ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಂದ ಬಿಹಾರದ ಮೋತಿಹಾರಿಯಲ್ಲಿ ಸ್ವಾಮಿ ಶಕ್ತಿ ಶರಣಾನಂದ ಸರಸ್ವತಿ ಜಿ ಮಹಾರಾಜ್ ಅವರ ಭೇಟಿ
Posted On:
18 JUL 2025 9:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಮೋತಿಹಾರಿಯಲ್ಲಿ ಸ್ವಾಮಿ ಶಕ್ತಿ ಶರಣಾನಂದ ಸರಸ್ವತಿ ಜಿ ಮಹಾರಾಜ್ ಅವರನ್ನು ಭೇಟಿ ಮಾಡಿದರು. ಶ್ರೀ ಮೋದಿಯವರು ಸ್ವಾಮಿ ಶರಣಾನಂದರ ಆಶೀರ್ವಾದವನ್ನು ಪಡೆದರು ಮತ್ತು ಮಹಾರಾಜ್ ರವರ ಆತ್ಮೀಯತೆ, ವಾತ್ಸಲ್ಯ ಮತ್ತು ಮಾರ್ಗದರ್ಶನಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
"ಮೋತಿಹಾರಿಯಲ್ಲಿ ಇಂದು ಸ್ವಾಮಿ ಶಕ್ತಿ ಶರಣಾನಂದ ಸರಸ್ವತಿ ಜಿ ಮಹಾರಾಜ್ ಅವರ ಆಶೀರ್ವಾದ ಪಡೆಯುವ ಸೌಭಾಗ್ಯ ನನಗೆ ದೊರೆಯಿತು. ಅವರ ವ್ಯಕ್ತಿತ್ವವು ತೇಜಸ್ಸು ಮತ್ತು ಶಕ್ತಿಯಿಂದ ತುಂಬಿದ್ದು, ಅವರ ಮಾತು ಕೂಡ ಆಧ್ಯಾತ್ಮಿಕತೆಯಿಂದ ಕೂಡಿದೆ. ಮಹಾರಾಜ್ ಅವರ ಆತ್ಮೀಯತೆ, ವಾತ್ಸಲ್ಯ ಮತ್ತು ಮಾರ್ಗದರ್ಶನದಿಂದ ನನ್ನ ಮನಸ್ಸು ತುಂಬಿಬಂದಿದೆ !"
*****
(Release ID: 2146028)