ರೈಲ್ವೇ ಸಚಿವಾಲಯ
azadi ka amrit mahotsav

ಭಾವನಗರದಲ್ಲಿರುವ ಕಂಟೇನರ್ ಉತ್ಪಾದನಾ ಕಂಪನಿಗೆ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಭೇಟಿ


ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಕಂಟೇನರ್ ಉತ್ಪಾದನೆಯ ಸಂಪೂರ್ಣ ಪ್ರಕ್ರಿಯೆ ಮತ್ತು ತಂತ್ರಜ್ಞಾನವನ್ನು ಪರಿಶೀಲಿಸಿ, ಮಾರ್ಗದರ್ಶನ ನೀಡಿದರು

ಕೇಂದ್ರ ಸಚಿವರಾದ ಡಾ. ಮನ್ಸುಖ್‌ ಮಾಂಡವಿಯಾ ಮತ್ತು ಸಹಾಯಕ ಸಚಿವರಾದ ಶ್ರೀಮತಿ ನಿಮುಬೆನ್ ಬಂಭಾನಿಯಾ ಅವರ ವಿಶೇಷ ಉಪಸ್ಥಿತಿ ಇತ್ತು

Posted On: 03 AUG 2025 8:14PM by PIB Bengaluru

ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್; ಕಾರ್ಮಿಕ ಮತ್ತು ಉದ್ಯೋಗ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್‌ ಮಾಂಡವಿಯಾ; ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಹಾಗು ಸಾರ್ವಜನಿಕ ವಿತರಣಾ ಸಹಾಯಕ ಸಚಿವೆ ಶ್ರೀಮತಿ ನಿಮುಬೆನ್ ಬಂಭಾನಿಯಾ ಅವರು ಭಾವನಗರ ಜಿಲ್ಲೆಯಲ್ಲಿರುವ ಕಂಟೇನರ್ ಉತ್ಪಾದನಾ ಕಂಪನಿ ಆವಧ್ ಕೃಪಾ ಪ್ಲಾಸ್ಟೊಮೆಕ್ ಪ್ರೈವೇಟ್ ಲಿಮಿಟೆಡ್‌ಗೆ ಭೇಟಿ ನೀಡಿದರು.

ಭಾವನಗರ-ರಾಜ್‌ಕೋಟ್ ರಸ್ತೆಯಲ್ಲಿರುವ ಆವಧ್ ಕೃಪಾ ಪ್ಲಾಸ್ಟೊಮೆಕ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಉತ್ಪಾದಿಸಲಾಗುತ್ತಿರುವ ಕಂಟೇನರ್‌ಗಳ ಕುರಿತು ಕೇಂದ್ರ ಸಚಿವರು ವಿವರವಾದ ಮಾಹಿತಿಯನ್ನು ಪಡೆದು, ಅಗತ್ಯ ಸಲಹೆಗಳು ಮತ್ತು ಮಾರ್ಗದರ್ಶನವನ್ನು ನೀಡಿದರು.

ಭಾವನಗರವು ಈಗ ಕಂಟೇನರ್ ಉತ್ಪಾದನಾ ತಾಣವಾಗುವತ್ತ  ಸಾಗುತ್ತಿದೆ. ಭಾವನಗರದ ನವಗಾಂನಲ್ಲಿರುವ ಕಂಟೇನರ್ ಉತ್ಪಾದನಾ ಕಂಪನಿಯು ಪ್ರಸ್ತುತ ಬೇಡಿಕೆ ಆದೇಶಗಳ ಪ್ರಕಾರ ದಿನಕ್ಕೆ ಸುಮಾರು 15 ಕಂಟೇನರ್‌ಗಳನ್ನು ಉತ್ಪಾದಿಸುತ್ತಿದೆ. ಕಂಪನಿಯು ಈಗ ಪ್ರತಿದಿನ 100 ಕಂಟೇನರ್‌ಗಳನ್ನು ತಯಾರಿಸಲು ಅವಶ್ಯವಾದ ಮೂಲಸೌಕರ್ಯವನ್ನು ಹೊಂದಿದೆ. ರೈಲ್ವೆ ಸಚಿವರು ಕಂಟೇನರ್ ಉತ್ಪಾದನೆಯ ಸಂಪೂರ್ಣ ಪ್ರಕ್ರಿಯೆ ಮತ್ತು ತಂತ್ರಜ್ಞಾನವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು ಮತ್ತು ಭವಿಷ್ಯದಲ್ಲಿ ಕಂಟೇನರ್‌ಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಪೂರೈಸಲು ಕಂಪನಿಯು ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಪಡೆಯುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ, ರೈಲ್ವೆ ಸಚಿವರೊಂದಿಗೆ ಜಿಲ್ಲಾಧಿಕಾರಿ ಡಾ. ಮನೀಶ್ ಕುಮಾರ್ ಬನ್ಸಾಲ್, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶ್ರೀ ಹನುಲ್ ಚೌಧರಿ, ಪ್ರಾದೇಶಿಕ ಆಯುಕ್ತ ಶ್ರೀ ಧವಲ್ ಪಾಂಡ್ಯ, ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರ್ಷದ್ ಪಟೇಲ್ ಮತ್ತು ಅವಧ್ ಕೃಪಾ ಪ್ಲಾಸ್ಟೋಮೆಕ್ ಪ್ರೈವೇಟ್ ಲಿಮಿಟೆಡ್‌ನ ಶ್ರೀ ಹಸ್ಮುಖ್‌ಭಾಯ್ ಪಟೇಲ್ ಮತ್ತು ಇತರ ಗಣ್ಯರು ಇದ್ದರು.

 

*****

 

 


(Release ID: 2152049)