ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ ಶುಭಂ ದ್ವಿವೇದಿ ಅವರ ಕುಟುಂಬ ಸದಸ್ಯರ ಭೇಟಿ 

Posted On: 30 MAY 2025 9:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಶುಭಂ ದ್ವಿವೇದಿ ಅವರ ಕುಟುಂಬ ಸದಸ್ಯರನ್ನು ಕಾನ್ಪುರದಲ್ಲಿ ಇಂದು ಭೇಟಿಯಾದರು. "ಭಯೋತ್ಪಾದನೆ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿದ್ದಕ್ಕಾಗಿ ದ್ವಿವೇದಿ ಕುಟುಂಬದವರು ನಮ್ಮ ಧೀರ ಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ:

"ಪಹಲ್ಗಾಮ್‌ ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಕಾನ್ಪುರದವರಾದ ಶುಭಂ ದ್ವಿವೇದಿ ಅವರ ಕುಟುಂಬ ಸದಸ್ಯರನ್ನು ಇಂದು ಭೇಟಿಯಾದೆ. ಭಯೋತ್ಪಾದನೆಯ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿದ್ದಕ್ಕಾಗಿ ಅವರು ನಮ್ಮ ಶಕ್ತಿಸಾಲಿ ಸೈನ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಈ ಮನೋಭಾವವು ದೇಶವಾಸಿಗಳಲ್ಲಿ ಸ್ಫೂರ್ತಿ ತುಂಬಲಿದೆ."

 

 

*****


(Release ID: 2133000)