ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಒಡಿಶಾದಲ್ಲಿ ಹೈಬ್ರಿಡ್ ಗುತ್ತಿಗೆ ಮಾದರಿ (ಹೈಬ್ರಿಡ್‌ ಆನ್ಯುಯಿಟಿ ಮೋಡ್) ಯಲ್ಲಿ 8307.74 ಕೋಟಿ ರೂ. ಬಂಡವಾಳ ವೆಚ್ಚದಲ್ಲಿ ಷಟ್ಪಥ ಪ್ರವೇಶ-ನಿಯಂತ್ರಿತ ರಾಜಧಾನಿ ಪ್ರದೇಶ ವರ್ತುಲ ರಸ್ತೆ (ಭುವನೇಶ್ವರ ಬೈಪಾಸ್, 110.875 ಕಿ.ಮೀ) ನಿರ್ಮಾಣಕ್ಕೆ ಸಂಪುಟದ ಅನುಮೋದನೆ

Posted On: 19 AUG 2025 3:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಒಡಿಶಾದಲ್ಲಿ ಹೈಬ್ರಿಡ್ ಗುತ್ತಿಗೆ ಮಾದರಿ (ಹೈಬ್ರಿಡ್‌ ಆನ್ಯುಯಿಟಿ ಮೋಡ್) ಯಲ್ಲಿ 8307.74 ಕೋಟಿ ರೂ.ಗಳ ಒಟ್ಟು ಬಂಡವಾಳ ವೆಚ್ಚದಲ್ಲಿ ಷಟ್ಪಥ ಪ್ರವೇಶ-ನಿಯಂತ್ರಿತ ರಾಜಧಾನಿ ಪ್ರದೇಶ ವರ್ತುಲ ರಸ್ತೆ (ಭುವನೇಶ್ವರ ಬೈಪಾಸ್ - 110.875 ಕಿ.ಮೀ) ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

ಪ್ರಸ್ತುತ, ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮೇಶ್ವರದಿಂದ ಟ್ಯಾಂಗಿವರೆಗಿನ ಸಂಪರ್ಕವು ಖೋರ್ಧಾ, ಭುವನೇಶ್ವರ ಮತ್ತು ಕಟಕ್‌ ನಂತಹ ಹೆಚ್ಚು ನಗರೀಕರಣಗೊಂಡ ನಗರಗಳ ಮೂಲಕ ಹಾದುಹೋಗುವ ಹೆಚ್ಚಿನ ದಟ್ಟಣೆಯಿಂದಾಗಿ ಗಮನಾರ್ಹ ಸಂಚಾರ ದಟ್ಟಣೆಯನ್ನು ಅನುಭವಿಸುತ್ತಿದೆ. ಈ ಸವಾಲುಗಳನ್ನು ಪರಿಹರಿಸಲು, ಯೋಜನೆಯನ್ನು 6 ಪಥದ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆಯು ಕಟಕ್, ಭುವನೇಶ್ವರ ಮತ್ತು ಖೋರ್ಧಾ ನಗರಗಳಿಂದ ಭಾರೀ ವಾಣಿಜ್ಯ ವಾಹನಗಳ ದಟ್ಟಣೆಯನ್ನು ಬೇರೆಡೆಗೆ ತಿರುಗಿಸುವ ಮೂಲಕ ಒಡಿಶಾ ಮತ್ತು ಇತರ ಪೂರ್ವ ರಾಜ್ಯಗಳಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ಇದು ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸುತ್ತದೆ, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಈ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ.

ಈ ಯೋಜನೆಯು 3 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು (ಎನ್‌ ಎಚ್‌ -55, ಎನ್ ಎಚ್ -57 ಮತ್ತು ಎನ್ ಎಚ್ -655) ಮತ್ತು 1 ರಾಜ್ಯ ಹೆದ್ದಾರಿ (ಎಸ್‌ ಎಚ್‌ -65) ಯೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಒಡಿಶಾದಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಮೇಲ್ದರ್ಜೆಗೇರಿಸಿದ ಕಾರಿಡಾರ್ 10 ಆರ್ಥಿಕ ಕೇಂದ್ರಗಳು, 4 ಸಾಮಾಜಿಕ ಕೇಂದ್ರಗಳು ಮತ್ತು 5 ಲಾಜಿಸ್ಟಿಕ್ಸ್ ಕೇಂದ್ರಗಳನ್ನು ಸಂಪರ್ಕಿಸುವ ಮೂಲಕ ಬಹು-ಮಾದರಿ ಏಕೀಕರಣವನ್ನು ಹೆಚ್ಚಿಸುತ್ತದೆ, 1 ಪ್ರಮುಖ ರೈಲು ನಿಲ್ದಾಣ, 1 ವಿಮಾನ ನಿಲ್ದಾಣ, 1 ಪ್ರಸ್ತಾವಿತ ಮಲ್ಟಿ-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್ (ಎಂ ಎಂ ಎಲ್‌ ಪಿ) ಮತ್ತು 2 ಪ್ರಮುಖ ಬಂದರುಗಳೊಂದಿಗೆ ವರ್ಧಿತ ಬಹು-ಮಾದರಿ ಸಂಪರ್ಕವನ್ನು ಒದಗಿಸುತ್ತದೆ, ಇದು  ಈ ಪ್ರದೇಶದಾದ್ಯಂತ ಸರಕು ಮತ್ತು ಪ್ರಯಾಣಿಕರ ವೇಗದ ಚಲನೆಯನ್ನು ಸುಗಮಗೊಳಿಸುತ್ತದೆ.

