ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಾಷಾ ವೈವಿಧ್ಯತೆಯನ್ನು ಸಂಯೋಜಿಸಲು ನೆವಾದಲ್ಲಿ(NeVA) ಸೇರಿಸಲಾದ ವೈಶಿಷ್ಟ್ಯಗಳು

Posted On: 18 AUG 2025 3:32PM by PIB Bengaluru

ಭಾಷಾ ವೈವಿಧ್ಯತೆಯನ್ನು ಸಂಯೋಜಿಸಲು ನೆವಾದಲ್ಲಿ ಈ ಕೆಳಗಿನ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ:-

1. ಎನ್‌.ಇ.ವಿ.ಎ ಸಾರ್ವಜನಿಕ ಪೋರ್ಟಲ್‌ಗಳನ್ನು (ಮುಖಪುಟ ಮತ್ತು ವೈಯಕ್ತಿಕ ರಾಜ್ಯ ಅಸೆಂಬ್ಲಿ ಪೋರ್ಟಲ್‌ಗಳು ಸೇರಿದಂತೆ) ಎಲ್ಲಾ 22 ಅನುಸೂಚಿತ ಪ್ರಾದೇಶಿಕ ಭಾಷೆಗಳು ಮತ್ತು ಇಂಗ್ಲಿಷ್‌ಗೆ ಭಾಷಾಂತರಿಸಲು ಭಾಶಿನಿ ಮೂಲಕ ಪಠ್ಯದಿಂದ ಪಠ್ಯ ಯಂತ್ರ ಅನುವಾದವನ್ನು ಸಂಯೋಜಿಸಲಾಗಿದೆ.

2. ರಾಜ್ಯವಾರು ಇಂಟರ್‌ಫೇಸ್‌ ಕಾನ್ಫಿಗರೇಶನ್‌ ಬಳಕೆದಾರರಿಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಅಪ್ಲಿಕೇಶನ್‌ಅನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

3. ಡಿಜಿಟಲ್‌ ಬುಕ್‌ನಲ್ಲಿ ಭಾಷಾ ಟಾಗಲ್‌ ವೈಶಿಷ್ಟ್ಯವು ಲಭ್ಯವಿದೆ, ಇದು ಬಳಕೆದಾರರಿಗೆ ಆದ್ಯತೆಯ ಆಧಾರದ ಮೇಲೆ ಇಂಟರ್‌ಫೇಸ್‌ ಭಾಷೆಯನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಈ ವೈಶಿಷ್ಟ್ಯಗಳು ಈಗಾಗಲೇ ಎನ್‌.ಇ.ವಿ.ಎ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್‌ ಆಗಿರುವ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಭಾಶಿನಿ ಮೂಲಕ ಯಂತ್ರ-ನೆರವಿನ ಸ್ವಯಂಚಾಲಿತ ಅನುವಾದವನ್ನು ಈಗಾಗಲೇ ಎನ್‌.ಇ.ವಿ.ಎ ಅಪ್ಲಿಕೇಶನ್‌ನ ಸಾರ್ವಜನಿಕ ಪೋರ್ಟಲ್‌ಗಳಲ್ಲಿ ಸಂಯೋಜಿಸಲಾಗಿದೆ, ಜೊತೆಗೆ ಸದಸ್ಯ ಮತ್ತು ಸಚಿವಾಲಯದ ಇಂಟರ್‌ಫೇಸ್‌ಗಳ ಹಲವಾರು ಘಟಕಗಳಲ್ಲಿ ಸಂಯೋಜಿಸಲಾಗಿದೆ, ಇದು ವರ್ಧಿತ ಭಾಷಾ ಪ್ರವೇಶವನ್ನು ಶಕ್ತಗೊಳಿಸುತ್ತದೆ.

ಸಂಸದೀಯ ವ್ಯವಹಾರಗಳು ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ.ಎಲ್‌.ಮುರುಗನ್‌ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿಈ ಮಾಹಿತಿಯನ್ನು ನೀಡಿದ್ದಾರೆ.

 

****


(Release ID: 2157615)