ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಮಂತ್ರಿ ಅವರು ನೀಡಿದ ಹೇಳಿಕೆಯ ಅನುವಾದ

Posted On: 31 JAN 2025 11:17AM by PIB Bengaluru

ಮಿತ್ರರೇ,

ಇಂದು ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ನಾನು ಸಮೃದ್ಧಿಯ ಅಧಿದೇವತೆಯಾದ ದೇವಿ ಲಕ್ಷ್ಮೀಗೆ ನಮಿಸುತ್ತೇನೆ. ಇಂತಹ ಸಂದರ್ಭಗಳಲ್ಲಿ ನಾವು ಶತಮಾನಗಳಿಂದಲೂ ಲಕ್ಷ್ಮಿದೇವಿಯ ಸದ್ಗುಣಗಳನ್ನು ನೆನಪಿಸಿಕೊಳ್ಳುತ್ತೇವೆ:

सिद्धिबुद्धिप्रदे देवि भुक्तिमुक्तिप्रदायिनि। मंत्रपूते सदा देवि महालक्ष्मि नमोस्तुते।

ಲಕ್ಷ್ಮೀ ಮಾತೆ ನಮಗೆ ಯಶಸ್ಸು ಮತ್ತು ವಿವೇಕ, ಸಮೃದ್ಧಿ ಮತ್ತು ಕಲ್ಯಾಣವನ್ನು ನೀಡಲಿ. ದೇಶದ ಪ್ರತಿಯೊಬ್ಬ ಬಡ ಮತ್ತು ಮಧ್ಯಮ ವರ್ಗದ ಸಮುದಾಯದ ಮೇಲೆ ಮಾತೆ ಲಕ್ಷ್ಮಿದೇವಿಯು ತನ್ನ ವಿಶೇಷ ಕೃಪೆ ಬೀರಲಿ ಎಂದು ಲಕ್ಷ್ಮೀದೇವಿಯನ್ನು ಪ್ರಾರ್ಥಿಸುತ್ತೇನೆ.

ಮಿತ್ರರೇ,

ನಮ್ಮ ಗಣರಾಜ್ಯ 75 ವರ್ಷಗಳನ್ನು ಪೂರ್ಣಗೊಳಿಸಿದೆ, ಇದು ಪ್ರತಿಯೊಬ್ಬ ಪ್ರಜೆಗೂ ಹೆಮ್ಮೆಯ ವಿಷಯ. ಭಾರತದ ಈ ಶಕ್ತಿ ಪ್ರಜಾಪ್ರಭುತ್ವ ಜಗತ್ತಿನಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಲಿದೆ.

ಮಿತ್ರರೇ,

ದೇಶದ ಜನತೆ ಮೂರನೇ ಬಾರಿಗೆ ಸರ್ಕಾರವನ್ನು ರಚಿಸುವ ಜವಾಬ್ದಾರಿಯನ್ನು ನೀಡಿದ್ದಾರೆ ಮತ್ತು ಇದು ತಮ್ಮ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಅಧಿವೇಶನವಾಗಿದೆ. ಮತ್ತು ವಿಶ್ವಾಸದಿಂದ ಹೇಳಬಲ್ಲೆ, 2047ರ ವೇಳೆಗೆ ಭಾರತ ಸ್ವಾತಂತ್ರೋತ್ಸವದ ಶತಮಾನೋತ್ಸವ ಆಚರಿಸುವ ವೇಳೆಗೆ, ರಾಷ್ಟ್ರವು ಅಭಿವೃದ್ಧಿ ಹೊಂದಿದ ಗುರಿ ಸಾಧಿಸುತ್ತದೆ. ಈ ಬಜೆಟ್ ಅಧಿವೇಶನವು ದೇಶ 100ನೇ ಸ್ವಾತಂತ್ರೋತ್ಸವ ಆಚರಿಸುವ ವೇಳೆಗೆ ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತದೆ. 140 ಕೋಟಿ ನಾಗರಿಕರು ಸಾಮೂಹಿಕ ಪ್ರಯತ್ನಗಳಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಂಕಲ್ಪವನ್ನು ಸಾಕಾರಗೊಳಿಸುತ್ತಾರೆ. ಮೂರನೇ ಅವಧಿಯಲ್ಲಿ  ಭೌಗೋಳಿಕವಾಗಿ, ಸಾಮಾಜಿಕವಾಗಿ ಅಥವಾ ವಿವಿಧ ಆರ್ಥಿಕ ಹಂತಗಳ ಸಂದರ್ಭದಲ್ಲಿ ದೇಶದ ಸಮರ್ಗ ಅಭಿವೃದ್ಧಿಯತ್ತ ನಾವು ಸಮರೋಪಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ಸರ್ವತೋಮುಖ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಾವು ಮಿಷನ್ ಮೋಡ್‌ನಲ್ಲಿ ಮುಂದುವರಿಯುತ್ತಿದ್ದೇವೆ. ನಾವೀನ್ಯತೆ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಹೂಡಿಕೆ ನಮ್ಮ ಆರ್ಥಿಕ ಚಟುವಟಿಕೆಯ ನೀಲನಕ್ಷೆಗೆ ಆಧಾರವಾಗಿದೆ.

