ಸಹಕಾರ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಂದಿನ ನಾಲ್ಕು ವರ್ಷಗಳ ಅವಧಿಗೆ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (NCDC) ₹2000 ಕೋಟಿ ನೆರವು ನೀಡಿದ ಸಂಪುಟದ ನಿರ್ಧಾರಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು
ಪ್ರಧಾನಮಂತ್ರಿ ಮೋದಿ ಅವರ 'ಸಹಕಾರದಿಂದ ಸಮೃದ್ಧಿ' ಮಂತ್ರದ ಅಡಿಯಲ್ಲಿ, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು (NCDC) ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ
ಈ ನಿರ್ಧಾರವು ಸಹಕಾರ ಸಂಘಗಳಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು, ಸ್ಥಾವರಗಳನ್ನು ವಿಸ್ತರಿಸಲು ಮತ್ತು ಸಾಲಗಳನ್ನು ನೀಡಲು ಸಹಾಯ ಮಾಡಲಿದೆ. ಇದರಿಂದ ಸಹಕಾರಿ ಸಂಘಗಳ ಕೋಟ್ಯಂತರ ಸದಸ್ಯರಿಗೆ ಪ್ರಯೋಜನವಾಗಲಿದ್ದು, ಮಹಿಳೆಯರು ಸ್ವಾವಲಂಬಿಗಳಾಗಲಿದ್ದಾರೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ
Posted On:
31 JUL 2025 7:46PM by PIB Bengaluru
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (NCDC) ಮುಂದಿನ ನಾಲ್ಕು ವರ್ಷಗಳಿಗಾಗಿ ಸಚಿವ ಸಂಪುಟವು ₹2000 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಕ್ಕಾಗಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರದಿಂದ ಸಮೃದ್ಧಿ' ಎಂಬ ಮಂತ್ರಕ್ಕೆ ಅನುಗುಣವಾಗಿ, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು (NCDC) ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಂದು, ಕೇಂದ್ರ ಸಚಿವ ಸಂಪುಟವು ಎನ್.ಸಿ.ಡಿ.ಸಿಗೆ ಮುಂದಿನ ನಾಲ್ಕು ವರ್ಷಗಳವರೆಗೆ, ಪ್ರತಿ ವರ್ಷಕ್ಕೆ ₹500 ಕೋಟಿಯಂತೆ ಒಟ್ಟು ₹2000 ಕೋಟಿ ಅನುದಾನ ಸಹಾಯವನ್ನು ಅನುಮೋದಿಸಿದೆ. ಇದು ಸಹಕಾರಿಗಳಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು, ಘಟಕಗಳನ್ನು ವಿಸ್ತರಿಸಲು ಮತ್ತು ಸಾಲಗಳನ್ನು ನೀಡಲು ಸಹಾಯ ಮಾಡಲಿದೆ. ಇದರಿಂದ ಸಹಕಾರಿ ಸಂಘಗಳೊಂದಿಗೆ ಸಂಬಂಧ ಹೊಂದಿರುವ ಕೋಟ್ಯಂತರ ಸದಸ್ಯರಿಗೆ ಪ್ರಯೋಜನವಾಗಲಿದೆ, ಮಹಿಳೆಯರು ಸ್ವಾವಲಂಬಿಗಳಾಗಲಿದ್ದಾರೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ದೇಶಾದ್ಯಂತ ಇರುವ ಸಹಕಾರಿ ವಲಯದ ಪರವಾಗಿ ಈ ಕಲ್ಯಾಣದ ನಿರ್ಧಾರಕ್ಕಾಗಿ ನಾನು ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ" ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆಯ ಪೋಸ್ಟ್ ಗಳಲ್ಲಿ ತಿಳಿಸಿದ್ದಾರೆ.
ಇನ್ನೊಂದು ಪೋಸ್ಟ್ ನಲ್ಲಿ, ಶ್ರೀ ಅಮಿತ್ ಶಾ ಅವರು "ರೈತರ ಕಲ್ಯಾಣವು ಮೋದಿ ಸರ್ಕಾರದ ಅಗ್ರ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರದಲ್ಲಿ, ಕೇಂದ್ರ ಸಚಿವ ಸಂಪುಟವು 'ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ'ಗಾಗಿ ₹6,520 ಕೋಟಿಗಳ ಒಟ್ಟು ವೆಚ್ಚಕ್ಕೆ ಅನುಮೋದನೆ ನೀಡಿದೆ. ಇದರಲ್ಲಿ ₹1,920 ಕೋಟಿಗಳ ಹೆಚ್ಚುವರಿ ಮೊತ್ತವೂ ಸೇರಿದೆ. ಈ ಯೋಜನೆಯಡಿಯಲ್ಲಿ, 50 ಬಹು-ಉತ್ಪನ್ನ ಆಹಾರ ವಿಕಿರಣ ಘಟಕಗಳು ಮತ್ತು 100 ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಇದು ಆಹಾರ ಸಂರಕ್ಷಣೆಯನ್ನು ಉತ್ತೇಜಿಸುವುದಲ್ಲದೆ, ಆಹಾರದ ಸುರಕ್ಷತೆ ಮತ್ತು ಗುಣಮಟ್ಟವನ್ನು ಸುಧಾರಿಸಲಿದೆ ಹಾಗೂ ರೈತರು ತಮ್ಮ ಬೆಳೆಗೆ ಉತ್ತಮ ಬೆಲೆಯನ್ನು ಪಡೆಯಲಿದ್ದಾರೆ" ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಮೋದಿ ಸರ್ಕಾರವು ದೇಶವಾಸಿಗಳಿಗೆ ಹೈ-ಸ್ಪೀಡ್ ರೈಲು ಜಾಲದ ಸೌಲಭ್ಯವನ್ನು ಒದಗಿಸುವ ಮೂಲಕ ಅವರ ಪ್ರಯಾಣವನ್ನು ಹೆಚ್ಚು ಆಹ್ಲಾದಕರ ಮತ್ತು ಸುಗಮಗೊಳಿಸಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ, ಕೇಂದ್ರ ಸಚಿವ ಸಂಪುಟವು ಪೂರ್ವ, ಮಧ್ಯ ಮತ್ತು ಪಶ್ಚಿಮ ವಲಯಗಳ 6 ರಾಜ್ಯಗಳ 13 ಜಿಲ್ಲೆಗಳಲ್ಲಿ 4 ಬಹು-ಮಾರ್ಗ ಯೋಜನೆಗಳಿಗೆ (multi-tracking projects) ಅನುಮೋದನೆ ನೀಡಿದೆ. ₹11,169 ಕೋಟಿ ವೆಚ್ಚದ ಈ ಯೋಜನೆಗಳು ರೈಲ್ವೆ ಜಾಲವನ್ನು ಇನ್ನೂ 574 ಕಿ.ಮೀ.ನಷ್ಟು ವಿಸ್ತರಿಸಲಿವೆ. ಇದು ಸಂಪರ್ಕವನ್ನು ಸುಧಾರಿಸುವುದಲ್ಲದೆ, ಉದ್ಯಮ ಮತ್ತು ವ್ಯಾಪಾರಕ್ಕೆ ಚಾಲನೆ ನೀಡಲಿದೆ ಹಾಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
*****
(Release ID: 2151124)