ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜಾತಿಗಳ ಎಣಿಕೆಯೊಂದಿಗೆ ಎರಡು ಹಂತಗಳಲ್ಲಿ ಜನಸಂಖ್ಯಾ ಗಣತಿ-2027ಅನ್ನು ನಡೆಸಲಾಗುವುದು


ಜನಸಂಖ್ಯಾ ಗಣತಿ-2027ರ ಉಲ್ಲೇಖ ದಿನಾಂಕವು 2027ರ ಮಾರ್ಚ್ ತಿಂಗಳ ಮೊದಲ ದಿನದ 00:00 ಗಂಟೆಗಳು

ಲಡಾಖ್ ಕೇಂದ್ರಾಡಳಿತ ಪ್ರದೇಶ ಹಾಗು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಹಿಮಪಾತ ಪ್ರದೇಶಗಳಿಗೆ, ಉಲ್ಲೇಖ ದಿನಾಂಕವು 2026 ರ ಅಕ್ಟೋಬರ್ ತಿಂಗಳ  ಮೊದಲ ದಿನದ 00.00 ಗಂಟೆಗಳು

Posted On: 04 JUN 2025 5:30PM by PIB Bengaluru

ಜನಸಂಖ್ಯಾ ಗಣತಿ -2027ನ್ನು ಜಾತಿಗಣತಿಯೊಂದಿಗೆ ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜನಸಂಖ್ಯಾ ಗಣತಿ - 2027ರ ಉಲ್ಲೇಖ ದಿನಾಂಕವು 2027ರ ಮಾರ್ಚ್ ತಿಂಗಳ ಮೊದಲ ದಿನದ 00:00 ಗಂಟೆಗಳು ಆಗಿರುತ್ತದೆ. ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಹಿಮಪಾತ ಪ್ರದೇಶಗಳಿಗೆ, ಉಲ್ಲೇಖ ದಿನಾಂಕವು 2026ರ ಅಕ್ಟೋಬರ್,  ತಿಂಗಳ ಮೊದಲ ದಿನದ 00.00 ಗಂಟೆಗಳು ಆಗಿರುತ್ತದೆ. ಮೇಲಿನ ಉಲ್ಲೇಖ ದಿನಾಂಕಗಳೊಂದಿಗೆ ಜನಸಂಖ್ಯಾ ಗಣತಿ ನಡೆಸುವ ಉದ್ದೇಶಕ್ಕಾಗಿ ಅಧಿಸೂಚನೆಯನ್ನು 1948 ರ ಜನಗಣತಿ ಕಾಯ್ದೆಯ ವಿಭಾಗ 3ರ ನಿಬಂಧನೆಯ ಪ್ರಕಾರ, 16.06.2025 ರಂದು ತಾತ್ಕಾಲಿಕವಾಗಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು.

ಭಾರತದ ಜನಗಣತಿಯನ್ನು 1948ರ ಜನಗಣತಿ ಕಾಯ್ದೆ ಮತ್ತು 1990ರ ಜನಗಣತಿ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ನಡೆಸಲಾಗುತ್ತದೆ. ಭಾರತದ ಕೊನೆಯ ಜನಗಣತಿಯನ್ನು 2011ರಲ್ಲಿ ಎರಡು ಹಂತಗಳಲ್ಲಿ ನಡೆಸಲಾಯಿತು, ಅವುಗಳೆಂದರೆ i) ಹಂತ I - ಮನೆ ಪಟ್ಟಿ (HLO) (2010ರ ಏಪ್ರಿಲ್ 1 ರಿಂದ  ಸೆಪ್ಟೆಂಬರ್ 30 ರವರೆಗೆ) ಮತ್ತು (ii) ಹಂತ II - ಜನಸಂಖ್ಯಾ ಗಣತಿ (PE) (2011ರ ಫೆಬ್ರವರಿ 09ರಿಂದ ಫೆಬ್ರವರಿ 28 ರವರೆಗೆ) ಉಲ್ಲೇಖ ದಿನಾಂಕ - 2011ರ ಮಾರ್ಚ್ ಮೊದಲ ದಿನದ 00:00 ಗಂಟೆಗಳು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಹಿಮಪಾತದಿಂದ ಆವೃತವಾದ ಪ್ರದೇಶಗಳನ್ನು ಹೊರತುಪಡಿಸಲಾಗಿದ್ದು, ಇದನ್ನು ಉಲ್ಲೇಖ ದಿನಾಂಕ 2010 ರ ಅಕ್ಟೋಬರ್ ತಿಂಗಳ ಮೊದಲ ದಿನದ 00.00 ಗಂಟೆಯನ್ವಯ  2010ರ ಸೆಪ್ಟೆಂಬರ್ 11 ರಿಂದ 30ರವರೆಗೆ ನಡೆಸಲಾಯಿತು.

2021ರ ಜನಗಣತಿಯನ್ನು ಎರಡು ಹಂತಗಳಲ್ಲಿ ಇದೇ ರೀತಿ ನಡೆಸಲು ಪ್ರಸ್ತಾಪಿಸಲಾಗಿತ್ತು, ಮೊದಲ ಹಂತ 2020ರ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಮತ್ತು ಎರಡನೇ ಹಂತ 2021ರ ಫೆಬ್ರವರಿಯಲ್ಲಿ ನಡೆಯಬೇಕಿತ್ತು. 2021ರ ಜನಗಣತಿಯ ಮೊದಲ ಹಂತದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು  ಮತ್ತು ಏಪ್ರಿಲ್ 1, 2020 ರಿಂದ ಕೆಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಷೇತ್ರಕಾರ್ಯವನ್ನು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ದೇಶಾದ್ಯಂತ ಕೋವಿಡ್-19 (COVID-19) ಜಾಗತಿಕ ಸಾಂಕ್ರಾಮಿಕ ರೋಗ ಹರಡಿದ ಕಾರಣ, ಜನಗಣತಿ ಕಾರ್ಯವನ್ನು ಮುಂದೂಡಲಾಯಿತು.

 

*****


(Release ID: 2133966)