ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಕೋಟಾ ಶ್ರೀನಿವಾಸ್ ರಾವ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 

Posted On: 13 JUL 2025 3:55PM by PIB Bengaluru

ಶ್ರೀ ಕೋಟಾ ಶ್ರೀನಿವಾಸ ರಾವ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಕೋಟಾ ಶ್ರೀನಿವಾಸ ರಾವ್ ತಮ್ಮ ಸಿನಿಮಾ ಶ್ರೇಷ್ಠತೆ ಮತ್ತು ಬಹುಮುಖ ಪ್ರತಿಭೆಯಿಂದ ಸದಾ ಜನಮಾನಸದಲ್ಲಿ ಉಳಿಯಲಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಅದ್ಭುತ ಪ್ರದರ್ಶನದ ಮೂಲಕ ಹಲವು ತಲೆಮಾರುಗಳ ಪ್ರೇಕ್ಷಕರನ್ನು ಮೋಡಿ ಮಾಡಿರುವ ಅವರು, ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದ್ದರು ಹಾಗೂ ಬಡವರು ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಶ್ರಮಿಸಿದ್ದರು ಎಂದು ಶ್ರೀ ಮೋದಿ ಅವರು ಸ್ಮರಿಸಿದ್ದಾರೆ. 

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

"ಶ್ರೀ ಕೋಟಾ ಶ್ರೀನಿವಾಸ್ ರಾವ್ ಗಾರು ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಿನಿಮಾ ಶ್ರೇಷ್ಠತೆ ಮತ್ತು ಬಹುಮುಖ ಪ್ರತಿಭೆಯಿಂದ ಅವರು ಸದಾ ಸ್ಮರಣೀಯರು. ತಮ್ಮ ಅಮೋಘ ಪ್ರದರ್ಶನದ ಮೂಲಕ ಹಲವು ತಲೆಮಾರುಗಳ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು. ಅಲ್ಲದೇ ಅವರು ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದ್ದರು. ಬಡವರು ಮತ್ತು ದೀನದಲಿತರ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಕುಟುಂಬದವರು ಮತ್ತು ಅಸಂಖ್ಯಾತ ಅಭಿಮಾನಿಗಳ ದುಃಖದಲ್ಲಿ ಭಾಗಿಯಾಗುವೆ. ಓಂ ಶಾಂತಿ."
 

 

*****


(Release ID: 2144464)