ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ ಬಜಾರ್: ಜಾಗತಿಕ ಸೃಜನಶೀಲ ಸಹಯೋಗದಲ್ಲಿ ಪ್ರಥಮ ಅದ್ಭುತ
ಭಾರತದಿಂದ ವಿಶ್ವಕ್ಕೆ: ಪ್ರಮುಖ ಜಾಗತಿಕ ಮನರಂಜನಾ ಮೈತ್ರಿಗಳನ್ನು ಹುಟ್ಟುಹಾಕಿದ ವೇವ್ಸ್ ಬಜಾರ್, 800 ಕೋಟಿ ರೂ.ಗಿಂತ ಹೆಚ್ಚಿನ ವ್ಯವಹಾರ ವಹಿವಾಟುಗಳ ದಾಖಲೆ
Posted On:
03 MAY 2025 8:48PM
|
Location:
PIB Bengaluru
ಮುಂಬೈಯಲ್ಲಿ 2025ರ ಮೇ 1 ರಿಂದ 3 ರವರೆಗೆ ನಡೆದ ವೇವ್ಸ್ ಬಜಾರ್ ನ ಉದ್ಘಾಟನಾ ಆವೃತ್ತಿಯು ಅದ್ಭುತ ಯಶಸ್ಸಿನೊಂದಿಗೆ ಸಮಾರೋಪಗೊಂಡಿತು, ಸೃಜನಶೀಲ ಉದ್ಯಮಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಸಹಯೋಗಕ್ಕೆ ಪ್ರಮುಖ ವೇದಿಕೆಯಾಗಿ ಅದು ತನ್ನನ್ನು ತಾನು ಸ್ಥಾಪಿಸಿಕೊಂಡಿತು. ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅಡಿಯಲ್ಲಿ ಆಯೋಜಿಸಲಾದ ಈ ಮಾರುಕಟ್ಟೆಯು ಚಲನಚಿತ್ರ, ಸಂಗೀತ, ರೇಡಿಯೋ, ವಿಎಫ್ಎಕ್ಸ್ ಮತ್ತು ಅನಿಮೇಷನ್ ಕ್ಷೇತ್ರಗಳಲ್ಲಿ 800 ಕೋಟಿ ರೂ.ಗಿಂತ ಹೆಚ್ಚಿನ ವ್ಯವಹಾರ ವಹಿವಾಟುಗಳನ್ನು ದಾಖಲಿಸಿದೆ. ವ್ಯವಹಾರ ಒಪ್ಪಂದಗಳ ತಯಾರಿ ಇನ್ನೂ ನಡೆಯುತ್ತಿರುವುದರಿಂದ, ಒಟ್ಟು ಮೌಲ್ಯವು ಕೆಲವೇ ದಿನಗಳಲ್ಲಿ 1000 ಕೋಟಿ ರೂ.ಗಳನ್ನು ಮೀರುವ ನಿರೀಕ್ಷೆಯಿದೆ.
ಪ್ರಮುಖ ಅಂಶಗಳು
ಬಜಾರ್ ನ ಪ್ರಮುಖ ಅಂಶವೆಂದರೆ ಖರೀದಿದಾರ-ಮಾರಾಟಗಾರ ಮಾರುಕಟ್ಟೆ, ಇದು 3,000 ಕ್ಕೂ ಹೆಚ್ಚು ವ್ಯವಹಾರಸ್ಥರು ಮತ್ತು ವ್ಯವಹಾರಸ್ಥರ ನಡುವಿನ -ಬಿ 2 ಬಿ ಸಭೆಗಳಿಗೆ ಸಾಕ್ಷಿಯಾಯಿತು, ಇದು 500 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸಿತು, ಮುಂದಿನ ದಿನಗಳಲ್ಲಿ ಹೆಚ್ಚುವರಿ ವ್ಯವಹಾರಗಳು ಅಂತಿಮಗೊಳ್ಳುವ ನಿರೀಕ್ಷೆಯಿದೆ. 80 ಆಸನಗಳ ಸ್ಥಳದಲ್ಲಿ ಚಲನಚಿತ್ರಗಳ ಕ್ಯುರೇಟೆಡ್ ಪ್ರದರ್ಶನಗಳು ಆಯ್ದ ಚಲನಚಿತ್ರಗಳಿಗೆ ಉತ್ಸಾಹಭರಿತ ಪ್ರತಿಕ್ರಿಯೆಗಳು ಮತ್ತು ಮೆಚ್ಚುಗೆಯನ್ನು ಗಳಿಸಿದವು. ಉದಯೋನ್ಮುಖ ಸೃಜನಶೀಲ ವಿಷಯ ತಯಾರಕರು ತಮ್ಮ ಐಪಿಗಳನ್ನು ಖರೀದಿದಾರರು ಮತ್ತು ಸಹಯೋಗಗಳ ಜಾಗತಿಕ ಜಾಲಕ್ಕೆ ಹೊಂದಿಸಲು ಬಜಾರ್ ಸಹಾಯ ಮಾಡಿತು, ಅದು ಗಮನಾರ್ಹ ಆಸಕ್ತಿಯನ್ನು