ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಕೋಟಾ-ಬೂಂದೀಯಲ್ಲಿ (ರಾಜಸ್ಥಾನ) 1507.00 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಗ್ರೀನ್ ಫೀಲ್ಡ್ (ಪರಿಸರ ಸ್ನೇಹಿ) ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಸಂಪುಟದ ಅನುಮೋದನೆ

Posted On: 19 AUG 2025 3:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆ, ಕೋಟಾ-ಬೂಂದೀ (ರಾಜಸ್ಥಾನ)ಯಲ್ಲಿ 1507.00 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಗ್ರೀನ್ ಫೀಲ್ಡ್ (ಪರಿಸರ ಸ್ನೇಹಿ) ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಚಂಬಲ್ ನದಿಯ ದಡದಲ್ಲಿರುವ ಕೋಟಾ ರಾಜಸ್ಥಾನದ ಕೈಗಾರಿಕಾ ರಾಜಧಾನಿ ಎಂದು ಗುರುತಿಸಲ್ಪಟ್ಟಿದೆ. ಇದಲ್ಲದೆ, ಕೋಟಾ ಭಾರತದ ಶೈಕ್ಷಣಿಕ ತರಬೇತಿ ಕೇಂದ್ರ ಎಂದು ಪ್ರಸಿದ್ಧವಾಗಿದೆ.

ಎ -321 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಸೂಕ್ತವಾದ ಗ್ರೀನ್ ಫೀಲ್ಡ್ (ಪರಿಸರ ಸ್ನೇಹಿ) ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ರಾಜಸ್ಥಾನ ಸರ್ಕಾರವು 440.06 ಹೆಕ್ಟೇರ್ ಭೂಮಿಯನ್ನು ಎಎಐಗೆ ವರ್ಗಾಯಿಸಿದೆ. ಈ ಯೋಜನೆಯಲ್ಲಿ ವಾರ್ಷಿಕ 2 ದಶಲಕ್ಷ ಪ್ರಯಾಣಿಕರ (ಎಂಪಿಪಿಎ) ವಾರ್ಷಿಕ ಸಾಮರ್ಥ್ಯದೊಂದಿಗೆ 1000 ಹೆಚ್ಚು ದಟ್ಟಣೆ ವೇಳೆಯ ಪ್ರಯಾಣಿಕರನ್ನು (ಪಿ ಎಚ್ ಪಿ) ನಿರ್ವಹಿಸುವ ಸಾಮರ್ಥ್ಯದ 20,000 ಚದರ ಮೀಟರ್ ಪ್ರದೇಶದಲ್ಲಿ ಟರ್ಮಿನಲ್ ಕಟ್ಟಡ, 3200 ಮೀ x 45 ಮೀ. ಅಳತೆಯ ರನ್ ವೇ 11/29, ಎ -321 ಮಾದರಿಯ ವಿಮಾನಗಳಿಗೆ 07 ನಿಲ್ದಾಣಗಳೊಂದಿಗೆ ಏಪ್ರನ್, ಎರಡು ಲಿಂಕ್ ಟ್ಯಾಕ್ಸಿ ವೇಗಳು, ಎಟಿಸಿ ಮತ್ತು ತಾಂತ್ರಿಕ ವಿಭಾಗ, ಅಗ್ನಿಶಾಮಕ ಠಾಣೆ, ಕಾರಿನ ನಿಲ್ದಾಣಗಳು ಮತ್ತು ಸಂಬಂಧಿತ ಕೆಲಸಗಳು ಸೇರಿವೆ.

ಶೈಕ್ಷಣಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಕೋಟಾದ ಪ್ರಾಮುಖ್ಯತೆಯು ಗ್ರೀನ್ ಫೀಲ್ಡ್ (ಪರಿಸರ ಸ್ನೇಹಿ) ವಿಮಾನ ನಿಲ್ದಾಣವನ್ನು ನಿರ್ಣಾಯಕ ಮೂಲಸೌಕರ್ಯ ಯೋಜನೆಯನ್ನಾಗಿ ಮಾಡುತ್ತದೆ. ಇದು ಈ ಪ್ರದೇಶದಲ್ಲಿ ನಿರೀಕ್ಷಿತ ಸಂಚಾರ ಬೆಳವಣಿಗೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಪ್ರಸ್ತುತ ಕೋಟಾ ವಿಮಾನ ನಿಲ್ದಾಣವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಒಡೆತನದಲ್ಲಿದೆ. ಇದು ಕೋಡ್ 'ಬಿ' ವಿಮಾನಕ್ಕೆ (ಡಿಒ -228 ನಂತಹ) ಸೂಕ್ತವಾದ 1220 ಮೀ x 38 ಮೀ. ಅಳತೆಯ ರನ್ ವೇ (08/26) ಮತ್ತು ಅಂತಹ ಎರಡು ವಿಮಾನಗಳಿಗೆ ಸ್ಥಳಾವಕಾಶ ನೀಡುವ ಸಾಮರ್ಥ್ಯದ ಏಪ್ರನ್ ಅನ್ನು ಒಳಗೊಂಡಿದೆ. ಟರ್ಮಿನಲ್ ಕಟ್ಟಡವು 400 ಚದರ ಮೀಟರ್ ಪ್ರದೇಶವನ್ನು ವ್ಯಾಪಿಸಿದೆ ಮತ್ತು ಗರಿಷ್ಠ ಸಮಯದಲ್ಲಿ 50 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ ವಿಮಾನ ನಿಲ್ದಾಣದ ಸುತ್ತಲೂ ಅಸಮರ್ಪಕ ಭೂಮಿ ಲಭ್ಯತೆ ಮತ್ತು ನಗರೀಕರಣದಿಂದಾಗಿ ಅಸ್ತಿತ್ವದಲ್ಲಿರುವ ನಿಲ್ದಾಣವನ್ನು ವಾಣಿಜ್ಯ ಕಾರ್ಯಾಚರಣೆಗಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ.

 

*****
 


(Release ID: 2157959)