ಪಂಚಾಯತ್ ರಾಜ್ ಸಚಿವಾಲಯ
“ರಾಷ್ಟ್ರೀಯ ಪಂಚಾಯತ್ ರಾಜ್ ದಿನ” ವಾದ ಏಪ್ರಿಲ್ 24 ರಂದು ಬಿಹಾರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ “ವಿಶೇಷ ವರ್ಗದ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ-2025” ಗಳನ್ನು ಪ್ರದಾನ ಮಾಡಲಾಗುವುದು
ಮೊದಲ ಬಾರಿಗೆ, ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು ಹವಾಮಾನ ಕ್ರಮ ಮತ್ತು ಸ್ವಾವಲಂಬನೆಯ ನಿಟ್ಟಿನಲ್ಲಿ ಪಂಚಾಯತ್ ಗಳ ಪ್ರಯತ್ನಗಳನ್ನು ಗುರುತಿಸಲು ವಿಶೇಷ ವರ್ಗದ ಪ್ರಶಸ್ತಿಗಳನ್ನು ಪ್ರಾರಂಭಿಸಿದೆ
Posted On:
23 APR 2025 4:30PM by PIB Bengaluru
ಈ ವರ್ಷದ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು (ಎನ್.ಪಿ.ಆರ್.ಡಿ.) ಏಪ್ರಿಲ್ 24, 2025 ರಂದು ಬಿಹಾರದ ಮಧುಬನಿ ಜಿಲ್ಲೆಯ ಲೋಹ್ನಾ ಉತ್ತರ ಗ್ರಾಮ ಪಂಚಾಯತ್ ನಲ್ಲಿ ಏರ್ಪಡಿಸಲಾಗುವುದು. ಈ ರಾಷ್ಟ್ರೀಯ ಪಂಚಾಯತ್ ರಾಜ್ ದಿನ (ಎನ್.ಪಿ.ಆರ್.ಡಿ)-2025 ಆಚರಣೆಯು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಇದರಲ್ಲಿ ವಿಶೇಷ ವರ್ಗದ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು-2025 ಅನ್ನು ಕೂಡಾ ಪ್ರದಾನಿಸಲಾಗುವುದು.
ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಇದನ್ನು ಬಹಳ ವಿಶೇಷ ಕ್ಷಣವಾಗಿ ಗುರುತಿಸಲಾಗುತ್ತದೆ. ಸ್ವಂತ ಮೂಲಗಳ ಆದಾಯವನ್ನು (ಒ.ಎಸ್.ಆರ್.) ಹೆಚ್ಚಿಸುವ ಮೂಲಕ ಹವಾಮಾನ ಕ್ರಮ ಮತ್ತು ಆತ್ಮನಿರ್ಭರತೆ (ಸ್ವಾವಲಂಬನೆ) ಮುಂತಾದ ಪ್ರಮುಖ ರಾಷ್ಟ್ರೀಯ ಆದ್ಯತೆಗಳಲ್ಲಿ ಗ್ರಾಮ ಪಂಚಾಯತ್ ಗಳ ಅನುಕರಣೀಯ ಪ್ರಯತ್ನಗಳನ್ನು ಪ್ರೋತ್ಸಾಹಿಸಲು ಮತ್ತು ಅಂಗೀಕರಿಸಲು ಕೇಂದ್ರ ಪಂಚಾಯತಿ ರಾಜ್ ಸಚಿವಾಲಯವು “ಮೀಸಲಾದ ವಿಶೇಷ ವರ್ಗದ ಪ್ರಶಸ್ತಿ”ಗಳನ್ನು ಪ್ರಾರಂಭಿಸಿದೆ. ಇದರ ಜೊತೆಗೆ, ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣಕ್ಕೆ (ಎಲ್.ಎಸ್.ಡಿ.ಗಳು) ಅನುಗುಣವಾಗಿ ಪಂಚಾಯತ್ಗಳ ಸಾಮರ್ಥ್ಯ ವೃದ್ಧಿಗಾಗಿ ಅತ್ಯುತ್ತಮ ಸಂಸ್ಥೆಗಳಿಗೆ ಸಹ ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು.