ಈ ಬೈಪಾಸ್ ಪೂರ್ಣಗೊಂಡ ನಂತರ, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಪ್ರಮುಖ ಧಾರ್ಮಿಕ ಮತ್ತು ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ವ್ಯಾಪಾರ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಈ ಯೋಜನೆಯು ಸುಮಾರು 74.43 ಲಕ್ಷ ಮಾನವ-ದಿನಗಳ ನೇರ ಉದ್ಯೋಗ ಮತ್ತು 93.04 ಲಕ್ಷ ಮಾನವ-ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳವಣಿಗೆ, ಪ್ರಗತಿ ಮತ್ತು ಸಮೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಕಾರಿಡಾರ್ ನಕ್ಷೆ

ಅನುಬಂಧ - I: ಯೋಜನೆಯ ವಿವರಗಳು

ವೈಶಿಷ್ಟ್ಯ

ವಿವರಗಳು

ಯೋಜನೆಯ ಹೆಸರು

ರಾಮೇಶ್ವರದಿಂದ ಟ್ಯಾಂಗಿವರೆಗಿನ ಷಟ್ಪಥ  ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ರಾಜಧಾನಿ ಪ್ರದೇಶ ವರ್ತುಲ ರಸ್ತೆ (ಭುವನೇಶ್ವರ ಬೈಪಾಸ್)

ಕಾರಿಡಾರ್

ಕೋಲ್ಕತ್ತಾ-ಚೆನ್ನೈ

ಉದ್ದ (ಕಿ.ಮೀ)

110.875

ಒಟ್ಟು ಸಿವಿಲ್‌ ವೆಚ್ಚ (ಕೋಟಿ ರೂ.)

4686.74

ಭೂಸ್ವಾಧೀನ ವೆಚ್ಚ (ಕೋಟಿ ರೂ.)

1029.43

ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.)

8307.74

ಮೋಡ್

ಹೈಬ್ರಿಡ್ ಆನ್ಯುಯಿಟಿ ಮೋಡ್ (ಎಚ್‌ ಎ ಎಂ)

ಬೈಪಾಸ್‌ ಗಳು

110.875 ಕಿ.ಮೀ ಉದ್ದದ ತತ್‌ಕ್ಷಣ ಯೋಜನೆ

ಸಂಪರ್ಕಿತ ಪ್ರಮುಖ ರಸ್ತೆಗಳು

ರಾಷ್ಟ್ರೀಯ ಹೆದ್ದಾರಿಗಳು - ಎನ್ ಎಚ್ -55, ಎನ್ ಎಚ್ -655 & ಎನ್ ಎಚ್ -57. ರಾಜ್ಯ ಹೆದ್ದಾರಿ – ಎಸ್‌ ಎಚ್-65

ಸಂಪರ್ಕಗೊಳ್ಳುವ ಆರ್ಥಿಕ / ಸಾಮಾಜಿಕ / ಸಾರಿಗೆ ನೋಡ್‌ ಗಳು

ವಿಮಾನ ನಿಲ್ದಾಣಗಳು: ಭುವನೇಶ್ವರ

ರೈಲು ನಿಲ್ದಾಣಗಳು: ಖೋರ್ಧಾ

ಬಂದರು: ಪುರಿ ಮತ್ತು ಅಸ್ಟ್ರಾಂಗ್

ಆರ್ಥಿಕ ಘಟಕಗಳು: ಎಸ್‌ ಇ ಝಡ್, ಮೆಗಾ ಫುಡ್ ಪಾರ್ಕ್, ಜವಳಿ ಮತ್ತು ಫಾರ್ಮಾ ಕ್ಲಸ್ಟರ್, ಮೀನುಗಾರಿಕೆ ಘಟಕ

ಸಾಮಾಜಿಕ ಘಟಕಗಳು: ಮಹತ್ವಾಕಾಂಕ್ಷೆಯ ಜಿಲ್ಲೆ, ಬುಡಕಟ್ಟು ಜಿಲ್ಲೆ ಮತ್ತು ನಕ್ಸಲ್‌ ಪೀಡಿತ ಜಿಲ್ಲೆ.

ಸಂಪರ್ಕಗೊಳ್ಳುವ ಪ್ರಮುಖ ನಗರಗಳು / ಪಟ್ಟಣಗಳು

ಖೋರ್ಧಾ, ಭುವನೇಶ್ವರ, ಕಟಕ್ ಮತ್ತು ಧೆನಕನಲ್.

ಉದ್ಯೋಗ ಸೃಷ್ಟಿ ಸಾಮರ್ಥ್ಯ

74.43 ಲಕ್ಷ ಮಾನವ ದಿನಗಳು (ನೇರ) ಮತ್ತು 93.04 ಲಕ್ಷ ಮಾನವ ದಿನಗಳು (ಪರೋಕ್ಷ)

ಎಫ್‌ ವೈ-2025 ರಲ್ಲಿ ವಾರ್ಷಿಕ ಸರಾಸರಿ ದೈನಂದಿನ ಸಂಚಾರ (ಎಎಡಿಟಿ)

ಅಂದಾಜು 28,282 ಪ್ರಯಾಣಿಕ ಕಾರುಗಳು (ಪಿಸಿಯು)

 

 

*****

 


(Release ID: 2157920)