ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಕ್ರಾದ ನುಕ್ರುಮಾ ಸ್ಮಾರಕ ಉದ್ಯಾನವನದಲ್ಲಿ ಪ್ರಧಾನಮಂತ್ರಿ ಗೌರವ ನಮನ

प्रविष्टि तिथि: 03 JUL 2025 3:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘಾನಾ ರಾಷ್ಟ್ರದ ಅಕ್ರಾದಲ್ಲಿರುವ ನುಕ್ರುಮಾ ಸ್ಮಾರಕ ಉದ್ಯಾನವನಕ್ಕೆ ಭೇಟಿ ನೀಡಿ, ಘಾನಾದ ಸಂಸ್ಥಾಪಕ ಅಧ್ಯಕ್ಷರು ಮತ್ತು ಆಫ್ರಿಕಾದ ಸ್ವಾತಂತ್ರ್ಯ ಚಳವಳಿಯ ನೇತಾರರಾದ ಡಾ. ಕ್ವಾಮೆ ನುಕ್ರುಮಾ ಅವರಿಗೆ ಗೌರವ ನಮನ ಸಲ್ಲಿಸಿದರು. ಘಾನಾದ ಉಪಾಧ್ಯಕ್ಷರಾದ ಮಾನ್ಯ ಪ್ರೊ. ನಾನಾ ಜೇನ್ ಒಪೊಕು-ಅಗ್ಯೆಮಾಂಗ್ ಅವರು ಪ್ರಧಾನಮಂತ್ರಿ ಅವರ ಜೊತೆಗಿದ್ದರು. ಸ್ವಾತಂತ್ರ್ಯ, ಏಕತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಡಾ. ಉನ್ ಕ್ರುಮಾ ಅವರ ದೀರ್ಘಕಾಲ ಉಳಿಯುವ ಕೊಡುಗೆಗಳ ಗೌರವಾರ್ಥ ಪ್ರಧಾನಮಂತ್ರಿ ಅವರು ಪುಷ್ಪಗುಚ್ಛವನ್ನಿರಿಸಿ ಒಂದು ಕ್ಷಣ ಮೌನ ಆಚರಿಸಿದರು.

ಪ್ರಧಾನಮಂತ್ರಿಯವರು ಸಲ್ಲಿಸಿದ ಗೌರವವು ಘಾನಾದ ಶ್ರೀಮಂತ ಇತಿಹಾಸದ ಬಗ್ಗೆ ಭಾರತದ ಅಪಾರ ಗೌರವವನ್ನು ಪ್ರತಿಬಿಂಬಿಸಿದೆ ಮತ್ತು ಎರಡೂ ದೇಶಗಳ ನಡುವಿನ ಮೈತ್ರಿ ಮತ್ತು ಸಹಕಾರದ ಸದೃಢ ಬಾಂಧವ್ಯವನ್ನು ದೃಢೀಕರಿಸಿದೆ.

 

*****
 


(रिलीज़ आईडी: 2141852) आगंतुक पटल : 15
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam