ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಉನ್ನತ ಶಿಕ್ಷಣ ಇಲಾಖೆಯು ಉನ್ನತ ಶಿಕ್ಷಣ ಸಂಸ್ಥೆಗಳು (ಹೆಚ್.ಇ.ಐ) ಮತ್ತು ಪಾಲಿಟೆಕ್ನಿಕ್ ಗಳಿಂದ 21 ಶಿಕ್ಷಕರನ್ನು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ (ಎನ್.ಎ.ಟಿ) 2025 ಕ್ಕೆ ಆಯ್ಕೆ ಮಾಡಿದೆ
Posted On:
26 AUG 2025 4:37PM by PIB Bengaluru
ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ಉನ್ನತ ಶಿಕ್ಷಣ ಸಂಸ್ಥೆಗಳು (ಹೆಚ್.ಇ.ಐ) ಮತ್ತು ಪಾಲಿಟೆಕ್ನಿಕ್ ಗಳಿಂದ 21 ಶಿಕ್ಷಕರನ್ನು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ (ಎನ್.ಎ.ಟಿ) 2025 ಕ್ಕೆ ಆಯ್ಕೆ ಮಾಡಿದೆ.
ವಿದ್ಯಾರ್ಥಿಗಳು, ಸಂಸ್ಥೆ ಮತ್ತು ವೃತ್ತಿಯ ಪ್ರಗತಿಗೆ ಪ್ರೇರಿತ, ಶಕ್ತಿಯುತ ಮತ್ತು ಸಮರ್ಥ ಶಿಕ್ಷಕರು ನಿರ್ಣಾಯಕ ಎಂದು ಎನ್.ಇ.ಪಿ 2020 ಗುರುತಿಸುತ್ತದೆ. ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಶ್ರೇಷ್ಠತೆಯ ಸಂಸ್ಕೃತಿಯನ್ನು ಬೆಳೆಸಲು ಪ್ರತಿಫಲಗಳು ಮತ್ತು ಮನ್ನಣೆಯಂತಹ ಪ್ರೋತ್ಸಾಹಗಳನ್ನು ಸಹ ಇದು ಹೊಂದಿದೆ. ಆದ್ದರಿಂದ, 2023 ರಲ್ಲಿ, ಎನ್.ಎ.ಟಿ ಸಮೂಹದ ಅಡಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು (ಹೆಚ್.ಇ.ಐ) ಮತ್ತು ಪಾಲಿಟೆಕ್ನಿಕ್ ಗಳಿಗೆ ಎರಡು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು, ಇವು ಇಲ್ಲಿಯವರೆಗೆ ಶಾಲಾ ಶಿಕ್ಷಕರಿಗೆ ಮಾತ್ರ ಸೀಮಿತವಾಗಿದ್ದವು.
ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್ ಗಳ ಅನುಕರಣೀಯ ಶಿಕ್ಷಕರು/ಅಧ್ಯಾಪಕರಿಗೆ ಈ ಕೆಳಗಿನ ವರ್ಗಗಳ ಪ್ರಕಾರ ಷ್ಟ್ರೀಯ ಶಿಕ್ಷಕ ಪ್ರಶಸ್ತಿ (ಎನ್.ಎ.ಟಿ) ನೀಡಲಾಗುತ್ತದೆ:
ವರ್ಗ I: ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು:
ಉಪ-ವರ್ಗ (i) : ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವಾಸ್ತುಶಿಲ್ಪ.
ಉಪ-ವರ್ಗ (ii) : ಗಣಿತ, ಭೌತವಿಜ್ಞಾನ, ಜೈವಿಕ ವಿಜ್ಞಾನ, ರಾಸಾಯನಿಕ ವಿಜ್ಞಾನ, ಔಷಧ, ಔಷಧಶಾಸ್ತ್ರ ಸೇರಿದಂತೆ ಶುದ್ಧ ವಿಜ್ಞಾನಗಳು
ಉಪ-ವರ್ಗ (iii) : ಕಲೆ ಮತ್ತು ಸಮಾಜ ವಿಜ್ಞಾನ, ಮಾನವಿಕ, ಭಾಷೆಗಳು, ಕಾನೂನು ಅಧ್ಯಯನ, ವಾಣಿಜ್ಯ, ನಿರ್ವಹಣೆ.
ವರ್ಗ II : ಪಾಲಿಟೆಕ್ನಿಕ್ ಸಂಸ್ಥೆಗಳ ಶಿಕ್ಷಕರು: ಒಟ್ಟು 10 ಪ್ರಶಸ್ತಿಗಳು
ಆಯ್ಕೆಯಾದ 21 ಶಿಕ್ಷಕರು ಪಾಲಿಟೆಕ್ನಿಕ್ ಗಳು, ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರಿದ್ದಾರೆ.
