ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಎನ್‌ಸಿಆರ್‌ಬಿ ಮತ್ತು ಸೈಬರ್‌ಪೀಸ್ ಫೌಂಡೇಶನ್ ಸಹಯೋಗದೊಂದಿಗೆ ಕಾನೂನು ಜಾರಿಗಾಗಿ ಸಿಸಿಟಿವಿ ಪರಿಹಾರಗಳ ಕುರಿತು ಬಿಪಿಆರ್ &ಡಿಯಿಂದ  ರಾಷ್ಟ್ರೀಯ ಹ್ಯಾಕಥಾನ್


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಕೇಂದ್ರ ಸರ್ಕಾರವು ಸೈಬರ್-ಸುರಕ್ಷಿತ ಭಾರತವನ್ನು ನಿರ್ಮಿಸಲು ಬದ್ಧವಾಗಿದೆ

ಭಾರತೀಯ ಎಲ್.ಇ.ಎ. ಗಳ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ದೇಶೀಯ, ಸುರಕ್ಷಿತ, ಸ್ಕೇಲೆಬಲ್ ಮತ್ತು ವೆಚ್ಚ-ಪರಿಣಾಮಕಾರಿ ಸಿಸಿಟಿವಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಾವೀನ್ಯಕಾರರು, ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಹ್ಯಾಕಥಾನ್ ಗುರಿಯಾಗಿದೆ

ಬಿಪಿಆರ್ & ಡಿ ತನ್ನ ತಾಂತ್ರಿಕ ಪರಿಣತಿ ಮತ್ತು ಅನುಭವದೊಂದಿಗೆ ಸೈಬರ್ ಸುರಕ್ಷಿತ ಭಾರತವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ

ಹ್ಯಾಕಥಾನ್ನ ಗ್ರ್ಯಾಂಡ್ ಫಿನಾಲೆ 2025ರ ಜೂನ್ ಕೊನೆಯ ವಾರದಲ್ಲಿ ನಡೆಯಲಿದ್ದು, ಅಲ್ಲಿ ಅಗ್ರ ಮೂರು ನಮೂದುಗಳಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ

ಹ್ಯಾಕಥಾನ್‌ನಿಂದ ಸಾಧಿತವಾದ  ವಿಜೇತ ಪರಿಹಾರಗಳು ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ

Posted On: 22 MAY 2025 7:29PM by PIB Bengaluru

ಗೃಹ ವ್ಯವಹಾರಗಳ ಸಚಿವಾಲಯದ (ಎಂ.ಎಚ್.ಎ.) ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿ.ಪಿ.ಆರ್.& ಡಿ), ಎನ್.ಸಿ.ಆರ್.ಬಿ. ಮತ್ತು ಸೈಬರ್‌ಪೀಸ್ ಫೌಂಡೇಶನ್ ಸಹಯೋಗದೊಂದಿಗೆ ಕಾನೂನು ಜಾರಿಗಾಗಿ ಸಿಸಿಟಿವಿ ಪರಿಹಾರಗಳ ಕುರಿತು ರಾಷ್ಟ್ರವ್ಯಾಪಿ ಹ್ಯಾಕಥಾನ್ ಆಯೋಜಿಸುತ್ತಿದೆ. ಭಾರತೀಯ ಎಲ್.ಇ.ಎ. ಗಳ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಸ್ಥಳೀಯ, ಸುರಕ್ಷಿತ, ಸ್ಕೇಲೆಬಲ್ ಮತ್ತು ವೆಚ್ಚ-ಪರಿಣಾಮಕಾರಿ ಸಿಸಿಟಿವಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಾವೀನ್ಯಕಾರರು, ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಹ್ಯಾಕಥಾನ್ ಆಯೋಜಿಸಲಾಗುತ್ತಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಹಾಗು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಕೇಂದ್ರ ಸರ್ಕಾರವು ಸೈಬರ್-ಸುರಕ್ಷಿತ ಭಾರತವನ್ನು ನಿರ್ಮಾಣ ಮಾಡಲು ಬದ್ಧವಾಗಿದೆ.

ಬಿಪಿಆರ್ & ಡಿ ತನ್ನ ತಾಂತ್ರಿಕ ಪರಿಣತಿ ಮತ್ತು ಅನುಭವದೊಂದಿಗೆ ಸೈಬರ್-ಸುರಕ್ಷಿತ ಭಾರತವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸುವುದಲ್ಲದೆ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಮನಾರ್ಹವಾಗಿ ಕೊಡುಗೆ ನೀಡುವ ಸ್ವದೇಶಿ ತಾಂತ್ರಿಕ ಪರಿಹಾರಗಳನ್ನು ಉತ್ತೇಜಿಸುವುದು ಬಿಪಿಆರ್ & ಡಿ ಉದ್ದೇಶವಾಗಿದೆ.

