ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ದಕ್ಷಿಣ ಭಾರತೀಯ ಭಾಷೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯದೊಂದಿಗೆ ಡಿಡಿ ಫ್ರೀ ಡಿಶ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ

Posted On: 23 JUL 2025 4:32PM by PIB Bengaluru

ಡಿಡಿ ಫ್ರೀ ಡಿಶ್ ಪ್ರಸಾರ ಭಾರತಿಯ ಉಚಿತ-ಪ್ರಸಾರ (ಎಫ್‌ ಟಿ ಎ) ಡೈರೆಕ್ಟ್-ಟು-ಹೋಮ್ (ಡಿಟಿಎಚ್) ವೇದಿಕೆಯಾಗಿದೆ. ಇದು ದೂರದ, ಗಡಿಭಾಗದ ಮತ್ತು ದುರ್ಗಮ ಪ್ರದೇಶಗಳನ್ನು ಒಳಗೊಂಡಂತೆ ಇಡೀ ದೇಶವನ್ನು ವ್ಯಾಪಿಸಿದೆ.

ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ದೂರದರ್ಶನದ ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಾಹಿನಿಗಳಲ್ಲಿ ಕಾರ್ಯಕ್ರಮಗಳ ಮೂಲಕ ಡಿಡಿ ಫ್ರೀ ಡಿಶ್‌ ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ಇದು ತನ್ನ ವ್ಯಾಪ್ತಿಯಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಉದ್ಯಮದ ಅಂದಾಜಿನ ಪ್ರಕಾರ, 2024ರ ಹೊತ್ತಿಗೆ ಡಿಡಿ ಫ್ರೀ ಡಿಶ್ ದೇಶಾದ್ಯಂತ ಸುಮಾರು 49 ಮಿಲಿಯನ್ ಮನೆಗಳನ್ನು ತಲುಪಿದೆ. 2018 ರಲ್ಲಿ ಈ ಸಂಖ್ಯೆ 33 ಮಿಲಿಯನ್ ಆಗಿತ್ತು, ಇದು ಸಕಾರಾತ್ಮಕ ಪ್ರೇಕ್ಷಕರ ಬೆಳವಣಿಗೆಯನ್ನು ಸೂಚಿಸುತ್ತದೆ.

ಡಿಡಿ ಫ್ರೀ ಡಿಶ್‌ ನಲ್ಲಿ ದಕ್ಷಿಣ ಭಾರತೀಯ ಭಾಷಾ ವಾಹಿನಿಗಳ ಪ್ರಾತಿನಿಧ್ಯವನ್ನು ಹೆಚ್ಚಿಸಲು ಸರ್ಕಾರ ವಿವಿಧ ಸಕ್ರಿಯ ಕ್ರಮಗಳನ್ನು ತೆಗೆದುಕೊಂಡಿದೆ, ಅವುಗಳೆಂದರೆ:

  • ಉತ್ತಮ ಪ್ರಾದೇಶಿಕ ಪ್ರಾತಿನಿಧ್ಯಕ್ಕಾಗಿ, ಡಿಡಿ ಫ್ರೀ ಡಿಶ್ ಪ್ಲಾಟ್‌ಫಾರ್ಮ್‌ ನ ಇ-ಹರಾಜಿನಲ್ಲಿ (2025 ರಲ್ಲಿ ನಡೆಸಲಾಯಿತು) ದಕ್ಷಿಣ ಭಾರತೀಯ ಭಾಷಾ ವಾಹಿನಿಗಳಿಗೆ ಸ್ಲಾಟ್‌ ಗಳನ್ನು ಕಾಯ್ದಿರಿಸಲಾಗಿದೆ
  • ದಕ್ಷಿಣ ಪ್ರದೇಶದ ಖಾಸಗಿ ಪ್ರಸಾರಕರಿಂದ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಅರ್ಹತಾ ಮಾನದಂಡಗಳನ್ನು ಸರಳೀಕರಿಸಲಾಗಿದೆ
  • ಇದಲ್ಲದೆ, ಇತ್ತೀಚಿನ ಇ-ಹರಾಜಿನಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ವಾಹಿನಿಗಳಿಗೆ ಮೀಸಲಾದ ಸ್ಲಾಟ್‌ ಗಳನ್ನು ನೀಡಲಾಯಿತು.
  • 01.04.2025 ರಿಂದ ಮೂರು ಹೆಚ್ಚುವರಿ ದಕ್ಷಿಣ ಭಾರತೀಯ ಭಾಷಾ ಖಾಸಗಿ ವಾಹಿನಿಗಳು ಅಂದರೆ ಟಿವಿ9 ತೆಲುಗು, ಆಸ್ತಾ ಕನ್ನಡ ಮತ್ತು ಆಸ್ತಾ ತೆಲುಗು, ಡಿಡಿ ಫ್ರೀ ಡಿಶ್‌ ನಲ್ಲಿ ಸೇರ್ಪಡೆಯಾಗಿವೆ.

ದೂರದರ್ಶನದ ಸ್ವಂತ ಪ್ರಾದೇಶಿಕ ವಾಹಿನಿಗಳಾದ ಡಿಡಿ ತಮಿಳು, ಡಿಡಿ ಸಪ್ತಗಿರಿ, ಡಿಡಿ ಚಂದನ, ಡಿಡಿ ಯಾದಗಿರಿ ಮತ್ತು ಡಿಡಿ ಮಲಯಾಳಂಗಳನ್ನು ಸಹ ಸೇರಿಸಲಾಗಿದೆ. ಈ ವಾಹಿನಿಗಳನ್ನು ತಾಂತ್ರಿಕವಾಗಿ ನವೀಕರಿಸಲಾಗುತ್ತಿದೆ ಮತ್ತು ಅವುಗಳ ಗೋಚರತೆಯನ್ನು ಹೆಚ್ಚಿಸಲು ಉತ್ತಮ ಪ್ರಚಾರವನ್ನು ಮಾಡಲಾಗುತ್ತಿದೆ.

ಇದಲ್ಲದೆ, ಡಿಡಿ ಫ್ರೀ ಡಿಶ್‌ ನಲ್ಲಿ 27 ಶೈಕ್ಷಣಿಕ ವಾಹಿನಿಗಳಿದ್ದು, ಇವು ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.

ಈ ಮಾಹಿತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಲೋಕಸಭೆಯಲ್ಲಿ ನೀಡಿದರು.

 

*****


(Release ID: 2147564)