ಬೋಧನೆ-ಕಲಿಕೆಯ ಪರಿಣಾಮಕಾರಿತ್ವ, ಔಟ್ರೀಚ್ ಚಟುವಟಿಕೆಗಳು, ಸಂಶೋಧನೆ ಮತ್ತು ನಾವೀನ್ಯತೆ, ಪ್ರಾಯೋಜಿತ ಸಂಶೋಧನೆ/ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು/ಸಮಾಲೋಚನಾ ಬೋಧನೆಯಂತಹ ಮಾನದಂಡಗಳ ಆಧಾರದ ಮೇಲೆ ಶಿಕ್ಷಕರ ಕಾರ್ಯಕ್ಷಮತೆಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಮೇಲಿನವುಗಳಲ್ಲಿ, ಕಲಿಕೆಯ ಪರಿಣಾಮಕಾರಿತ್ವ ಮತ್ತು ಔಟ್ರೀಚ್ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ಎನ್.ಎ.ಟಿ -2025ರ ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳನ್ನು ಒಳಗೊಂಡಿದೆ; (i) ನಾಮನಿರ್ದೇಶಿತರ ಆರಂಭಿಕ ಶಾರ್ಟ್‌ಲಿಸ್ಟ್‌ಗಾಗಿ ಪ್ರಾಥಮಿಕ ಹುಡುಕಾಟ ಮತ್ತು ಪರಿಶೀಲನಾ ಸಮಿತಿಯಿಂದ ಮೌಲ್ಯಮಾಪನ ಮತ್ತು (ii) ರಾಷ್ಟ್ರೀಯ ತೀರ್ಪುಗಾರರಿಂದ ಶಾರ್ಟ್‌ಲಿಸ್ಟ್ ಮಾಡಲಾದ ನಾಮನಿರ್ದೇಶಿತರಿಂದ ಪ್ರಶಸ್ತಿ ಪುರಸ್ಕೃತರ ಆಯ್ಕೆ.
ಎನ್.ಎ.ಟಿ, 2025 ಕ್ಕೆ ನಾಮನಿರ್ದೇಶನಗಳನ್ನು @www.awards.gov.in ನಲ್ಲಿ ಆನ್‌ಲೈನ್ ಮೂಲಕ ಆಹ್ವಾನಿಸಲಾಯಿತು ಮತ್ತು ಜನ ಭಾಗೀದಾರಿಯ ಭಾಗವಾಗಿ ಸ್ವಯಂ, ಸಾಂಸ್ಥಿಕ ಮತ್ತು ಇತರರ ನಾಮನಿರ್ದೇಶನಕ್ಕೆ ನಿಬಂಧನೆಗಳನ್ನು ಒಳಗೊಂಡಿತ್ತು.
ಎನ್.ಎ.ಟಿ, 2025 ಪ್ರಶಸ್ತಿ ಪುರಸ್ಕೃತರ ವಿವರಗಳು – ಉನ್ನತ ಶಿಕ್ಷಣ ಇಲಾಖೆ
ಕ್ರಮ ಸಂಖ್ಯೆ
|
ಪ್ರಶಸ್ತಿ ಪುರಸ್ಕೃತರ ಹೆಸರು
|
ರಾಜ್ಯ
|
-
|
ಡಾ. ಶ್ರೀದೇವಿ
ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ,
ಶರಣಬಸವ ವಿಶ್ವವಿದ್ಯಾಲಯ,
ಕಲಬುರಗಿ, ಕರ್ನಾಟಕ
|
ಕರ್ನಾಟಕ
|
-
|
ಡಾ. ಶೋಭಾ ಎಂ ಇ
ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
ಉಡುಪಿ ಜಿಲ್ಲೆ, ಕರ್ನಾಟಕ
|
ಕರ್ನಾಟಕ
|
-
|
ಡಾ.ಅಂಜನಾ ಭಾಟಿಯಾ
ಹನ್ಸ್ ರಾಜ್ ಮಹಿಳಾ ಮಹಾವಿದ್ಯಾಲಯ,
ಜಲಂಧರ್, ಪಂಜಾಬ್
|
ಪಂಜಾಬ್
|
-
|
ಡಾ. ದೇವಯಾನ್ ಸರ್ಕಾರ್
ಐ.ಐ.ಟಿ ಇಂದೋರ್, ಮಧ್ಯಪ್ರದೇಶ
|
ಮಧ್ಯಪ್ರದೇಶ
|
-
|
ಡಾ. ಚಂದನ್ ಸಾಹಿ
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ
ಭೋಪಾಲ್, ಮಧ್ಯಪ್ರದೇಶ
|
ಮಧ್ಯಪ್ರದೇಶ
|
-
|
ಪ್ರೊ. ವಿಜಯಲಕ್ಷ್ಮಿ ಜೆ
ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ವಿಜಯವಾಡ, ಆಂಧ್ರಪ್ರದೇಶ
|
ಆಂಧ್ರಪ್ರದೇಶ
|
-
|
