ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರ ನಿಧನಕ್ಕೆ‌ ಪ್ರಧಾನಮಂತ್ರಿ ಅವರಿಂದ ಸಂತಾಪ

Posted On: 24 AUG 2025 7:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಮತ್ತು ಅಯೋಧ್ಯೆಯ ರಾಜಸದನದ ಮುಖ್ಯಸ್ಥರಾದ ಶ್ರೀ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.

ಶ್ರೀ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರು ಧಾರ್ಮಿಕ ಮತ್ತು ಸಾಮಾಜಿಕ ಉದ್ದೇಶಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

ಎಕ್ಸ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:

"ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಮತ್ತು ಅಯೋಧ್ಯೆಯ ರಾಜಸದನದ ಮುಖ್ಯಸ್ಥರಾದ ಶ್ರೀ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರ ನಿಧನದಿಂದ ಅತ್ಯಂತ ದುಃಖಿತನಾಗಿದ್ದೇನೆ. ಅವರ ಜೀವನವು ಧಾರ್ಮಿಕ ಮತ್ತು‌ ಸಾಮಾಜಿಕ ಉದ್ದೇಶಗಳಿಗಾಗಿ ಸಮರ್ಪಿತವಾಗಿತ್ತು. ಪ್ರಭು ಶ್ರೀ ರಾಮನಲ್ಲಿ ಪ್ರಾರ್ಥಿಸುವುದೇನೆಂದರೆ  ತಮ್ಮ ಪಾದ ಕಮಲದಲ್ಲಿ ಅವರಿಗೆ ಸ್ಥಾನ ನೀಡಲಿ ಮತ್ತು ಅವರ ದುಃಖತಪ್ತ ಕುಟುಂಬ ಮತ್ತು ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೇಡಿಕೊಳ್ಳುವೆ. ಓಂ ಶಾಂತಿ!"

****


(Release ID: 2160437)