ಪ್ರಮುಖ ರಾಷ್ಟ್ರೀಯ ಆದ್ಯತೆಯ ಕ್ಷೇತ್ರಗಳಲ್ಲಿ ಪಂಚಾಯತ್ ಗಳು/ಸ್ಥಳೀಯ ಸಂಸ್ಥೆಗಳು ನೀಡಿದ ಅತ್ಯುತ್ತಮ ಕೊಡುಗೆಗಳನ್ನು ದೇಶಮಟ್ಟದಲ್ಲಿ ಗುರುತಿಸಲು ಈ ಕೆಳಗಿನ ವಿಶೇಷ ವರ್ಗದ “ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ”ಗಳನ್ನು ಪರಿಚಯಿಸಲಾಗಿದೆ:
ಹವಾಮಾನ ಕ್ರಿಯೆಯ ವಿಶೇಷ ಪಂಚಾಯತ್ ಪ್ರಶಸ್ತಿ (ಸಿ.ಎ.ಎಸ್.ಪಿ.ಎ) - ಪಂಚಾಯತ್ ಗಳು ಹವಾಮಾನ-ಪ್ರತಿಕ್ರಿಯಾಶೀಲ ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸುವುದನ್ನು ಪ್ರೋತ್ಸಾಹಿಸಲು;
ಆತ್ಮ ನಿರ್ಭರ ಪಂಚಾಯತ್ ವಿಶೇಷ ಪ್ರಶಸ್ತಿ (ಎ.ಎನ್.ಪಿ.ಎಸ್.ಎ) - ಪಂಚಾಯತ್ ಗಳು ಸ್ವಂತ ಮೂಲ ಆದಾಯವನ್ನು (ಒ.ಎಸ್.ಆರ್.) ಹೆಚ್ಚಿಸುವ ಮೂಲಕ ಆತ್ಮನಿರ್ಭರಗೊಳ್ಳಲು ಪ್ರೋತ್ಸಾಹ ಮತ್ತು ಅವುಗಳನ್ನು ಉತ್ತೇಜಿಸುವ ವ್ಯವಸ್ಥೆ;
ಪಂಚಾಯತ್ ಕ್ಷಾಮತಾ ನಿರ್ಮಾಣ್ ಸರ್ವೋತ್ತಮ ಸಂಸ್ಥಾನ ಪುರಸ್ಕಾರ (ಪಿ.ಕೆ.ಎನ್.ಎಸ್.ಎಸ್.ಪಿ.) - ಪಂಚಾಯತ್ ರಾಜ್ ಪ್ರತಿನಿಧಿಗಳು ಮತ್ತು ಕಾರ್ಯಕಾರಿ ವ್ಯವಸ್ಥೆಗಳ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಯಲ್ಲಿ ಶ್ರೇಷ್ಠತೆಯನ್ನು ಗುರುತಿಸಲು. ಈ ಪ್ರಶಸ್ತಿಯನ್ನು ಸಚಿವಾಲಯವು 2023ರಲ್ಲಿ ಸ್ಥಾಪಿಸಲಾಯಿತು ಮತ್ತು ಮೊದಲ ಪ್ರಶಸ್ತಿಗಳನ್ನು 2024ರಲ್ಲಿ ನೀಡಲಾಯಿತು.
ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು-2025 ರ ವಿಶೇಷ ವರ್ಗಗಳಿಗೆ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ:
ಹವಾಮಾನ ಕ್ರಿಯೆ ವಿಶೇಷ ಪಂಚಾಯತ್ ಪ್ರಶಸ್ತಿ (ಸಿ.ಎ.ಎಸ್.ಪಿ.ಎ)
- ಶ್ರೇಯಾಂಕ 1: ದಾವ್ವಾ ಎಸ್ ಗ್ರಾಮ ಪಂಚಾಯತ್, ಗೊಂಡಿಯಾ ಜಿಲ್ಲೆ, ಮಹಾರಾಷ್ಟ್ರ
- ಶ್ರೇಯಾಂಕ 2: ಬಿರಡಹಳ್ಳಿ ಗ್ರಾಮ ಪಂಚಾಯತ್, ಹಾಸನ ಜಿಲ್ಲೆ, ಕರ್ನಾಟಕ
- ಶ್ರೇಯಾಂಕ 3: ಮೋತಿಪುರ್ ಗ್ರಾಮ ಪಂಚಾಯತ್, ಸಮಸ್ತಿಪುರ್ ಜಿಲ್ಲೆ, ಬಿಹಾರ
ಆತ್ಮ ನಿರ್ಭರ ಪಂಚಾಯತ್ ವಿಶೇಷ ಪ್ರಶಸ್ತಿ (ಎ.ಎನ್.ಪಿ.ಎಸ್.ಎ)
- ಶ್ರೇಯಾಂಕ 1: ಮಾಲ್ ಗ್ರಾಮ ಪಂಚಾಯತ್, ರಂಗರೆಡ್ಡಿ ಜಿಲ್ಲೆ, ತೆಲಂಗಾಣ
- ಶ್ರೇಯಾಂಕ 2: ಹತ್ಬದ್ರ ಗ್ರಾಮ ಪಂಚಾಯತ್, ಮಯೂರ್ಭಂಜ್ ಜಿಲ್ಲೆ, ಒಡಿಶಾ
- ಶ್ರೇಯಾಂಕ 3: ಗೊಲ್ಲಪುಡಿ ಗ್ರಾಮ ಪಂಚಾಯತ್, ಕೃಷ್ಣಾ ಜಿಲ್ಲೆ, ಆಂಧ್ರಪ್ರದೇಶ
ಪಂಚಾಯತ್ ಕ್ಷಮತಾ ನಿರ್ಮಾಣ ಸರ್ವೋತ್ತಮ ಸಂಸ್ಥಾನ ಪುರಸ್ಕಾರ (ಪಿ.ಕೆ.ಎನ್.ಎಸ್.ಎಸ್.ಪಿ.)
- ಶ್ರೇಯಾಂಕ 1: ಕೇರಳ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಅಡ್ಮಿನಿಸ್ಟ್ರೇಷನ್ (ಕೆ.ಐ.ಎಲ್.ಎ), ಕೇರಳ
- ಶ್ರೇಯಾಂಕ 2: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಂಸ್ಥೆ, ಒಡಿಶಾ
- ಶ್ರೇಯಾಂಕ 3: ರಾಜ್ಯ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅಸ್ಸಾಂ
ಪ್ರತಿ ಪ್ರಶಸ್ತಿಯು ಕ್ರಮವಾಗಿ (1) ರೂ.1 ಕೋಟಿ (ಶ್ರೇಯಾಂಕ /ಶ್ರೇಣಿ-1), (2) ರೂ.75 ಲಕ್ಷ (ಶ್ರೇಯಾಂಕ /ಶ್ರೇಣಿ -2 ) ಮತ್ತು (3) ರೂ.50 ಲಕ್ಷ (ಶ್ರೇಯಾಂಕ /ಶ್ರೇಣಿ-3) ಆರ್ಥಿಕ ಪ್ರೋತ್ಸಾಹವನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮಾರಕ ಪಾರಿತೋಷಕಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆದ 6 ಗ್ರಾಮ ಪಂಚಾಯತ್ ಗಳಲ್ಲಿ 3 ಪಂಚಾಯತ್ ಗಳಲ್ಲಿ - ಬಿಹಾರ (ಮೋತಿಪುರ ಗ್ರಾಮ ಪಂಚಾಯತ್), ಮಹಾರಾಷ್ಟ್ರ (ದವ್ವಾ ಎಸ್ ಗ್ರಾಮ ಪಂಚಾಯತ್) ಮತ್ತು ಒಡಿಶಾ (ಹತ್ಬದ್ರಾ ಗ್ರಾಮ ಪಂಚಾಯತ್) - ಮಹಿಳಾ ಸರಪಂಚರು ಪಂಚಾಯತ್ ಗಳ ನೇತೃತ್ವ ವಹಿಸಿದ್ದಾರೆ ಎಂಬುದು ಅತ್ಯಂತ ಗಮನಾರ್ಹ ವಿಷಯವಾಗಿದೆ.
*****
(Release ID: 2123902)
Visitor Counter : 48