ರಾಷ್ಟ್ರಪತಿಗಳ ಕಾರ್ಯಾಲಯ
ರಕ್ಷಾ ಬಂಧನದ ಮುನ್ನಾದಿನದಂದು ಭಾರತದ ರಾಷ್ಟ್ರಪತಿ ಅವರ ಶುಭಾಶಯ
Posted On:
08 AUG 2025 4:26PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಕ್ಷಾ ಬಂಧನದ ಮುನ್ನಾದಿನದಂದು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:-
“ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಸಹ ನಾಗರಿಕರಿಗೆ ನನ್ನ ಆತ್ಮೀಯ ಶುಭ ಹಾರೈಕೆಗಳು ಮತ್ತು ಶುಭಾಶಯಗಳು.
ರಕ್ಷಾ ಬಂಧನದ ಪವಿತ್ರ ಹಬ್ಬವು ಸಹೋದರ ಸಹೋದರಿಯರ ನಡುವಿನ ಪ್ರೀತಿ ಮತ್ತು ವಿಶ್ವಾಸದ ವಿಶಿಷ್ಟ ಬಂಧದ ಪ್ರತೀಕವಾಗಿದೆ. ಈ ಹಬ್ಬವು ಸಮಾಜದಲ್ಲಿ ಸಾಮರಸ್ಯ ಮತ್ತು ಏಕತೆಯ ಮನೋಭಾವವನ್ನು ಪ್ರೇರೇಪಿಸಲಿದೆ. ಇದು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಸಂರಕ್ಷಿಸುವ ಸುಸಂದರ್ಭವಾಗಿದೆ. ಈ ಹಬ್ಬವು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಮತ್ತು ಅವರನ್ನು ಗೌರವಿಸುವ ನಮ್ಮ ಸಂಕಲ್ಪಕ್ಕೆ ಬಲ ತುಂಬಲಿದೆ.
ಪ್ರತಿಯೊಬ್ಬ ಮಹಿಳೆಗೂ ಸುರಕ್ಷಿತ ಭಾವ ಮೂಡಿ ಅವರು ರಾಷ್ಟ್ರದ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಬಹುದಾದ ಸಮೃದ್ಧ ದೇಶವನ್ನು ನಿರ್ಮಿಸಲು ನಾವು ಈ ಸಂದರ್ಭದಲ್ಲಿ ಪ್ರತಿಜ್ಞೆ ಮಾಡೋಣ”.
ರಾಷ್ಟ್ರಪತಿಗಳ ಸಂದೇಶ ಓದಲು ಇಲ್ಲಿ ಕ್ಲಿಕ್ ಮಾಡಿ:
*****
(Release ID: 2154463)