ಹ್ಯಾಕಥಾನ್‌ನ ಕರ್ಟನ್  ರೈಸರ್ ಕಾರ್ಯಕ್ರಮವನ್ನು 2025ರ ಮೇ 9 ರಂದು ಬಿಪಿಆರ್ & ಡಿ ಮಹಾನಿರ್ದೇಶಕರು, ನಿರ್ದೇಶಕರು (ಎನ್‌ಸಿಆರ್‌ಬಿ); ಹೆಚ್ಚುವರಿ ಮಹಾನಿರ್ದೇಶಕರು (ಬಿಪಿಆರ್ & ಡಿ) ಮತ್ತು ಇನ್ಸ್‌ಪೆಕ್ಟರ್ ಜನರಲ್ (ಆಧುನೀಕರಣ), ಬಿಪಿಆರ್ & ಡಿ ಅವರ ಸಮ್ಮುಖದಲ್ಲಿ ನಡೆಸಲಾಯಿತು.

ಸಿಸಿಟಿವಿ ನಾವೀನ್ಯತೆಯ ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ನಾಲ್ಕು ಸಮಸ್ಯಾ ಹೇಳಿಕೆಗಳನ್ನು ಬಿಡುಗಡೆ ಮಾಡಲಾಗಿದೆ: ಸುರಕ್ಷಿತ ಮತ್ತು ದೇಶೀಯ ಸಿಸಿಟಿವಿ ಹಾರ್ಡ್‌ವೇರ್ ಮತ್ತು ವ್ಯವಸ್ಥೆಗಳ ಅಭಿವೃದ್ಧಿ, ಕೃತಕ ಬುದ್ಧಿಮತ್ತೆ ಮತ್ತು ಸ್ಮಾರ್ಟ್ ವೀಡಿಯೊ ವಿಶ್ಲೇಷಣೆಗಳ ಏಕೀಕರಣ, ಸಿಸಿಟಿವಿ ನೆಟ್‌ವರ್ಕ್‌ಗಳಲ್ಲಿ ಸೈಬರ್ ಭದ್ರತೆಯನ್ನು ಬಲಪಡಿಸುವುದು, ಕೈಗೆಟುಕುವ ಮತ್ತು ಪರಿಣಾಮಕಾರಿ ಕಣ್ಗಾವಲು ಪರಿಹಾರಗಳನ್ನು ವಿನ್ಯಾಸಗೊಳಿಸುವುದು.

ಹ್ಯಾಕಥಾನ್‌ನ ಗ್ರ್ಯಾಂಡ್ ಫಿನಾಲೆ 2025 ರ ಜೂನ್ ಕೊನೆಯ ವಾರದಲ್ಲಿ ನಡೆಯಲಿದ್ದು, ಅಲ್ಲಿ ಮೊದಲ ಮೂರು ನಮೂದುಗಳಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಇದಲ್ಲದೆ, ಅಸಾಧಾರಣ ಭರವಸೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸುವ ಆಯ್ದ ನಮೂದುಗಳಿಗೆ ಐದು ಸಮಾಧಾನಕರ ಬಹುಮಾನಗಳನ್ನು ಸಹ ನೀಡಲಾಗುತ್ತದೆ. ಅಗ್ರ ನಮೂದಿಗೆ ರೂ. 5 ಲಕ್ಷ ನಗದು ಬಹುಮಾನವನ್ನು ನೀಡಲಾಗುವುದು, ಎರಡನೇ ಮತ್ತು ಮೂರನೇ ನಮೂದುಗಳಿಗೆ ಕ್ರಮವಾಗಿ ರೂ. 3 ಲಕ್ಷ ಮತ್ತು ರೂ. 1 ಲಕ್ಷ ನೀಡಲಾಗುತ್ತದೆ. ಹ್ಯಾಕಥಾನ್ ಅನ್ನು ಎನ್.ಸಿ.ಆರ್.ಬಿ.  ಸಹಾಯದಿಂದ ನಡೆಸಲಾಗುತ್ತಿದೆ ಮತ್ತು ಸೈಬರ್‌ಪೀಸ್ ಫೌಂಡೇಶನ್ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದೆ. ಹ್ಯಾಕಥಾನ್‌ನಿಂದ ಸಾಧಿಸಲಾದ ವಿಜೇತ ಪರಿಹಾರಗಳು ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.

 

*****

 


(Release ID: 2130650)