ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ನಾವೀನ್ಯತೆಯೊಂದಿಗೆ ಜಾಗತಿಕ ಸೃಜನಶೀಲ ಆರ್ಥಿಕತೆಯನ್ನು ಮುನ್ನಡೆಸಲು ಭಾರತ ಸಜ್ಜಾಗಿದೆ: ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು


ವೇವ್ಎಕ್ಸ್ ಸ್ಟಾರ್ಟ್ಅಪ್ ಆಕ್ಸಿಲರೇಟರ್ ಪ್ಲಾಟ್ಫಾರ್ಮ್ ನಲ್ಲಿ ಕಲಾ ಸೇತು ಮತ್ತು ಭಾಷಾ ಸೇತು ಸವಾಲುಗಳಲ್ಲಿ ಭಾಗವಹಿಸಲು ಭಾರತದ ಪ್ರಮುಖ ಕೃತಕ ಬುದ್ಧಿಮತ್ತೆ ನವೋದ್ಯಮಗಳನ್ನು ಶ್ರೀ ಜಾಜು ಆಹ್ವಾನಿಸಿದ್ದಾರೆ

Posted On: 17 JUL 2025 5:23PM by PIB Bengaluru

ದೇಶಾದ್ಯಂತ ಪ್ರತಿಯೊಂದು ಭಾಷೆಯಲ್ಲಿಯೂ ಸಮಗ್ರ ಸಂವಹನ ಮತ್ತು ಮಾಹಿತಿಯ ಕೊನೆಯ ಮೈಲಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು, ಭಾಷಾ ಅಂತರವನ್ನು ಕಡಿಮೆ ಮಾಡುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರಗಳನ್ನು ಅಳವಡಿಸಿಕೊಳ್ಳುವತ್ತ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಾಗುತ್ತಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಇಂದು ಹೈದರಾಬಾದಿನ ಟಿ-ಹಬ್ ನಲ್ಲಿ ಎಐ/ಎಂಎಲ್ ಆಧಾರಿತ ತಂತ್ರಜ್ಞಾನ ಪರಿಹಾರಗಳ ಕುರಿತು ಕೆಲಸ ಮಾಡುತ್ತಿರುವ ದೇಶಾದ್ಯಂತದ ಇನ್ಕ್ಯುಬೇಟರ್ ಗಳು ಮತ್ತು ನವೋದ್ಯಮಗಳೊಂದಿಗೆ ಸಭೆ ನಡೆಸಿದರು. ಟಿ-ಹಬ್ ನ ಸಿಇಒಗಳು ಮತ್ತು ಟಿ-ಹಬ್ ನಲ್ಲಿ ಇನ್ಕ್ಯುಬೇಟ್ ಮಾಡಲಾಗುತ್ತಿರುವ ನವೋದ್ಯಮಗಳ ಜೊತೆಗೆ, ಐಐಟಿ ಹೈದರಾಬಾದ್, ಎನ್ ಐ ಟಿ ಗಳ ಶ್ರೇಷ್ಠತಾ ಕೇಂದ್ರಗಳು ಮತ್ತು ಸಕ್ರಿಯ ನಾವೀನ್ಯತೆ ಕೋಶಗಳನ್ನು ಹೊಂದಿರುವ ಎಂಜಿನಿಯರಿಂಗ್ ಸಂಸ್ಥೆಗಳ ಪ್ರತಿನಿಧಿಗಳು ಸಹ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಜಾಜು, ದೇಶದ ಸೃಜನಶೀಲ ಆರ್ಥಿಕತೆಯನ್ನು ಉತ್ತೇಜಿಸುವ ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ವೇವೆಕ್ಸ್ ಸ್ಟಾರ್ಟ್ಅಪ್ ಆಕ್ಸಿಲರೇಟರ್ ಪ್ಲಾಟ್ಫಾರ್ಮ್ ಅನ್ನು ಸ್ಥಾಪಿಸಿದೆ ಎಂದು ಹೇಳಿದರು. ಭವಿಷ್ಯಕ್ಕೆ ಸಿದ್ಧವಾಗಿರುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನಿರ್ಣಾಯಕವಾಗಿರುವ 'ಕಲಾ ಸೇತು' ಮತ್ತು 'ಭಾಷಾ ಸೇತು' ಸವಾಲುಗಳನ್ನು ಈ ವೇದಿಕೆ ಪ್ರಾರಂಭಿಸಿದೆ ಎಂದು ಅವರು ಮಾಹಿತಿ ನೀಡಿದರು. ಮೇಲಿನ ಸವಾಲುಗಳಲ್ಲಿ ಭಾಗವಹಿಸಲು ಮತ್ತು ದೇಶದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಸ್ಥಳೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತದ ಪ್ರಮುಖ ಎಐ ನವೋದ್ಯಮಗಳನ್ನು ಶ್ರೀ ಜಾಜು ಒತ್ತಾಯಿಸಿದರು.

