ಸಂಪುಟ
azadi ka amrit mahotsav

5,801 ಕೋಟಿ ರೂ.ಗಳ ವೆಚ್ಚದ, 12 ನಿಲ್ದಾಣಗಳನ್ನು ಒಳಗೊಂಡ 11.165 ಕಿ.ಮೀ ಉದ್ದದ ಲಕ್ನೋ ಮೆಟ್ರೋ ರೈಲು ಯೋಜನೆಯ 'ಹಂತ -1ಬಿ'ಗೆ ಸಂಪುಟದ ಅನುಮೋದನೆ

Posted On: 12 AUG 2025 3:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 11.165 ಕಿ.ಮೀ ಉದ್ದದ ಕಾರಿಡಾರ್ ಹೊಂದಿರುವ ಉತ್ತರ ಪ್ರದೇಶದ ಲಕ್ನೋ ಮೆಟ್ರೋ ರೈಲು ಯೋಜನೆಯ 'ಹಂತ-1ಬಿ'ಗೆ ತನ್ನ ಅನುಮೋದನೆ ನೀಡಿದೆ. ಹಂತ -1 ಬಿ ಕಾರ್ಯರೂಪಕ್ಕೆ ಬಂದ ನಂತರ, ಲಕ್ನೋ ನಗರವು 34 ಕಿ.ಮೀ ಸಕ್ರಿಯ ಮೆಟ್ರೋ ರೈಲು ಜಾಲವನ್ನು ಹೊಂದಿರುತ್ತದೆ.

ಪ್ರಯೋಜನಗಳು ಮತ್ತು ಬೆಳವಣಿಗೆಯ ವೇಗವರ್ಧನೆ:

ಲಕ್ನೋ ಮೆಟ್ರೋ ರೈಲು ಯೋಜನೆಯ ಹಂತ -1ಬಿ ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಹಂತ -1 ಬಿ ನಗರದ ಮೆಟ್ರೋ ರೈಲು ಜಾಲದ ಪ್ರಮುಖ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತದೆ.

ಸುಧಾರಿತ ಸಂಪರ್ಕ:

ಲಕ್ನೋ ಮೆಟ್ರೋ ಯೋಜನೆಯ ಹಂತ -1ಬಿ, ಸರಿಸುಮಾರು 11.165 ಕಿ.ಮೀ ಹೊಸ ಮೆಟ್ರೋ ಮಾರ್ಗಗಳನ್ನು ಸೃಷ್ಟಿಸಲಿದೆ, ಪ್ರಸ್ತುತ ಪರಿಣಾಮಕಾರಿ ಸಂಪರ್ಕವಿಲ್ಲದ ನಗರದ ಅತ್ಯಂತ ಹಳೆಯ ಮತ್ತು ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ಈ ಹಂತವು ಹಳೆಯ ಲಕ್ನೋದ ಪ್ರಮುಖ ವಲಯಗಳನ್ನು ಅವಿರತವಾಗಿ ಸಂಯೋಜಿಸುವ ಗುರಿಯನ್ನು ಹೊಂದಿದೆ, ಅವುಗಳೆಂದರೆ:

ವಾಣಿಜ್ಯ ಕೇಂದ್ರಗಳು: ಅಮೀನಾಬಾದ್, ಯಹಿಯಾಗಂಜ್, ಪಾಂಡೆಗಂಜ್ ಮತ್ತು ಚೌಕ್

ನಿರ್ಣಾಯಕ ಆರೋಗ್ಯ ಸೌಲಭ್ಯಗಳು, ವಿಶೇಷವಾಗಿ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ವೈದ್ಯಕೀಯ ಕಾಲೇಜು) 

ಪ್ರಮುಖ ಪ್ರವಾಸಿ ಆಕರ್ಷಣೆಗಳು, ಬಾರಾ ಇಮಾಂಬರಾ, ಚೋಟಾ ಇಮಾಂಬರಾ, ಭೂಲ್ ಭುಲೈಯಾ, ಕ್ಲಾಕ್ ಟವರ್ ಮತ್ತು ರುಮಿ ದರ್ವಾಜಾ ಮುಂತಾದವು.

ಆಹಾರ ತಾಣಗಳು ನಗರದ ಶ್ರೀಮಂತ ಮತ್ತು ಐತಿಹಾಸಿಕ ಆಹಾರ ಸಂಸ್ಕೃತಿಗೆ ಹೆಸರುವಾಸಿಯಾದ ಪ್ರದೇಶಗಳು.

ಈ ಪ್ರಮುಖ ಪ್ರದೇಶಗಳನ್ನು ಮೆಟ್ರೋ ಜಾಲದೊಂದಿಗೆ ಸಂಪರ್ಕಿಸುವ ಮೂಲಕ, ಹಂತ -1 ಬಿ ಸಂಪರ್ಕವನ್ನು ಹೆಚ್ಚಿಸುವುದಲ್ಲದೆ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಜೊತೆಗೆ ಸ್ಥಳೀಯ ನಿವಾಸಿಗಳು ಮತ್ತು ಸಂದರ್ಶಕರಿಗೆ ನಗರ ಸಾರಿಗೆ ಸಂಪರ್ಕವನ್ನು ಸುಲಭಗೊಳಿಸುತ್ತದೆ.

