ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಎಂ &ಇ ನವೋದ್ಯಮಗಳ ಹೂಡಿಕೆ ಸಾಮರ್ಥ್ಯವನ್ನು ಎತ್ತಿ ತೋರಿಸಿದ ವೇವೆಕ್ಸ್ 2025 ; ಎಂ&ಇ ಗಾಗಿ ಪ್ರತ್ಯೇಕವಾದ ಏಂಜೆಲ್ ನೆಟ್ ವರ್ಕ್ ರಚನೆ ನಿಟ್ಟಿನಲ್ಲಿ ಕಾರ್ಯೋನ್ಮುಖ
ವೇವ್ಸ್ ನಲ್ಲಿ 30 ನವೋದ್ಯಮಗಳಿಗೆ ಮುಖಾಮುಖಿ ಪಿಚ್ಚಿಂಗ್ ಅವಕಾಶ
Posted On:
04 MAY 2025 2:15PM
|
Location:
PIB Bengaluru
ಮುಂಬೈಯಲ್ಲಿ ನಡೆಯುತ್ತಿರುವ ವಿಶ್ವ ಆಡಿಯೊ / ಶ್ರವ್ಯ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅಡಿಯಲ್ಲಿ ಆಯೋಜನೆಯಾಗಿರುವ ಪ್ರಮುಖ ನವೋದ್ಯಮ ಉಪಕ್ರಮವಾದ ವೇವೆಕ್ಸ್ 2025 ನಾವೀನ್ಯತೆ, ಉದ್ಯಮಶೀಲತೆ ಮತ್ತು ಹೂಡಿಕೆಗೆ ಸಂಬಂಧಿಸಿದ ಭರವಸೆಯ ಕೇಂದ್ರಬಿಂದುವಾಯಿತು .
ವಾರ್ತಾ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಜಂಟಿ ನಿರ್ದೇಶಕರಾದ ಶ್ರೀ ಅಶುತೋಷ್ ಮೊಹ್ಲೆ ಅವರು, ಎಂ & ಇ ಅವಕಾಶದಲ್ಲಿ ನವೋದ್ಯಮಗಳನ್ನು ಪೋಷಿಸುವ ಮತ್ತು ಆಲೋಚನೆಗಳನ್ನು ಅಳೆಯಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸುವ ಚಿಂತನೆಯನ್ನು ಒತ್ತಿಹೇಳುತ್ತಾ, ವೇವೆಕ್ಸ್ ನ ಸಂಕ್ಷಿಪ್ತ ಅವಲೋಕನವನ್ನು ಮಾಡಿದರು.
ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದ (ಐಎಂಎಐ) ಮುಖ್ಯ ಬೆಳವಣಿಗೆ ಅಧಿಕಾರಿ ಸಂದೀಪ್ ಜಿಂಗ್ರಾನ್ ಅವರು ಈ ಉಪಕ್ರಮಕ್ಕೆ ಭರವಸೆಯ/ವಿಶ್ವಾಸದ ಪ್ರತಿಕ್ರಿಯೆಯೊಂದಿಗೆ ತೃಪ್ತಿ ವ್ಯಕ್ತಪಡಿಸಿದರು. "ನಾವು ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಅವುಗಳಲ್ಲಿ ಮೂವತ್ತು ನೇರವಾಗಿ ಹೂಡಿಕೆದಾರರಿಗೆ ತಲುಪಿವೆ ಮತ್ತು ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಈಗಾಗಲೇ ಸಕ್ರಿಯ ಮಾತುಕತೆಯಲ್ಲಿವೆ" ಎಂದು ಅವರು ಬಹಿರಂಗಪಡಿಸಿದರು, ಎಂ &ಇ ನವೋದ್ಯಮಗಳಿಗೆ ಕೇಂದ್ರೀಕೃತ ಗಮನ ನೀಡಲು ಇಂತಹ ಪ್ರಯತ್ನಗಳು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ಹೂಡಿಕೆದಾರರ ಧ್ವನಿಗಳು ಉಪಕ್ರಮದ ಪರಿವರ್ತಕ ಸಾಮರ್ಥ್ಯಕ್ಕೆ ಮತ್ತಷ್ಟು ದೃಷ್ಟಿಕೋನವನ್ನು ಸೇರಿಸಿದವು. ವಾರ್ಮಪ್ ವೆಂಚರ್ಸ್ ನ ವೆನ್ಯೂ ಪಾರ್ಟ್ನರ್ ಶ್ರೀ ರಾಜೇಶ್ ಜೋಶಿ ಅವರು ನವೋದ್ಯಮ ಸಂಸ್ಥಾಪಕರಿಂದ ಹೂಡಿಕೆದಾರರಾಗುವವರೆಗಿನ ತಮ್ಮ ವೈಯಕ್ತಿಕ ಪ್ರಯಾಣವನ್ನು ಪ್ರತಿಬಿಂಬಿಸಿದರು. "ಜೀವನವು ವೃತ್ತವನ್ನು ಪೂರ್ಣಗೊಳಿಸಿದೆ.... ನಾವು ಈಗ 11 ನವೋದ್ಯಮಗಳೊಂದಿಗೆ ಮಾತನಾಡುತ್ತಿದ್ದೇವೆ" ಎಂದು ಅವರು ಹೇಳಿದರು.