ನವೋದ್ಯಮಗಳು https://wavex.wavesbazaar.com ನಲ್ಲಿರುವ ವೇವ್ಎಕ್ಸ್ ಪೋರ್ಟಲ್ ಮೂಲಕ 'ಕಲಾ ಸೇತು' ಮತ್ತು 'ಭಾಷಾ ಸೇತು' ಸವಾಲುಗಳಿಗೆ ನೋಂದಾಯಿಸಿಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಸಬಹುದು. ಸವಾಲುಗಳಿಗೆ ತಾಂತ್ರಿಕ ಅವಶ್ಯಕತೆಗಳು ಮತ್ತು ಇತರ ವಿವರಗಳನ್ನು ವೇವ್ಎಕ್ಸ್ ಪೋರ್ಟಲ್ ನಿಂದ ಪಡೆಯಬಹುದು. ಅಂತಿಮಗೊಳಿಸಿದ ತಂಡಗಳು ನವದೆಹಲಿಯಲ್ಲಿ ರಾಷ್ಟ್ರೀಯ ತೀರ್ಪುಗಾರರ ಮುಂದೆ ತಮ್ಮ ಪರಿಹಾರಗಳನ್ನು ಪ್ರಸ್ತುತಪಡಿಸುತ್ತವೆ ಮತ್ತು ವಿಜೇತರು ಪೂರ್ಣ ಪ್ರಮಾಣದ ಅಭಿವೃದ್ಧಿ, ಆಕಾಶವಾಣಿ, ದೂರದರ್ಶನ ಮತ್ತು ಪಿಐಬಿಯೊಂದಿಗೆ ಪೈಲಟ್ ಬೆಂಬಲ ಮತ್ತು ವೇವ್ಎಕ್ಸ್ ನಾವೀನ್ಯತೆ ವೇದಿಕೆಯ ಅಡಿಯಲ್ಲಿ ಇನ್ಕ್ಯುಬೇಶನ್ ಗಾಗಿ ಒಪ್ಪಂದವನ್ನು ಪಡೆಯುತ್ತಾರೆ.

ವೇವ್ಎಕ್ಸ್ ಎಂಬುದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೇವ್ಸ್ ಉಪಕ್ರಮದ ಅಡಿಯಲ್ಲಿ ಪ್ರಾರಂಭಿಸಲಾದ ಮೀಸಲಾದ ಸ್ಟಾರ್ಟ್ಅಪ್ ಆಕ್ಸಿಲರೇಟರ್ ಪ್ಲಾಟ್ಫಾರ್ಮ್ ಆಗಿದ್ದು, ಮಾಧ್ಯಮ, ಮನರಂಜನೆ ಮತ್ತು ಭಾಷಾ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮೇ 2025ರಲ್ಲಿ ಮುಂಬೈನಲ್ಲಿ ನಡೆದ ವೇವ್ಸ್ ಶೃಂಗಸಭೆಯಲ್ಲಿ, ವೇವ್ಎಕ್ಸ್ 30ಕ್ಕೂ ಹೆಚ್ಚು ಭರವಸೆಯ ನವೋದ್ಯಮಗಳಿಗೆ ಪಿಚಿಂಗ್ ಅವಕಾಶಗಳನ್ನು ಒದಗಿಸಿತು, ಇದು ಸರ್ಕಾರಿ ಸಂಸ್ಥೆಗಳು, ಹೂಡಿಕೆದಾರರು ಮತ್ತು ಉದ್ಯಮದ ನಾಯಕರೊಂದಿಗೆ ನೇರ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸಿತು. ವೇವ್ಎಕ್ಸ್ ಉದ್ದೇಶಿತ ಹ್ಯಾಕಥಾನ್ ಗಳು, ಇನ್ಕ್ಯುಬೇಶನ್, ಮಾರ್ಗದರ್ಶನ ಮತ್ತು ರಾಷ್ಟ್ರೀಯ ವೇದಿಕೆಗಳೊಂದಿಗೆ ಏಕೀಕರಣದ ಮೂಲಕ ವಿನೂತನ ಆಲೋಚನೆಗಳನ್ನು ಬೆಂಬಲಿಸುವುದನ್ನು ಮುಂದುವರೆಸಿದೆ.

 

*****
 


(Release ID: 2145664) Visitor Counter : 2