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು: ಮೆಟ್ರೋ ರೈಲು ಪರಿಣಾಮಕಾರಿ ಪರ್ಯಾಯ ರಸ್ತೆ ಸಾರಿಗೆಯಾಗಿ ಹಾಗೂ  ಹಂತ -1 ಬಿ ಮೂಲಕ ಲಕ್ನೋ ನಗರದಲ್ಲಿ ಮೆಟ್ರೋ ರೈಲು ಜಾಲದ ವಿಸ್ತರಣೆಯೊಂದಿಗೆ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿರೀಕ್ಷೆಯಿದೆ. ಮತ್ತು ಹಳೆಯ ಲಕ್ನೋದ ಹೆಚ್ಚು ಜನದಟ್ಟಣೆಯ ಮಾರ್ಗಗಳಲ್ಲಿ ವಿಶೇಷವಾಗಿ ಇದು ಪರಿಣಾಮ ಬೀರುತ್ತದೆ. ರಸ್ತೆ ಸಂಚಾರವನ್ನು ಕಡಿಮೆ ಮಾಡುವುದರಿಂದ ವಾಹನಗಳ ಸುಗಮ ಚಲನೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು, ಒಟ್ಟಾರೆ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಇತ್ಯಾದಿ ಪ್ರಯೋಜನಗಳಿಗೆ ಕಾರಣವಾಗಬಹುದು.

ಪರಿಸರ ಪ್ರಯೋಜನಗಳು: ಹಂತ -1ಬಿ ಲಕ್ನೋ ಮೆಟ್ರೋ ರೈಲು ಯೋಜನೆಯ ಸೇರ್ಪಡೆ ಮತ್ತು ಲಕ್ನೋ ನಗರದಲ್ಲಿ ಒಟ್ಟಾರೆ ಮೆಟ್ರೋ ರೈಲು ಜಾಲದ ಹೆಚ್ಚಳವು ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಆಧಾರಿತ ಸಾರಿಗೆಗೆ ಹೋಲಿಸಿದರೆ ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಆರ್ಥಿಕ ಬೆಳವಣಿಗೆ: ಕಡಿಮೆ ಪ್ರಯಾಣದ ಸಮಯ ಹಾಗೂ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಡಿಪೋಗಳಂತಹ ನಗರದ ವಿವಿಧ ಭಾಗಗಳಿಗೆ ಸುಧಾರಿತ ಸಂಪರ್ಕವು ವ್ಯಕ್ತಿಗಳಿಗೆ ತಮ್ಮ ಕೆಲಸದ ಸ್ಥಳಗಳು ಮತ್ತು ಗಮ್ಯಸ್ಥಾನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಲು ಅನುವು ಮಾಡಿಕೊಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಸುಧಾರಿತ ಸಂಪರ್ಕವು ವಿಶೇಷವಾಗಿ ಹೊಸ ಮೆಟ್ರೋ ನಿಲ್ದಾಣಗಳ ಬಳಿಯ ಪ್ರದೇಶಗಳಲ್ಲಿ ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ. ಇದು ಹಿಂದೆ ಕಡಿಮೆ ಸಂಪರ್ಕ ಸಾಧ್ಯತೆ ಹೊಂದಿದ್ದ ಪ್ರದೇಶಗಳಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯನ್ನು ಆಕರ್ಷಿಸುತ್ತದೆ.

ಸಾಮಾಜಿಕ ಪರಿಣಾಮ: ಲಕ್ನೋದಲ್ಲಿ ಹಂತ -1 ಬಿ ಮೆಟ್ರೋ ರೈಲು ಜಾಲದ ವಿಸ್ತರಣೆಯು ಸಾರ್ವಜನಿಕ ಸಾರಿಗೆಗೆ ಹೆಚ್ಚು ಸಮಾನವಾದ ಪ್ರವೇಶವನ್ನು ಒದಗಿಸುತ್ತದೆ, ವೈವಿಧ್ಯಮಯ ಸಾಮಾಜಿಕ-ಆರ್ಥಿಕ ಸಮುದಾಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಸಾರಿಗೆ ಅಸಮಾನತೆಯನ್ನು ಕಡಿಮೆ ಮಾಡುತ್ತದೆ. ಇದು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮೂಲಕ ಮತ್ತು ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವ ಮೂಲಕ ಉನ್ನತ ಜೀವನ ಗುಣಮಟ್ಟಕ್ಕೆ ಕೊಡುಗೆ ನೀಡುತ್ತದೆ.

ಹಂತ -1 ಬಿ ಲಕ್ನೋ ಮೆಟ್ರೋ ರೈಲು ಯೋಜನೆಯು ನಗರಕ್ಕೆ ಕ್ರಾಂತಿಕಾರಿಯಾಗಲಿದೆ. ಇದು ವರ್ಧಿತ ಸಂಪರ್ಕ, ಕಡಿಮೆ ಸಂಚಾರ ದಟ್ಟಣೆ, ಪರಿಸರ ಪ್ರಯೋಜನಗಳು, ಆರ್ಥಿಕ ಬೆಳವಣಿಗೆ ಮತ್ತು ಸುಧಾರಿತ ಜೀವನದ ಗುಣಮಟ್ಟವನ್ನು ತಲುಪಿಸುವ ಭರವಸೆ ನೀಡುತ್ತದೆ. ನಗರದ ಪ್ರಮುಖ ಸವಾಲುಗಳನ್ನು ಎದುರಿಸುವ ಮೂಲಕ ಮತ್ತು ಭವಿಷ್ಯದ ವಿಸ್ತರಣೆಗೆ ಅಡಿಪಾಯವನ್ನು ಒದಗಿಸುವ ಮೂಲಕ, ಹಂತ -1 ಬಿ ಯೋಜನೆಯು ನಗರದ ಅಭಿವೃದ್ಧಿ ಪಥ ಮತ್ತು ಸುಸ್ಥಿರತೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

 

*****
 


(Release ID: 2155545)