ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಕಳೆದ 11 ವರ್ಷಗಳ ಪರಿವರ್ತನಾ ಪಯಣದ ಬಗ್ಗೆ ಸವಿಸ್ತಾರವಾಗಿ ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ

Posted On: 18 JUN 2025 5:35PM by PIB Bengaluru

ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಕಳೆದ 11 ವರ್ಷಗಳ ಪರಿವರ್ತನಾ ಪಯಣದ ಬಗ್ಗೆ ಸವಿಸ್ತಾರವಾಗಿ ವಿವರಿಸುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ ಜನ-ಕೇಂದ್ರಿತ ನಾವಿನ್ಯತೆಯೆಡೆಗಿನ ಬದಲಾವಣೆಯನ್ನು ಪ್ರತಿಬಿಂಬಿಸುತ್ತಾ ಶ್ರೀ ಮೋದಿ ಅವರು, ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಸಬಲೀಕರಣ, ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನದಾನ ಮತ್ತು ವಿವಿಧ ಅಭಿವೃದ್ಧ್ಯಾತ್ಮಕ ವಲಯಗಳ ವರ್ಧನೆಯ ಮೂಲಕ ಭಾರತದ ಬಾಹ್ಯಾಕಾಶ ತಂತ್ರಜ್ಞಾನವು ಈಗ ದೈನಂದಿನ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂಬ ಬಗ್ಗೆ ಸಚಿವರು ವಿಷದವಾಗಿ ಪ್ರಸ್ತಾಪಿಸಿರುವ ಬಗ್ಗೆ ಹೇಳಿದ್ದಾರೆ.

ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರ ಎಕ್ಸ್ ಪೋಸ್ಟ್‌ ಗೆ ಪ್ರತಿಕ್ರಿಯೆಯಾಗಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

" ಹಳ್ಳಿಗಳಲ್ಲಿನ ರೈತರಿಂದ ಹಿಡಿದು ತರಗತಿ ಕೋಣೆಗಳಲ್ಲಿನ ವಿದ್ಯಾರ್ಥಿಗಳವರೆಗೆ ಬಾಹ್ಯಾಕಾಶ ತಂತ್ರಜ್ಞಾನವು ಈಗ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಭಾರತದ ಬಾಹ್ಯಾಕಾಶ ವಲಯದ ಕಾರ್ಯಕ್ರಮಗಳು ಕಳೆದ 11 ವರ್ಷಗಳಲ್ಲಿ ಹೇಗೆ ದಿಟ್ಟವಾಗಿವೆ, ಎಲ್ಲವನ್ನೂ ಒಳಗೊಳ್ಳುತ್ತಿವೆ ಮತ್ತು ಜನ-ಕೇಂದ್ರಿತವಾಗಿ ಮಾರ್ಪಟ್ಟಿದೆ ಎಂಬುದನ್ನು ಕೇಂದ್ರ ಸಚಿವರಾದ  @DrJitendraSingh ವಿವರಿಸಿದ್ದಾರೆ."

 

 

*****


(Release ID: 2137662)