ಎಂದಿನಂತೆ ಈ ಅಧಿವೇಶನವು ಹಲವು ಐತಿಹಾಸಿಕ ದಿನಗಳನ್ನು ಹೊಂದಿರುತ್ತದೆ. ನಾಳೆ ಎರಡೂ ಸದನದಲ್ಲಿ ಚರ್ಚೆಗಳು ನಡೆಯಲಿದ್ದು, ಸಾಕಷ್ಟು ಚರ್ಚೆಯ ನಂತರ, ರಾಷ್ಟ್ರದ ಬಲವನ್ನು ಹೆಚ್ಚಿಸುವ ಕಾನೂನುಗಳನ್ನು ರಚಿಸಲಾಗುವುದು. ವಿಶೇಷವಾಗಿ, ನಾರಿ ಶಕ್ತಿಯ ಹೆಮ್ಮೆಯನ್ನು ಪುನಃ ಸ್ಥಾಪಿಸಲು, ಪ್ರತಿಯೊಬ್ಬ ಮಹಿಳೆ ಜಾತಿ ಮತ್ತು ಧರ್ಮದ ಯಾವುದೇ ತಾರತಮ್ಯವಿಲ್ಲದೆ ಗೌರವಾನ್ವಿತ ಜೀವನ ನಡೆಸುವುದನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಸಮಾನ ಹಕ್ಕುಗಳನ್ನು ಪಡೆಯಲು ಈ ಅಧಿವೇಶನದಲ್ಲಿ ಆ ದಿಕ್ಕಿನಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದೆ. ಸುಧಾರಣೆ, ಸಾಧನೆ ಮತ್ತು ಪರಿವರ್ತನೆ. ನಾವು ತ್ವರಿತ ಅಭಿವೃದ್ಧಿಯನ್ನು ಸಾಧಿಸಬೇಕಾದರೆ, ನಾವು ಗರಿಷ್ಠ ಒತ್ತನ್ನು ನೀಡಬೇಕಾಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಬೇಕಿದೆ ಮತ್ತು ನಾವು ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಪರಿವರ್ತನೆಯನ್ನು ಕಾಣಬಹುದಾಗಿದೆ.

ನಮ್ಮದು ಯುವ ದೇಶ, ಯುವ ಶಕ್ತಿ ಮತ್ತು ಇಂದು 20-25 ವರ್ಷ ವಯಸ್ಸಿನ ಯುವಕರು 45-50 ವರ್ಷ ವಯಸ್ಸಿನವರಾದಾಗ ಅವರು ಅಭಿವೃದ್ಧಿ ಹೊಂದಿದ ಭಾರತದ ಅತಿದೊಡ್ಡ ಫಲಾನುಭವಿಗಳಾಗುತ್ತಾರೆ. ಅವರು ತಮ್ಮ ಜೀವನದ ಆ ಹಂತದಲ್ಲಿರುತ್ತಾರೆ, ಅವರು ನೀತಿ ನಿರೂಪಣಾ ವ್ಯವಸ್ಥೆಯಲ್ಲಿ ಆ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ, ಸ್ವಾತಂತ್ರ್ಯದ ನಂತರ ಆರಂಭವಾಗುವ ಶತಮಾನದಲ್ಲಿ ಅವರು ಅಭಿವೃದ್ಧಿ ಹೊಂದಿದ ಭಾರತದೊಂದಿಗೆ ಹೆಮ್ಮೆಯಿಂದ ಮುನ್ನಡೆಯಲಿದ್ದಾರೆ. ಆದ್ದರಿಂದ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಧಿಸುವ ಈ ಪ್ರಯತ್ನ, ಈ ಅಪಾರ ಕಠಿಣ ಪರಿಶ್ರಮ, ನಮ್ಮ ಹದಿಹರೆಯದವರಿಗೆ, ನಮ್ಮ ಯುವ ಪೀಳಿಗೆಗೆ ಇಂದಿನ ಒಂದು ದೊಡ್ಡ ಕೊಡುಗೆಯಾಗಲಿದೆ.

1930, 1942 ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕಿಳಿದ ಇಡೀ ದೇಶದ ಯುವ ಪೀಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದರು ಮತ್ತು ಅದರ ಫಲವನ್ನು 25 ವರ್ಷಗಳ ನಂತರ ಬಂದ ಪೀಳಿಗೆ ಪಡೆದುಕೊಂಡಿತು. ಆಗ ಯುದ್ಧದಲ್ಲಿದ್ದ ಯುವಕರು ಆ ಪ್ರಯೋಜನಗಳನ್ನು ಪಡೆದರು. ಸ್ವಾತಂತ್ರ್ಯಕ್ಕಿಂತ ಮುಂಚಿನ ಆ 25 ವರ್ಷಗಳು ಸ್ವಾತಂತ್ರ್ಯವನ್ನು ಆಚರಿಸಲು ಒಂದು ಅವಕಾಶವಾಯಿತು. ಅಂತೆಯೇ, ಈ 25 ವರ್ಷಗಳು ದೇಶವಾಸಿಗಳು ತಮ್ಮ ಸಂಕಲ್ಪದ ಮೂಲಕ ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸುವುದು ಮತ್ತು ತಮ್ಮ ಸಾಧನೆಗಳ ಮೂಲಕ ಶಿಖರವನ್ನು ತಲುಪುವುದು ಅವರ ಉದ್ದೇಶವಾಗಿದೆ. ಆದ್ದರಿಂದ, ಈ ಬಜೆಟ್ ಅಧಿವೇಶನದಲ್ಲಿ, ಎಲ್ಲಾ ಸಂಸದರು ಅಭಿವೃದ್ಧಿ ಹೊಂದಿದ ಭಾರತವನ್ನು ಬಲಪಡಿಸುವತ್ತ ಕೊಡುಗೆ ನೀಡಲಿದ್ದಾರೆ. ವಿಶೇಷವಾಗಿ, ಯುವ ಸಂಸದರಿಗೆ ಇದು ಒಂದು ಸುವರ್ಣಾವಕಾಶ, ಏಕೆಂದರೆ ಅವರು ಇಂದು ಸದನದಲ್ಲಿ ಹೆಚ್ಚಿನ ಜಾಗೃತಿ ಪಡೆಯುತ್ತಾರೆ ತಮ್ಮ ಪಾಲ್ಗೊಳ್ಳುವಿಕೆಯನ್ನು ಹೊಂದಿರುತ್ತಾರೆ, ಅಭಿವೃದ್ಧಿ ಹೊಂದಿದ ಭಾರತದ ಹೆಚ್ಚಿನ ಫಲಗಳನ್ನು ಅವರು ತಮ್ಮ ಕಣ್ಣ ಮುಂದೆಯೇ ನೋಡುತ್ತಾರೆ. ಆದ್ದರಿಂದ, ಇದು ಯುವ ಸಂಸದರಿಗೆ ಬೆಲೆ ಕಟ್ಟಲಾಗದ ಅಮೂಲ್ಯ ಅವಕಾಶವಾಗಿದೆ.

ಮಿತ್ರರೇ,

ಈ ಬಜೆಟ್‌ ಅಧಿವೇಶನದಲ್ಲಿ ದೇಶದ ಆಸೆ ಮತ್ತು ಅಶೋತ್ತರಗಳನ್ನು ಈಡೇರಿಸಲಿದೆ ಎಂಬ ವಿಶ್ವಾಸ ನನಗಿದೆ.  

ಮಿತ್ರರೇ,

ಇಂದು ನೀವು ಒಂದು ಸಂಗತಿಯನ್ನು ಗಮನಿಸಿರಬಹುದು, ಮಾಧ್ಯಮದವರು ಖಂಡಿತಾ ಇದನ್ನು ಗಮನಿಸಿರುತ್ತಾರೆ. ಪ್ರತಿ ಬಾರಿ ಅಧಿವೇಶನಕ್ಕೂ ಮುನ್ನ ಒಂದು ಅಥವಾ ಎರಡು ದಿನಗಳಲ್ಲಿವಿದೇಶಿ ಮೂಲಗಳಿಂದ ಗೊಂದಲ ಸೃಷ್ಟಿಯಾಗುತ್ತಿತ್ತು, ಆದರೆ 2014ರ ನಂತರ ಇದೇ ಮೊದಲ ಬಾರಿಗೆ ಯಾವುದೇ ಗೊಂದಲ ಇಲ್ಲ. ಕಳೆದ 10 ವರ್ಷಗಳಿಂದ, ಪ್ರತಿ ಅಧಿವೇಶನಕ್ಕೂ ಮುನ್ನ ತೊಂದರೆ ಸೃಷ್ಟಿಸುವ ಪ್ರಯತ್ನಗಳು ಸದಾ ನಡೆಯುತ್ತಿವೆ ಮತ್ತು ಬೆಂಕಿಯನ್ನು ಹೆಚ್ಚಿಸಲು ಸಿದ್ಧರಿರುವ ಜನರಿಗೇನೂ ಕೊರತೆಯಿಲ್ಲ. ಆದರೂ ಕಳೆದ 10 ವರ್ಷಗಳಲ್ಲಿ ಯಾವುದೇ ವಿದೇಶಿ ಮೂಲೆಗಳಿಂದ ಅಂತಹ ಗೊಂದಲಗಳು ಸಂಭವಿಸದ ಮೊದಲ ಅಧಿವೇಶನ ಇದಾಗಿದೆ.

ತುಂಬಾ ತುಂಬಾ ಧನ್ಯವಾದಗಳು ಮಿತ್ರರೇ,

ಘೋಷಣೆ; ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಅವರು ಮೂಲತಃ ಹಿಂದಿಯಲ್ಲಿ ಮಾತನಾಡಿದರು.

 

*****


(Release ID: 2159592) Visitor Counter : 6