WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

"ಲೆಜೆಂಡ್ಸ್ & ಲೆಗಸಿಸ್: ದ ಸ್ಟೋರೀಸ್ ದಟ್ ಶೇಪ್ಡ್ ಇಂಡಿಯಾಸ್ ಸೋಲ್” ಚರ್ಚೆಯೊಂದಿಗೆ ವೇವ್ಸ್ 2025 ಆರಂಭ  


"ವೇವ್ಸ್  ಭಾರತ ಸರ್ಕಾರದ ಸುಂದರವಾದ ಉಪಕ್ರಮವಾಗಿದೆ. ಅದರ ಭಾಗವಾಗಲು ನನಗೆ ಸಂತೋಷವಾಗಿದೆ” ಹೇಮಾ ಮಾಲಿನಿ

"ನಾನು ಕಲೆ ಮತ್ತು ವಾಣಿಜ್ಯ ಸಿನೆಮಾಗಳ ನಡುವೆ ವ್ಯತ್ಯಾಸವನ್ನು ಮಾಡುವುದಿಲ್ಲ –ಇದು  ಕಥೆ ಹೇಳುವಿಕೆಯನ್ನು ಒಳಗೊಂಡಿದೆ ಮತ್ತು ಅದು ಜನರನ್ನು ತಟ್ಟುತ್ತದೆ”  ಮೋಹನ್ ಲಾಲ್

"ಬಾಲ್ಯದಿಂದಲೂ ನಟನೆಗೆ ನನ್ನ ಮೊದಲ ಪ್ರೀತಿ ಸಲ್ಲುತ್ತಿತ್ತು” ಚಿರಂಜೀವಿ

 Posted On: 01 MAY 2025 4:32PM |   Location: PIB Bengaluru

ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಮುಂಬೈನ ಪ್ರಸಿದ್ಧ ಜಿಯೋ ವರ್ಲ್ಡ್ ಸೆಂಟರಿನಲ್ಲಿ ಭವ್ಯ ರೀತಿಯಲ್ಲಿ ಪ್ರಾರಂಭವಾಯಿತು, "ಲೆಜೆಂಡ್ಸ್ & ಲೆಗಸಿಸ್: ದ ಸ್ಟೋರೀಸ್ ದಟ್ ಶೇಪ್ಡ್ ಇಂಡಿಯಾಸ್ ಸೋಲ್” (ದಂತಕಥೆಗಳು ಮತ್ತು ಪರಂಪರೆಗಳು: ಭಾರತದ ಆತ್ಮವನ್ನು ರೂಪಿಸಿದ ಕಥೆಗಳು") ಎಂಬ ಶೀರ್ಷಿಕೆಯ ಬಹಳ ಗಹನವಾದ  ಪ್ಯಾನಲ್ ಚರ್ಚೆಯೊಂದಿಗೆ ಇದು ಆರಂಭಗೊಂಡಿತು. ಈ ಅಧಿವೇಶನವು ಕಥೆ ಹೇಳುವಿಕೆ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಕರ್ಷಕ ಚರ್ಚೆಯಲ್ಲಿ ಭಾರತದ ಕೆಲವು ಗೌರವಾನ್ವಿತ ಸಿನಿಮೀಯ ಐಕಾನ್ ಗಳನ್ನು ಒಟ್ಟುಗೂಡಿಸಿತು.

ಉದ್ಘಾಟನಾ ಪ್ಯಾನಲ್ ನಲ್ಲಿ  ಜನಪ್ರಿಯತೆ ಪಡೆದ  ಗಣ್ಯರಾದ ಹೇಮಾ ಮಾಲಿನಿ, ಮೋಹನ್ ಲಾಲ್ ಮತ್ತು ಚಿರಂಜೀವಿ ಇದ್ದರು ಮತ್ತು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡ್ರೀಮ್ ಗರ್ಲ್ ಹೇಮಾ ಮಾಲಿನಿ, ಈ ಉಪಕ್ರಮದ ಬಗ್ಗೆ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು, "ಇದು ಭಾರತ ಸರ್ಕಾರದ ಸುಂದರವಾದ ಉಪಕ್ರಮವಾಗಿದೆ. ಅದರ ಭಾಗವಾಗಲು ನನಗೆ ಸಂತೋಷವಾಗಿದೆ. ಪ್ರಧಾನಮಂತ್ರಿ ಮೋದಿಯವರಿಗೆ ಧನ್ಯವಾದಗಳು - ಅವರ ದೃಷ್ಟಿಕೋನ/ಚಿಂತನೆ  ಮತ್ತು ನಾಯಕತ್ವವು ವೇವ್ಸ್ ಅನ್ನು ಸೃಜನಶೀಲ ವ್ಯಕ್ತಿಗಳು  ಮತ್ತು ನಾವೀನ್ಯಕಾರರಿಗೆ ಗಮನಾರ್ಹ ವೇದಿಕೆಯನ್ನಾಗಿ ಮಾಡಿದೆ” ಎಂದವರು ಹೇಳಿದರು. 

ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ಅವರು ಸಿನೆಮಾದ ವಿಕಸನದ ಸ್ವರೂಪದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು. ಕಲಾ ಚಲನಚಿತ್ರಗಳು ಮನರಂಜನಾ ಮೌಲ್ಯವನ್ನು ಹೊಂದಿರುವುದರಿಂದ ಕಲಾ ಸಿನೆಮಾ ಮತ್ತು ಮನರಂಜನಾ ಸಿನೆಮಾಗಳ ನಡುವಿನ ರೇಖೆ ತುಂಬಾ ತೆಳುವಾಗಿದೆ ಎಂದು ಅವರು ಹೇಳಿದರು. "ನಾನು ಕಲೆ ಮತ್ತು ವಾಣಿಜ್ಯ ಸಿನೆಮಾಗಳ ನಡುವೆ ವ್ಯತ್ಯಾಸವನ್ನು ಮಾಡುವುದಿಲ್ಲ –ಇದು  ಕಥೆ ಹೇಳುವಿಕೆಯನ್ನು ಒಳಗೊಂಡಿದೆ ಮತ್ತು ಅದು ಜನರನ್ನು ತಟ್ಟುತ್ತದೆ”  ಎಂದು ಈ ಶ್ರೇಷ್ಠ ನಟ ಹೇಳಿದರು.

ಹಿರಿಯ ನಟ ಚಿರಂಜೀವಿ ಅವರು ಅಚಲ ಉತ್ಸಾಹ ಮತ್ತು ಶ್ರೇಷ್ಠತೆಯ ನಿರಂತರ ಅನ್ವೇಷಣೆಯಿಂದ ಗುರುತಿಸಲ್ಪಟ್ಟ ತಮ್ಮ ಸಿನಿಮೀಯ ಪ್ರಯಾಣದ ಬಗ್ಗೆ ಹೃದಯ ತಟ್ಟುವಂತೆ  ವಿವರಗಳನ್ನು ಹಂಚಿಕೊಂಡರು. ತಮ್ಮ ಆರಂಭಿಕ ಆಕಾಂಕ್ಷೆಗಳನ್ನು ನೆನಪಿಸಿಕೊಂಡ ಅವರು, "ಬಾಲ್ಯದಿಂದಲೂ ನಟನೆಗೆ ನನ್ನ ಮೊದಲ ಪ್ರೀತಿ ಸಲ್ಲುತ್ತಿತ್ತು. ನಾನು ಸದಾ ಗೂಳಿಯ ಕಣ್ಣನ್ನು ಹೊಡೆಯುವ ಅಂದರೆ ಅಪೇಕ್ಷಿತ ಫಲಿತಾಂಶವನ್ನು ನಿಖರತೆಯಿಂದ ಸಾಧಿಸುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟಿದ್ದೆ. ಉತ್ತಮ ನಟನಾಗಲು ನಾನು ಯಾವ ವಿಶಿಷ್ಟ ಅಂಶವನ್ನು ತರಬಹುದು ಎಂದು ನಾನು ನಿರಂತರವಾಗಿ ನನ್ನನ್ನು ಕೇಳಿಕೊಳ್ಳುತ್ತಿದ್ದೆ” ಎಂದರು.

ಸತ್ಯಾಸತ್ಯತೆಗೆ/ಅಧಿಕೃತತೆಗೆ  ತಮ್ಮ ಬದ್ಧತೆಯನ್ನು ಒತ್ತಿಹೇಳಿದ ಚಿರಂಜೀವಿ, ಸಾಮಾನ್ಯನಾಗಿ ಉಳಿಯುವ  ಮತ್ತು ಪರಸ್ಪರ ಹೋಲಿಕೆಯಾಗಿ ಉಳಿಯುವ  ಆಳವಾದ ಬಯಕೆಯನ್ನು ವ್ಯಕ್ತಪಡಿಸಿದರು. "ಪ್ರೇಕ್ಷಕರು “ನನ್ನನ್ನು ಪಕ್ಕದ ಮನೆಯ ಹುಡುಗನಾಗಿ ನೋಡಬೇಕೆಂದು ನಾನು ಸದಾ ಬಯಸುತ್ತೇನೆ. ಅದಕ್ಕಾಗಿಯೇ ನನ್ನ ಪ್ರದರ್ಶನಗಳನ್ನು ಸಾಧ್ಯವಾದಷ್ಟು ಸಹಜ ಮತ್ತು ನೈಜವಾಗಿಡಲು ನಾನು ಪ್ರಯತ್ನಿಸುತ್ತೇನೆ, "ಎಂದು ಅವರು ನುಡಿದರು. ಕಲಾವಿದನಾಗಿ ತಮ್ಮ ವಿಕಸನದ  ಮೇಲೆ ಮಿಥುನ್ ಚಕ್ರವರ್ತಿ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಸಿನಿಮೀಯ ಐಕಾನ್ ಗಳ ಆಳವಾದ ಪ್ರಭಾವವನ್ನು ಒಪ್ಪಿಕೊಂಡ ಅವರು ತಮ್ಮ ಕುಶಲತೆಯನ್ನು ರೂಪಿಸಿದ ದಂತಕಥೆಗಳಿಗೆ ಗೌರವ ಸಲ್ಲಿಸಿದರು.

ಈ ಚರ್ಚೆಯು ವೈಯಕ್ತಿಕ ಅಭಿಪ್ರಾಯ ಪ್ರತಿಫಲನಗಳು ಮತ್ತು ಹಂಚಿಕೊಂಡ ಪರಂಪರೆಗಳ ಹೃದಯಸ್ಪರ್ಶೀ  ಮಿಶ್ರಣವಾಗಿದ್ದು, ಪ್ರೇಕ್ಷಕರಿಗೆ ಭಾರತದ ಸಿನಿಮಾರಂಗದ ಪ್ರಖ್ಯಾತರ  ಮನಸ್ಸು ಮತ್ತು ಹೃದಯಗಳ ಅಪರೂಪದ ನೋಟವನ್ನು ನೀಡಿತು.

 

*****


Release ID: (Release ID: 2125971)   |   Visitor Counter: 13