ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು 'ವಿಶೇಷ ಅತಿಥಿಗಳಾಗಿ' ರಾಷ್ಟ್ರೀಯ ಎಸ್ಸಿ-ಎಸ್ಟಿ ಹಬ್ ಯೋಜನೆಯ 100 ಫಲಾನುಭವಿಗಳಿಗೆ ಆಹ್ವಾನ 


ದೆಹಲಿಯ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಗಳು ಮತ್ತು ಪಾರಂಪರಿಕ ಭೇಟಿಗಳಲ್ಲಿ ಭಾರತದಾದ್ಯಂತದ ವಿಶೇಷ ಅತಿಥಿಗಳ ಪಾಲ್ಗೊಳ್ಳುವಿಕೆ

Posted On: 14 AUG 2025 1:32PM by PIB Bengaluru

ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ 2025 ರ ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು ರಾಷ್ಟ್ರೀಯ ಎಸ್ಸಿ-ಎಸ್ಟಿ ಹಬ್ (ಎನ್ ಎಸ್ ಎಸ್ ಎಚ್) ಯೋಜನೆಯಡಿಯ ನೂರು ಫಲಾನುಭವಿಗಳು ಮತ್ತು ಅವರ ಪತಿ/ ಪತ್ನಿಯರನ್ನು 'ವಿಶೇಷ ಅತಿಥಿಗಳಾಗಿ' ಭಾರತ ಸರ್ಕಾರ ಆಹ್ವಾನಿಸಿದೆ.

ಭಾರತ ಸರ್ಕಾರದ ಸೂಕ್ಷ್ಮ ಮತ್ತು ಸಣ್ಣ ಉದ್ಯಮ (ಎಂ ಎಸ್ ಇ) ಗಳಿಗೆ ಸಾರ್ವಜನಿಕ ಖರೀದಿ ನೀತಿಯಡಿಯಲ್ಲಿ SC/ST MSE ಗಳಿಂದ ಕಡ್ಡಾಯವಾದ 4% ಸಂಗ್ರಹಣೆಯನ್ನು ಪೂರೈಸುವ ಉದ್ದೇಶದಿಂದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST) ದವರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ 2016ರ ಅಕ್ಟೋಬರ್ ನಲ್ಲಿ  ಮಾನ್ಯ ಪ್ರಧಾನ ಮಂತ್ರಿಗಳು NSSH ಯೋಜನೆಗೆ ಚಾಲನೆ ನೀಡಿದ್ದರು. ಇದು SC/ST ಉದ್ಯಮಿಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸುವ ಉಪಕ್ರಮವಾಗಿದೆ. ಪ್ರಸ್ತುತ, 1.48 ಲಕ್ಷ SC/ST ಉದ್ಯಮಿಗಳು NSSH ಯೋಜನೆಯಡಿ ಅನುಕೂಲಗಳನ್ನು ಪಡೆಯುತ್ತಿದ್ದಾರೆ. 

ಈ ಫಲಾನುಭವಿಗಳು 6 ಈಶಾನ್ಯ ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳವರಾಗಿದ್ದಾರೆ. ಈ ವಿಶೇಷ ಅತಿಥಿಗಳಿಗೆ ಗೌರವ ಸೂಚಕವಾಗಿ ಕೇಂದ್ರ ಎಂ ಎಸ್ ಎಂ ಇ ಸಚಿವರು ಮತ್ತು ಎಂ ಎಸ್ ಎಂ ಇ ರಾಜ್ಯ ಸಚಿವರು 2025ರ ಆಗಸ್ಟ್ 15 ರಂದು ಔತಣಕೂಟವನ್ನು ಆಯೋಜಿಸಿದ್ದಾರೆ. ಅವರು ದೆಹಲಿಯ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಲಿದ್ದಾರೆ.

 

*****
 


(Release ID: 2156433)