ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು 2024ರ ರಾಷ್ಟ್ರೀಯ ಯುವ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಿದೆ


2025ರ ಸೆಪ್ಟೆಂಬರ್ 30ರೊಳಗೆ ಆನ್ ಲೈನ್ ನಲ್ಲಿ ನಾಮನಿರ್ದೇಶನಗಳನ್ನು ಸಲ್ಲಿಸಬಹುದು

Posted On: 25 AUG 2025 1:44PM by PIB Bengaluru

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಯುವ ಪ್ರಶಸ್ತಿ-2024ಕ್ಕೆ (ಎನ್ ವೈ ಎ) ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ರಾಷ್ಟ್ರೀಯ ಅಭಿವೃದ್ಧಿ ಅಥವಾ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಯುವಕರನ್ನು (15 ರಿಂದ 29 ವರ್ಷ ವಯಸ್ಸಿನವರು) ಪ್ರೇರೇಪಿಸುವ ಗುರಿಯನ್ನು ಈ ಪ್ರಶಸ್ತಿ ಹೊಂದಿದೆ. ಸಮುದಾಯಕ್ಕೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಯುವಕರನ್ನು ಪ್ರೋತ್ಸಾಹಿಸುವುದು ಮತ್ತು ಆ ಮೂಲಕ ಉತ್ತಮ ನಾಗರಿಕರಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯವನ್ನು ಸುಧಾರಿಸುವುದು; ಮತ್ತು ರಾಷ್ಟ್ರೀಯ ಅಭಿವೃದ್ಧಿ ಮತ್ತು / ಅಥವಾ ಸಾಮಾಜಿಕ ಸೇವೆಗಾಗಿ ಯುವಕರೊಂದಿಗೆ ಕೆಲಸ ಮಾಡುವ ಸ್ವಯಂ-ಸೇವಾ ಸಂಸ್ಥೆಗಳು ಮಾಡಿದ ಅತ್ಯುತ್ತಮ ಕೆಲಸಕ್ಕೆ ಮಾನ್ಯತೆ ನೀಡುವುದು.

ರಾಷ್ಟ್ರೀಯ ಯುವ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ರಾಷ್ಟ್ರೀಯ ಯುವ ಉತ್ಸವದ ಸಮಯದಲ್ಲಿ ನೀಡಲಾಗುತ್ತದೆ. ಪ್ರಶಸ್ತಿಯನ್ನು ಎರಡು ವರ್ಗಗಳಲ್ಲಿ ನೀಡಲಾಗುತ್ತದೆ:

1. ವೈಯಕ್ತಿಕ ವರ್ಗ

2. ಸಂಸ್ಥೆ ವರ್ಗ

ಪ್ರತಿ ವರ್ಷ ನೀಡಲಾಗುವ ಪ್ರಶಸ್ತಿಗಳ ಸಂಖ್ಯೆ ಸಾಮಾನ್ಯವಾಗಿ ವೈಯಕ್ತಿಕ ವಿಭಾಗಕ್ಕೆ 20 ಮತ್ತು ಸಂಸ್ಥೆ ವಿಭಾಗಕ್ಕೆ ಐದು ಮೀರಬಾರದು. ಆದಾಗ್ಯೂ, ಅರ್ಹ ಸಂದರ್ಭದಲ್ಲಿ ಮಂಜೂರಾತಿ ಪ್ರಾಧಿಕಾರದ ವಿವೇಚನೆಗೆ ಅನುಗುಣವಾಗಿ ಇದು ಬದಲಾಗಬಹುದು.

ಪ್ರಶಸ್ತಿಯು ಪದಕ, ಪ್ರಮಾಣಪತ್ರ ಮತ್ತು ಪ್ರಶಸ್ತಿ ಮೊತ್ತ ₹1,00,000/- ಅನ್ನು ಒಳಗೊಂಡಿರುತ್ತದೆ. ಸ್ವಯಂಸೇವಾ ಯುವ ಸಂಘಟನೆಗಳಿಗೆ ನೀಡುವ ಪ್ರಶಸ್ತಿಯು ಪದಕ, ಪ್ರಮಾಣಪತ್ರ ಮತ್ತು ಪ್ರಶಸ್ತಿ ಮೊತ್ತ ₹3,00,000/- ಅನ್ನು ಒಳಗೊಂಡಿರುತ್ತದೆ.

https://awards.gov.in ಪೋರ್ಟಲ್ ಮೂಲಕ ಎನ್ ವೈ ಎ 2024ಕ್ಕೆ ನಾಮನಿರ್ದೇಶನಗಳನ್ನು ಆನ್ ಲೈನ್ ನಲ್ಲಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 2025ರ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ವಿವರವಾದ ಮಾರ್ಗಸೂಚಿಗಳು ಮತ್ತು ಅರ್ಹತಾ ಮಾನದಂಡಗಳು ಪೋರ್ಟಲ್ ನಲ್ಲಿ ಲಭ್ಯವಿದೆ.

ಆರೋಗ್ಯ, ಸಂಶೋಧನೆ ಮತ್ತು ನಾವೀನ್ಯತೆ, ಸಂಸ್ಕೃತಿ, ಮಾನವ ಹಕ್ಕುಗಳ ಪ್ರಚಾರ, ಕಲೆ ಮತ್ತು ಸಾಹಿತ್ಯ, ಪ್ರವಾಸೋದ್ಯಮ, ಸಾಂಪ್ರದಾಯಿಕ ಔಷಧ, ಸಕ್ರಿಯ ಪೌರತ್ವ, ಸಮುದಾಯ ಸೇವೆ, ಕ್ರೀಡೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸ್ಮಾರ್ಟ್ ಕಲಿಕೆಯಂತಹ ಅಭಿವೃದ್ಧಿ ಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆಯ ವಿವಿಧ ಕ್ಷೇತ್ರಗಳಲ್ಲಿ ಯುವಕರಿಗೆ ಗುರುತಿಸಬಹುದಾದ ಅತ್ಯುತ್ತಮ ಕೆಲಸವನ್ನು ತೋರಿಸಿದ ವ್ಯಕ್ತಿಗಳು / ಸಂಸ್ಥೆಗಳು 2025ರ ಸೆಪ್ಟೆಂಬರ್ 30 ರೊಳಗೆ ತಮ್ಮ ನಾಮನಿರ್ದೇಶನಗಳನ್ನು ಪ್ರಶಸ್ತಿ ಪೋರ್ಟಲ್ https://awards.gov.in ಮೂಲಕ ಮಾತ್ರ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ.

 

*****
 


(Release ID: 2160549)