ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಶ್ರೀ ಕೆ.ಕೈಲಾಶ್‌ನಾಥನ್ ಅವರೊಂದಿಗೆ ಪುದುಚೇರಿಯಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವನ್ನು ಪರಿಶೀಲಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತರಲಾದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಕ್ಕೆ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಉತ್ತಮ ಕೆಲಸ ಮಾಡಿದೆ
ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಶೀಘ್ರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಗೃಹ ಸಚಿವರು ಒತ್ತಿ ಹೇಳಿದರು
ಪುದುಚೇರಿಯಲ್ಲಿ, ಎಫ್‌ಐಆರ್‌ಅನ್ನು ತಮಿಳು ಭಾಷೆಯಲ್ಲಿ ಮಾತ್ರ ನೋಂದಾಯಿಸಬೇಕು ಮತ್ತು ಅದನ್ನು ಅಗತ್ಯವಿರುವವರಿಗೆ ಇತರ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಬೇಕು
ಡೇಟಾಬೇಸ್‌ನ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬಂಧಿತ ಅಪರಾಧಿಗಳ ಬೆರಳಚ್ಚುಗಳನ್ನು ಎನ್‌ಎಎಫ್‌ಐಎಸ್ ಅಡಿಯಲ್ಲಿ ದಾಖಲಿಸಬೇಕು
Posted On:
13 MAY 2025 6:30PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಶ್ರೀ ಕೆ.ಕೈಲಾಶ್‌ನಾಥನ್ ಅವರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ(ಯುಟಿ) ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವನ್ನು ನಿರ್ಣಯಿಸಲು ಪರಿಶೀಲನಾ ಸಭೆ ನಡೆಸಿದರು. ಪೊಲೀಸ್, ಕಾರಾಗೃಹಗಳು, ನ್ಯಾಯಾಲಯಗಳು, ಪ್ರಾಸಿಕ್ಯೂಷನ್ ಮತ್ತು ವಿಧಿವಿಜ್ಞಾನ ಸೇವೆಗಳಿಗೆ ಸಂಬಂಧಿಸಿದ ಪ್ರಮುಖ ನಿಬಂಧನೆಗಳ ಪ್ರಗತಿ ಮತ್ತು ಪ್ರಸ್ತುತ ಸ್ಥಿತಿಯ ಬಗ್ಗೆ ಚರ್ಚೆ ಕೇಂದ್ರೀಕರಿಸಿತು. ಸಭೆಯಲ್ಲಿ ಪುದುಚೇರಿಯ ಗೃಹ ಸಚಿವರು, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು, ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ (ಬಿಪಿಆರ್‌ಡಿ) ಮಹಾನಿರ್ದೇಶಕರು, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ನಿರ್ದೇಶಕರು ಮತ್ತು ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ಪುದುಚೇರಿ ಆಡಳಿತದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
RF34.JPG)
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತರಲಾದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದಲ್ಲಿ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು. ಹೊಸ ಕ್ರಿಮಿನಲ್ ಕಾನೂನುಗಳ ಶೀಘ್ರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಗೃಹ ಸಚಿವರು ಒತ್ತಿ ಹೇಳಿದರು. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಎಫ್‌ಐಆರ್‌ಗಳನ್ನು ತಮಿಳು ಭಾಷೆಯಲ್ಲಿಮಾತ್ರ ನೋಂದಾಯಿಸಬೇಕು ಮತ್ತು ಅಗತ್ಯವಿರುವವರಿಗೆ ಇತರ ಭಾಷೆಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಬಂಧಿತ ಎಲ್ಲಾ ಅಪರಾಧಗಳ ಬೆರಳಚ್ಚುಗಳನ್ನು ನಾಫಿಸ್ ಅಡಿಯಲ್ಲಿ ದಾಖಲಿಸಬೇಕು ಇದರಿಂದ ಡೇಟಾಬೇಸ್‌ಅನ್ನು ಅತ್ಯುತ್ತಮವಾಗಿ ಬಳಸಬಹುದು ಎಂದು ಅವರು ಹೇಳಿದರು. ಯಾವುದೇ ಸಂದರ್ಭದಲ್ಲಿ ಕಾನೂನು ಸಲಹೆ ನೀಡುವ ಹಕ್ಕು ಪ್ರಾಸಿಕ್ಯೂಷನ್ ನಿರ್ದೇಶಕರಿಗೆ (ಡಿಒಪಿ) ಮಾತ್ರ ಇರಬೇಕು ಎಂದು ಅವರು ಹೇಳಿದರು. ಇ-ಸಮನ್ಸ್, ಇ-ಸಾಕ್ಷ ರತೆ, ನ್ಯಾಯ ಶ್ರುತಿ ಮತ್ತು ವಿಧಿವಿಜ್ಞಾನದಂತಹ ನಿಬಂಧನೆಗಳನ್ನು ಆದಷ್ಟು ಬೇಗ ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ಗೃಹ ಸಚಿವರು ಹೇಳಿದರು.
4PGO.JPG)
ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ವಾರಕ್ಕೊಮ್ಮೆ, ಗೃಹ ಸಚಿವರು ಪ್ರತಿ 15 ದಿನಗಳಿಗೊಮ್ಮೆ ಮತ್ತು ಲೆಫ್ಟಿನೆಂಟ್ ಗವರ್ನರ್ ತಿಂಗಳಿಗೊಮ್ಮೆ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು.

*****
(Release ID: 2128961)