ಪ್ರೊ. ಸಂಕೇತ್ ಗೋಯೆಲ್
ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಸೈನ್ಸಸ್,
ಪಿಲಾನಿ, ಹೈದರಾಬಾದ್ ಕ್ಯಾಂಪಸ್
|
ತೆಲಂಗಾಣ
|
-
|
ಪ್ರೊ. ಎಸ್ ಶಿವ ಸತ್ಯ
ಪಾಂಡಿಚೇರಿ ವಿಶ್ವವಿದ್ಯಾಲಯ (ಕೇಂದ್ರೀಯ ವಿಶ್ವವಿದ್ಯಾಲಯ),
ಪುದುಚೇರಿ
|
ಪುದುಚೇರಿ
|
-
|
ಡಾ.ನೀಲಾಕ್ಷಿ ಸುಭಾಷ್ ಜೈನ್
ಶಾ ಮತ್ತು ಆಂಕರ್ ಕಚ್ಚಿ ಇಂಜಿನಿಯರಿಂಗ್ ಕಾಲೇಜು,
ಮುಂಬೈ, ಮಹಾರಾಷ್ಟ್ರ
|
ಮಹಾರಾಷ್ಟ್ರ
|
-
|
ಪ್ರೊ. ಮನೋಜ್ ಬಿ ಎಸ್
ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐ.ಐ.ಎಸ್.ಟಿ)
ತಿರುವನಂತಪುರಂ, ಕೇರಳ
|
ಕೇರಳ
|
-
|
ಪ್ರೊ.ಶಂಕರ್ ಶ್ರೀರಾಮ್ ಶಂಕರನ್
ಶಾಸ್ತ್ರ ಡೀಮ್ಡ್ ವಿಶ್ವವಿದ್ಯಾಲಯ,
ತಂಜಾವೂರು, ತಮಿಳುನಾಡು
|
ತಮಿಳುನಾಡು
|
-
|
ಪ್ರೊ. ವಿನೀತ್ ಎನ್ ಬಿ
ಐ.ಐ.ಟಿ ಹೈದರಾಬಾದ್, ತೆಲಂಗಾಣ
|
ತೆಲಂಗಾಣ
|
-
|
ಪ್ರೊ. ವಿಭಾ ಶರ್ಮಾ
ಇಂಗ್ಲಿಷ್ ವಿಭಾಗ, ಕಲಾ ನಿಕಾಯ,
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ, ಉತ್ತರ ಪ್ರದೇಶ
|
ಉತ್ತರ ಪ್ರದೇಶ
|
-
|
ಪ್ರೊ. ಶ್ರೀವರ್ಧನಿ ಕೇಶವಮೂರ್ತಿ ಝಾ
ಐ.ಐ.ಎಂ ಬೆಂಗಳೂರು
|
ಬೆಂಗಳೂರು
|
-
|
ಪ್ರೊ. ಅಮಿತ್ ಕುಮಾರ್ ದ್ವಿವೇದಿ
ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ,
ಗಾಂಧಿನಗರ
|
ಗುಜರಾತ್
|
-
|
ಡಾ. ಜೋರಾಮದಿಂಥರಾ
ಮಿಜೋರಾಂ ವಿಶ್ವವಿದ್ಯಾಲಯ
|
ಮಿಜೋರಾಂ
|
-
|
ಪ್ರೊ.ಗಣೇಶ್ ತಿಮ್ಮಣ್ಣ ಪಂಡಿತ್
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ,
ನವದೆಹಲಿ
|
ನವದೆಹಲಿ
|
-
|
ಡಾ. ಪ್ರಶಾಂತ್ ಕುಮಾರ್ ಸಹಾ
ರಾಜೀವ್ ಗಾಂಧಿ ವಿಶ್ವವಿದ್ಯಾಲಯ - ಕೇಂದ್ರೀಯ ವಿಶ್ವವಿದ್ಯಾಲಯ,
ಪಾಪಮ್ ಪಾರೆ, ಅರುಣಾಚಲ ಪ್ರದೇಶ
|
ಅರುಣಾಚಲ ಪ್ರದೇಶ
|
-
|
ಡಾ.ಮೆಂಡ ದೇವಾನಂದ ಕುಮಾರ್
ಡಾ. ಲಕ್ಕಿರೆಡ್ಡಿ ಹನಿಮಿರೆಡ್ಡಿ ಸರ್ಕಾರಿ ಪದವಿ ಕಾಲೇಜು,
ಮೈಲವರಂ, ಆಂಧ್ರಪ್ರದೇಶ
|
ಆಂಧ್ರಪ್ರದೇಶ
|
-
|
ಪ್ರೊ.ಪುರುಷೋತ್ತಮ್ ಬಾಳಾಸಾಹೇಬ ಪವಾರ್
ಎಸ್.ವಿ.ಪಿ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್,
ಬಾರಾಮತಿ, ಪುಣೆ, ಮಹಾರಾಷ್ಟ್ರ
|
ಮಹಾರಾಷ್ಟ್ರ
|
-
|
ಶ್ರೀ ಉರ್ವೀಶ್ ಪ್ರವೀಣಕುಮಾರ್ ಸೋನಿ
ಸರ್ಕಾರಿ ಪಾಲಿಟೆಕ್ನಿಕ್,
ಅಹಮದಾಬಾದ್, ಗುಜರಾತ್
|
ಗುಜರಾತ್
|
****
(Release ID: 2161005)