ಸಿಎಬಿಐಎಲ್ ನ ಸ್ಥಾಪಕರಾದ ಶ್ರೀ ಮುಸ್ತಫಾ ಹಾರ್ನೆಸ್ ವಾಲಾ ಅವರು ಈ ಕ್ಷೇತ್ರಕ್ಕೆ ಹಣಕಾಸು ಒದಗಿಸುವಲ್ಲಿ ಸಾಂಪ್ರದಾಯಿಕವಾಗಿರುವ ಹಿಂಜರಿಕೆಯನ್ನು ಎತ್ತಿ ತೋರಿಸಿದರು. "ಅನೇಕರು ಮಾಧ್ಯಮ ಮತ್ತು ಮನರಂಜನೆಯಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ವೇವ್ಸ್ ಆ ಮನಸ್ಥಿತಿಯನ್ನು ಬದಲಾಯಿಸುತ್ತಿದೆ. ನಾವು ಈಗ ಎಂ &ಇಗಾಗಿ ಮೀಸಲಾದ ಏಂಜೆಲ್ ನೆಟ್ವರ್ಕ್ (ಹೂಡಿಕೆ ಜೊತೆ ಮಾರ್ಗದರ್ಶನವನ್ನೂ ನೀಡುವ) ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಅಂತರರಾಷ್ಟ್ರೀಯ ಸರ್ಕಾರಗಳೊಂದಿಗೆ ಸಹಯೋಗದ ಮೂಲಕ ಜಾಗತಿಕ ಸಂಪರ್ಕಗಳನ್ನು ಅನ್ವೇಷಿಸುತ್ತಿದ್ದೇವೆ” ಎಂದವರು ಹೇಳಿದರು. .
ತಂಡಕ್ಕೆ ಮಾಧ್ಯಮಗಳಿಂದ ಪ್ರಶ್ನೆಗಳು ಬಂದವು. ಅವು ವಿಕಸನಗೊಳ್ಳುತ್ತಿರುವ ನವೋದ್ಯಮ ಭೂದೃಶ್ಯದ ಒಳನೋಟವನ್ನು ನೀಡಿದವು. ಹೂಡಿಕೆದಾರರು ಅರ್ಥಪೂರ್ಣ ವಿಷಯಸಾಮಗ್ರಿಗಳನ್ನು ಹೇಗೆ ಪ್ರತ್ಯೇಕಿಸುತ್ತಾರೆ ಎಂದು ಕೇಳಿದಾಗ, ಸೈಬರ್ ಬೆದರಿಕೆ ಮತ್ತು ಲೈಂಗಿಕ ವಿಷಯವನ್ನು ತಪ್ಪಿಸಲು ಸಹಾಯ ಮಾಡುವ ವೇದಿಕೆಯನ್ನು ರಚಿಸುತ್ತಿರುವ ನವೋದ್ಯಮ ಅಪ್ಲಿಕೇಶನ್ "ಗಿಗ್ಗಲ್" ಉದಾಹರಣೆಯನ್ನು ರಾಜೇಶ್ ಅವರು ಉಲ್ಲೇಖಿಸಿದರು.
ಲಿಂಗ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ, ಮಹಿಳಾ ಉದ್ಯಮಿಗಳ ಸೀಮಿತ ಭಾಗವಹಿಸುವಿಕೆಯನ್ನು ಸಂದೀಪ್ ಒಪ್ಪಿಕೊಂಡರು. "ನಾವು ಉತ್ತಮವಾಗಿ ಕಾರ್ಯನಿರ್ವಹಿಸಲು ಬದ್ಧರಾಗಿದ್ದೇವೆ. ಮುಂದಿನ ಆವೃತ್ತಿಗಳಲ್ಲಿ ಹೆಚ್ಚಿನ ಮಹಿಳಾ ಉದ್ಯಮಿಗಳು ಬರುವುದನ್ನು ನಾವು ನೋಡುತ್ತೇವೆ" ಎಂದು ಅವರು ಹೇಳಿದರು.
ಕಾರ್ಯಕ್ರಮದ ಸ್ವರೂಪವನ್ನು ವಿಸ್ತರಿಸುತ್ತಾ, ಸಂದೀಪ್ ಜಿಂಗ್ರಾನ್ ಅವರು 2 ದಿನಗಳಲ್ಲಿ 30 ನವೋದ್ಯಮಗಳಿಗೆ ಮುಖಾಮುಖಿ ಪಿಚ್ಚಿಂಗ್ ಅವಕಾಶಗಳನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು. ವಿಷಯ ಸಾಮಗ್ರಿಗಳನ್ನು ತಯಾರಿಸುವ ಸೃಜನಶೀಲರಿಗೆ ಹಣಗಳಿಸುವ ತಂತ್ರಗಳ ಅಗತ್ಯವನ್ನು ಮುಸ್ತಫಾ ಹಾರ್ನೆಸ್ ವಾಲಾ ಒತ್ತಿಹೇಳಿದರು, ವೇವ್ ನಂತಹ ಉಪಕ್ರಮಗಳು ಆ ಅಂತರವನ್ನು ಸರಿಪಡಿಸಲು ಸಹಾಯ ಮಾಡುತ್ತವೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ವೇವೆಕ್ಸ್ 2025 ಎಂ &ಇ ವಲಯದ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಗೇಮ್ ಚೇಂಜರ್ ಆಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿದೆ, ಹಳೆಯ ಗಡಿಗಳನ್ನು ಮುರಿಯುತ್ತಿದೆ ಮತ್ತು ಭಾರತದಾದ್ಯಂತ ನಾವೀನ್ಯಕಾರರಿಗೆ/ಅನ್ವೇಷಕರಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ.
For official updates on realtime, please follow us:
On X :
https://x.com/WAVESummitIndia
https://x.com/MIB_India
https://x.com/PIB_India
https://x.com/PIBmumbai
On Instagram:
https://www.instagram.com/wavesummitindia
https://www.instagram.com/mib_india
https://www.instagram.com/pibindia
*****
Release ID:
(Release ID: 2126886)
| Visitor Counter:
12