ಹುಟ್ಟುಹಾಕಿತು ಮತ್ತು ಹೊಸ ಪಾಲುದಾರಿಕೆಯನ್ನು ಬೆಳೆಸಿತು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತರರಾಷ್ಟ್ರೀಯ ಸಹಯೋಗದ ಪ್ರಮುಖ ಸಾಧನೆಯಲ್ಲಿ, ಪೆಟ್ರಿನಾ ಡಿ'ರೊಜಾರಿಯೊ ನೇತೃತ್ವದ ಫಿಲ್ಮ್ ಇಂಡಿಯಾ ಸ್ಕ್ರೀನ್ ಕಲೆಕ್ಟಿವ್ ಮತ್ತು ಸ್ಕ್ರೀನ್ ಕ್ಯಾಂಟರ್ಬರಿ ಎನ್ಝಡ್, ವೇವ್ಸ್ ನಿಂದ ಪ್ರೇರಿತವಾಗಿ, ನ್ಯೂಜಿಲೆಂಡ್ ನಲ್ಲಿ ಪ್ರಪ್ರಥಮ ಭಾರತೀಯ ಚಲನಚಿತ್ರೋತ್ಸವವನ್ನು ಪ್ರಾರಂಭಿಸಲು ಸಹಯೋಗದ ಪ್ರಸ್ತಾಪವನ್ನು ಘೋಷಿಸಿತು, ಇದು ಉಭಯ ದೇಶಗಳ ನಡುವಿನ ಪ್ರವಾಸೋದ್ಯಮ, ಸಾಂಸ್ಕೃತಿಕ ವಿನಿಮಯ ಮತ್ತು ಸಹ-ನಿರ್ಮಾಣ ಸಂಬಂಧಗಳನ್ನು ಆಳಗೊಳಿಸುವ ಗುರಿಯನ್ನು ಹೊಂದಿದೆ.
ಭಾರತ-ರಷ್ಯಾ ಸಹಯೋಗಕ್ಕೆ ದಾರಿ ಮಾಡಿಕೊಡುವ ಸಲುವಾಗಿ, ಓನ್ಲಿ ಮಚ್ ಲೌಡರ್ (ಒಎಂಎಲ್) ಸಿಇಒ ತುಷಾರ್ ಕುಮಾರ್ ಮತ್ತು ಗ್ಯಾಜ್ ಪ್ರೊಮ್ ಮೀಡಿಯಾ ಸಿಇಒ ಅಲೆಕ್ಸಾಂಡರ್ ಝರೋವ್ ಅವರು ರಷ್ಯಾ ಮತ್ತು ಭಾರತದಲ್ಲಿ ಸಾಂಸ್ಕೃತಿಕ ಉತ್ಸವಗಳಲ್ಲಿ ಸಹಯೋಗ ಮಾಡಲು ಮತ್ತು ಹಾಸ್ಯ ಹಾಗು ಸಂಗೀತ ಕಾರ್ಯಕ್ರಮಗಳನ್ನು ಸಹ-ನಿರ್ಮಾಣ ಮಾಡಲು ಸಂಭಾವ್ಯ ತಿಳಿವಳಿಕೆ ಒಪ್ಪಂದದ ಬಗ್ಗೆ ಆರಂಭಿಕ ಹಂತದ ಮಾತುಕತೆಗಳನ್ನು ಪ್ರಾರಂಭಿಸಿದ್ದಾರೆ.
ಪ್ರಮುಖ ಒಪ್ಪಂದ ಘೋಷಣೆಗಳು
ಪ್ರೀಮಿಯಂ ಕೊರಿಯನ್ ವಿಷಯಸಾಮಗ್ರಿಗಳನ್ನು ಜಾಗತಿಕವಾಗಿ ವಿತರಿಸಲು ಕಾರ್ಯತಂತ್ರದ ಸಹಭಾಗಿತ್ವವನ್ನು ಅನಾವರಣಗೊಳಿಸಿದ್ದರಿಂದ ಪ್ರೈಮ್ ವಿಡಿಯೋ ಮತ್ತು ಸಿಜೆ ಇಎನ್ಎಂ ಬಹು-ವರ್ಷದ ಸಹಯೋಗದ ಘೋಷಣೆಯು ಬಜಾರಿನ ಪ್ರಮುಖ ಹೈಲೈಟ್ ಆಗಿತ್ತು. “ಹೆಡ್ ಓವರ್ ಹೀಲ್ಸ್” ನೊಂದಿಗೆ ಜೂನ್ 2025 ರಲ್ಲಿ ಇದು ಪ್ರಾರಂಭವಾಗುವ ನಿರೀಕ್ಷೆಯಿದ್ದು, ಈ ಒಪ್ಪಂದವು 240 ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟ್ರೀಮಿಂಗ್ ಅನ್ನು ಒಳಗೊಂಡಿದೆ, ಇದರಲ್ಲಿ 28 ಉಪಶೀರ್ಷಿಕೆ ಭಾಷೆಗಳು ಮತ್ತು 11 ಡಬ್ಬಿಂಗ್ ಆವೃತ್ತಿಗಳು ಸೇರಿವೆ. ಈ ಉಪಕ್ರಮವು ಜಾಗತಿಕ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಏಷ್ಯಾದ ಬೆಳೆಯುತ್ತಿರುವ ಸೃಜನಶೀಲ ಉಪಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಬಜಾರ್ ಗೆ ಮೌಲ್ಯವನ್ನು ಸೇರಿಸಿದ ಮತ್ತೊಂದು ಉಪಕ್ರಮವೆಂದರೆ ದೇವಿ ಚೌಧುರಾಣಿ ಚಿತ್ರದ ಘೋಷಣೆ, ಇದು ಭಾರತದ ಮೊದಲ ಅಧಿಕೃತ ಇಂಡೋ-ಯುಕೆ ಸಹ-ನಿರ್ಮಾಣ. ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಎನ್ಎಫ್ಡಿಸಿ, ಎಫ್ಎಫ್ಒ ಮತ್ತು ಇನ್ವೆಸ್ಟ್ ಇಂಡಿಯಾ ಬೆಂಬಲದೊಂದಿಗೆ ಚಿತ್ರದ ಪ್ರಾಥಮಿಕ-ಟೀಸರ್ ಅನ್ನು ಬಜಾರಿನಲ್ಲಿ ಅನಾವರಣಗೊಳಿಸಲಾಯಿತು. ಸನ್ಯಾಸಿ-ಫಕೀರ್ ದಂಗೆಯ ಸಮಯದಲ್ಲಿ ರಚಿಸಲಾದ ಐತಿಹಾಸಿಕ ಕಥೆಯಲ್ಲಿ ಪ್ರೊಸೆನ್ ಜಿತ್ ಚಟರ್ಜಿ ಮತ್ತು ಸ್ರಬಂತಿ ಚಟರ್ಜಿ ನಟಿಸಿದ್ದಾರೆ, ಪಂಡಿತ್ ಬಿಕ್ರಮ್ ಘೋಷ್ ಸಂಗೀತ ನೀಡಿದ್ದಾರೆ.
ವೇವ್ಸ್ ಬಜಾರ್ ನ ಉದ್ದೇಶವನ್ನು ಸಮರ್ಥಿಸುವ ಮತ್ತೊಂದು ಉಪಕ್ರಮವೆಂದರೆ ಉಲ್ಲಂಘನೆ (ವಯೋಲೇಟೆಡ್) ಎಂಬ ಚಲನಚಿತ್ರದ ಪ್ರಕಟಣೆ. ಬೋಲ್ಡ್ ಸೈಕಲಾಜಿಕಲ್ ಥ್ರಿಲ್ಲರ್ ಆಗಿರುವ ಈ ಚಿತ್ರ, ಡಿಂಪಲ್ ಡುಗರ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಬಲವಾದ ಮಹಿಳಾ ನೇತೃತ್ವದ ನಿರೂಪಣೆಗೆ ಹೆಸರುವಾಸಿಯಾದ ಈ ಚಿತ್ರವನ್ನು ಯುಕೆಯ ಫ್ಯೂಷನ್ ಫ್ಲಿಕ್ಸ್ ಮತ್ತು ಜೆವಿಡಿ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿವೆ, ಇದು ದುಗರ್ ಅವರ ವಾಣಿಜ್ಯದಿಂದ ಚಲನಚಿತ್ರ ನಿರ್ಮಾಣದತ್ತ ಪರಿವರ್ತನೆಯನ್ನು ಸೂಚಿಸುತ್ತದೆ.
ತನ್ನ ಪ್ರಭಾವಶಾಲಿ ಪ್ರಥಮದೊಂದಿಗೆ, ವೇವ್ಸ್ ಬಜಾರ್ ಸೃಜನಶೀಲ ಸಹಯೋಗದ ಜಾಗತಿಕ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ ಮಾತ್ರವಲ್ಲದೆ ಗಡಿಯಾಚೆಗಿನ ಕಥೆ ಹೇಳುವಿಕೆ ಮತ್ತು ಉದ್ಯಮ ರೂಪಾಂತರದ ಹೊಸ ಯುಗಕ್ಕೆ ವೇದಿಕೆಯನ್ನು ಕಲ್ಪಿಸಿದೆ.
ನೈಜ ಸಮಯದ ಅಧಿಕೃತ ಮಾಹಿತಿಗಾಗಿ, ದಯವಿಟ್ಟು ನಮ್ಮನ್ನು ಅನುಸರಿಸಿ:
On X :
https://x.com/WAVESummitIndia
https://x.com/MIB_India
https://x.com/PIB_India
https://x.com/PIBmumbai
On Instagram:
https://www.instagram.com/wavesummitindia
https://www.instagram.com/mib_india
https://www.instagram.com/pibindia
*****
Release ID:
(Release ID: 2126940)
| Visitor Counter:
8