಳನ್ನು ಭಾರತ ಮತ್ತು ಜಪಾನ್ ಕಾರ್ಯಗತಗೊಳಿಸುತ್ತವೆ.

● ಭಾರತ ಮತ್ತು ಜಪಾನ್ ಭಾರತ-ಜಪಾನ್ ಎಐ ಸಹಕಾರ ಉಪಕ್ರಮ ಪ್ರಾರಂಭಿಸಿವೆ, ಇದು ಜಂಟಿ ಸಂಶೋಧನೆ, ವಿಶ್ವವಿದ್ಯಾಲಯಗಳು ಮತ್ತು ಕಂಪನಿಗಳ ನಡುವಿನ ಉಪಕ್ರಮಗಳ ಉತ್ತೇಜನ, ದೊಡ್ಡ ಭಾಷಾ ಮಾದರಿಗಳ (ಎಲ್ಎಲ್ಎಂಗಳು) ಅಭಿವೃದ್ಧಿ ಸಹಭಾಗಿತ್ವ ಮತ್ತು ವಿಶ್ವಾಸಾರ್ಹ ಎಐ ಪರಿಸರ ವ್ಯವಸ್ಥೆ ಬೆಳೆಸುವ ಕಡೆಗೆ ಸಹಕಾರದ ಮೂಲಕ ಎಐ ಕಾರ್ಯತಂತ್ರ ಸಹಭಾಗಿತ್ವವನ್ನು ಉತ್ತೇಜಿಸುತ್ತದೆ.

● ಸೆಮಿಕಂಡಕ್ಟರ್‌ಗಳು, ಎಐ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸಂಶೋಧನೆ & ಅಭಿವೃದ್ಧಿ, ಸ್ಟಾರ್ಟಪ್‌ಗಳು ಸೇರಿದಂತೆ ಡಿಜಿಟಲ್ ವಲಯದಲ್ಲಿ ಸಹಭಾಗಿತ್ವ ಉತ್ತೇಜಿಸಲು ಭಾರತ ಮತ್ತು ಜಪಾನ್ 2025ರಲ್ಲಿ ಡಿಜಿಟಲ್ ಪಾಲುದಾರಿಕೆ 2.0 ಕುರಿತಾದ ಸಹಕಾರ ಒಪ್ಪಂದವನ್ನು ನವೀಕರಿಸಿದವು.

● ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ವಿದ್ಯಾರ್ಥಿಗಳು ಜಪಾನ್‌ನಲ್ಲಿ LOTUS ಕಾರ್ಯಕ್ರಮ ಮತ್ತು ಸಕುರಾ ವಿಜ್ಞಾನ ವಿನಿಮಯ ಕಾರ್ಯಕ್ರಮದಂತಹ ಸಂಶೋಧನೆಗಳನ್ನು ನಡೆಸಲು ಮತ್ತು ಇಂಟರ್ನ್‌ಶಿಪ್‌ಗಳ ಮೂಲಕ ಜಪಾನಿನ ಕಂಪನಿಗಳೊಂದಿಗೆ ಹೊಂದಾಣಿಕೆಯನ್ನು ಸುಗಮಗೊಳಿಸಲು ಬೆಂಬಲ ನೀಡುವ ಮೂಲಕ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ವಿನಿಮಯವನ್ನು ಭಾರತ ಮತ್ತು ಜಪಾನ್ ಬಲಪಡಿಸಿದವು.

● ವೈಜ್ಞಾನಿಕ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಭಾಗಿತ್ವ ಉತ್ತೇಜಿಸಲು ಜಪಾನಿನ ಶಿಕ್ಷಣ, ಸಂಸ್ಕೃತಿ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ(MEXT)ವು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದೊಂದಿಗೆ ಜಂಟಿ ಆಸಕ್ತಿ ಹೇಳಿಕೆಗೆ(JSOI) ಸಹಿ ಹಾಕಿತು.

● ಎನ್ ಟಿಟಿ ಡೇಟಾ, ಕ್ಲೌಡ್ ಪ್ಲಾಟ್‌ಫಾರ್ಮ್ ಕಂಪನಿ ನೇಸಾ ನೆಟ್‌ವರ್ಕ್ಸ್ ಮತ್ತು ತೆಲಂಗಾಣ ಸರ್ಕಾರವು 10,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಹೈದರಾಬಾದ್‌ನಲ್ಲಿ ಎಐ ಡೇಟಾ ಸೆಂಟರ್ ಕ್ಲಸ್ಟರ್ ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದವು.

ಔಷಧ ವಲಯ

●ಜಪಾನ್‌ನ ಸ್ಟ್ರಾಟೆಜಿಕ್ ಇಂಟರ್ ನ್ಯಾಷನಲ್ ಕೊಲ್ಯಾಬೊರೇಟಿವ್ ರಿಸರ್ಚ್ ಪ್ರೋಗ್ರಾಂ ಅಡಿ, ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಸಹಕಾರಕ್ಕಾಗಿ ಜಪಾನ್ ಏಜೆನ್ಸಿ ಫಾರ್ ಮೆಡಿಕಲ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಿವೆ.

●ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ಮತ್ತು ಜಪಾನ್‌ನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ನಡುವೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

● ಸಮಾನ ಮನಸ್ಕ ದೇಶಗಳ ನಡುವೆ ಬಯೋಫಾರ್ಮಾಸ್ಯುಟಿಕಲ್ ಅಲೈಯನ್ಸ್ ಮೂಲಕ ಸುಧಾರಿತ ಪೂರೈಕೆ ಸರಪಳಿ ನಿರ್ಮಿಸುವ ಪ್ರಯತ್ನಗಳಲ್ಲಿ ಭಾರತ ಮತ್ತು ಜಪಾನ್ ಸಹಭಾಗಿತ್ವವನ್ನು ಮುಂದುವರಿಸುತ್ತವೆ.

● ಜೆಬಿಐಸಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ರಾಸಾಯನಿಕ ಮತ್ತು ಔಷಧೀಯ ಕೈಗಾರಿಕೆಗಳಲ್ಲಿ ಜಪಾನಿನ ಕಂಪನಿಗಳಿಂದ ಹೂಡಿಕೆ ಯೋಜನೆಗಳಿಗೆ ಸಾಲಗಳನ್ನು ಒದಗಿಸುತ್ತಿದೆ.

ನಮ್ಮ ಪಾಲುದಾರಿಕೆ ವಿಸ್ತರಣೆ

ಜಾಗತಿಕ ಸವಾಲುಗಳ ಹಿನ್ನೆಲೆಯಲ್ಲಿ ನಿರ್ಣಾಯಕ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ತಮ್ಮ ಹಂಚಿಕೆಯ ಆಸಕ್ತಿಯನ್ನು ಗುರುತಿಸಿರುವ ಜಪಾನ್ ಮತ್ತು ಭಾರತ, ಆರ್ಥಿಕ ಭದ್ರತಾ ಕ್ಷೇತ್ರದಲ್ಲಿ ಸಹಕಾರ ಮುಂದುವರಿಸಲು ಬದ್ಧವಾಗಿವೆ. ಇಂಡೋ-ಪೆಸಿಫಿಕ್ ಮತ್ತು ಅದರಾಚೆಗೆ ನಿಯಮ ಆಧಾರಿತ ಆರ್ಥಿಕ ಕ್ರಮಕ್ಕಾಗಿ ತಮ್ಮ ಸಾಮಾನ್ಯ ದೃಷ್ಟಿಕೋನದಲ್ಲಿ ನೆಲೆಗೊಂಡಿರುವ ಎರಡೂ ದೇಶಗಳು, ಕಾರ್ಯತಂತ್ರ ಕ್ಷೇತ್ರಗಳಲ್ಲಿ ಚೇತರಿಕೆ ನಿರ್ಮಿಸಲು, ತಂತ್ರಜ್ಞಾನ ಮತ್ತು ಮೂಲಸೌಕರ್ಯ ಭದ್ರತೆಯನ್ನು ಹೆಚ್ಚಿಸಲು, ವಿಶ್ವಾಸಾರ್ಹ ಮತ್ತು ಪಾರದರ್ಶಕ ಮಾರ್ಗಸೂಚಿಗಳನ್ನು ಉತ್ತೇಜಿಸಲು ಸರ್ಕಾರ, ಕೈಗಾರಿಕೆ ಮತ್ತು ಶೈಕ್ಷಣಿಕ ವಲಯದಲ್ಲಿ ಸಹಭಾಗಿತ್ವವನ್ನು ಗಾಢವಾಗಿಸುವುದನ್ನು ಮುಂದುವರಿಸುತ್ತವೆ.

 

*****


(Release ID: 2162207)