ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ತಂಬಾಕು ರೈತರಿಗೆ ಪರಿಹಾರ: ಬೆಳೆಗಾರರ ನೋಂದಣಿ ಮತ್ತು ಉಗ್ರಾಣ/ಕಣಜ ಪರವಾನಗಿಗಳಿಗೆ ಸರ್ಕಾರವು 3 ವರ್ಷಗಳ ಮಾನ್ಯತೆಯನ್ನು ಪ್ರಕಟಿಸಿದೆ
Posted On:
22 APR 2025 6:06PM by PIB Bengaluru
ವರ್ಜೀನಿಯಾ ತಂಬಾಕು ಬೆಳೆಗಾರರಾಗಿ ನೋಂದಣಿ ಪ್ರಮಾಣಪತ್ರದ ಕಡ್ಡಾಯ ವಾರ್ಷಿಕ ನವೀಕರಣ ಮತ್ತು ಉಗ್ರಾಣ/ಕಣಜ ಕಾರ್ಯಾಚರಣೆಗೆ ಪರವಾನಗಿಯ ಹೊರೆಯನ್ನು ಕಡಿಮೆ ಮಾಡಲು, ವ್ಯಾಪಾರ ಮಾಡುವ ಸುಲಭತೆಯ ಭಾಗವಾಗಿ ವರ್ಜೀನಿಯಾ ತಂಬಾಕು ಬೆಳೆಗಾರರಾಗಿ ನೋಂದಣಿ ಪ್ರಮಾಣಪತ್ರ ಮತ್ತು ಉಗ್ರಾಣ/ಕಣಜ ಕಾರ್ಯಾಚರಣೆಗೆ ಪರವಾನಗಿಯನ್ನು 1 ವರ್ಷದ ಬದಲು 3 ವರ್ಷಗಳಿಗೆ ನವೀಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರರ್ಥ, ನೋಂದಣಿಗಳು / ಪರವಾನಗಿಗಳು ಪ್ರತಿ ವರ್ಷ ನವೀಕರಿಸುವ ಅಸ್ತಿತ್ವದಲ್ಲಿರುವ ಪದ್ಧತಿಯ ಬದಲಿಗೆ 3 ವರ್ಷಗಳವರೆಗೆ ಮಾನ್ಯವಾಗಿರುತ್ತವೆ.
ಬೆಳೆಗಾರರು ಈ ನೋಂದಣಿ/ಪರವಾನಗಿಗಳನ್ನು 3 ವರ್ಷಗಳಿಗೊಮ್ಮೆ ನವೀಕರಿಸಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರವು ತಂಬಾಕು ಮಂಡಳಿ ನಿಯಮಗಳು, 1976ರ ನಿಯಮ 33 ರ ಉಪ-ನಿಯಮ (5), (6) ಮತ್ತು (7) ಮತ್ತು ನಿಯಮ 34Nರ ಉಪ-ನಿಯಮ (2) ಮತ್ತು (3) ಗಳನ್ನು ತಿದ್ದುಪಡಿ ಮಾಡಿದೆ. ತಂಬಾಕು ಮಂಡಳಿ ನಿಯಮಗಳು, 1976ರ ತಿದ್ದುಪಡಿಯನ್ನು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ವಾಣಿಜ್ಯ ಇಲಾಖೆ, ಭಾರತದ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಇದು ಆಂಧ್ರಪ್ರದೇಶದಲ್ಲಿ 2025-26 ಬೆಳೆ ಋತುವಿನಿಂದ ಜಾರಿಗೆ ಬರಲಿದೆ.
ಆವರ್ತಕತೆಯನ್ನು ಒಂದರಿಂದ ಮೂರು ವರ್ಷಕ್ಕೆ ಹೆಚ್ಚಿಸುವ ಈ ತಿದ್ದುಪಡಿಯು ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಾದ್ಯಂತ ಸುಮಾರು 91,000 ಉಗ್ರಾಣ/ಕಣಜ ಒಳಗೊಂಡ ಸುಮಾರು 83,500 ರೈತರಿಗೆ ತಮ್ಮ ನೋಂದಣಿ/ಪರವಾನಗಿಗಳನ್ನು ನವೀಕರಿಸುವಲ್ಲಿ ಬಹಳ ಸಹಾಯಕವಾಗಿದೆ.
ವರ್ಜೀನಿಯಾ ತಂಬಾಕನ್ನು ಭಾರತದಲ್ಲಿ ಸಂಸತ್ತಿನ ಕಾಯಿದೆ ಅಂದರೆ ತಂಬಾಕು ಮಂಡಳಿ ಕಾಯ್ದೆ, 1975 ಮತ್ತು ಅದರ ಅಡಿಯಲ್ಲಿ ಸೂಚಿಸಲಾದ ನಿಯಮಗಳಿಂದ ನಿಯಂತ್ರಿಸಲಾಗುತ್ತಿದೆ. 1975ರ ತಂಬಾಕು ಮಂಡಳಿ ಕಾಯ್ದೆ ಮತ್ತು ಅದರ ಅಡಿಯಲ್ಲಿ ಸೂಚಿಸಲಾದ ನಿಯಮಗಳ ಪ್ರಕಾರ, ವರ್ಜೀನಿಯಾ ತಂಬಾಕು ಕೃಷಿಯನ್ನು ಕೈಗೊಳ್ಳಲು ಉದ್ದೇಶಿಸಿರುವ ಪ್ರತಿಯೊಬ್ಬ ಬೆಳೆಗಾರನು ಬೆಳೆಗಾರನಾಗಿ ನೋಂದಣಿ ಪ್ರಮಾಣಪತ್ರ ಮತ್ತು ಉಗ್ರಾಣ/ಕಣಜ ಕಾರ್ಯಾಚರಣೆಗೆ ಪರವಾನಗಿಯನ್ನು ಪಡೆಯಬೇಕು. ಅದರಂತೆ, ತಂಬಾಕು ಮಂಡಳಿಯು ವಾರ್ಷಿಕ ಆಧಾರದ ಮೇಲೆ ನೋಂದಣಿ / ಪರವಾನಗಿಯನ್ನು ಸುಗಮಗೊಳಿಸುತ್ತಿದೆ.
ಭಾರತವು ವಿಶ್ವದಲ್ಲಿ 2ನೇ ಅತಿದೊಡ್ಡ ಉತ್ಪಾದಕ ಮತ್ತು 4ನೇ ಅತಿದೊಡ್ಡ ಸಂಸ್ಕರಿಸದ ತಂಬಾಕು ರಫ್ತುದಾರ (2023 ರ ಅವಧಿಯಲ್ಲಿ ಮೌಲ್ಯದ ದೃಷ್ಟಿಯಿಂದ) ಮತ್ತು ಭಾರತೀಯ ಖಜಾನೆಗೆ ಹೆಚ್ಚು ಉತ್ಪಾದನೆ ಒದಗಿಸುತ್ತದೆ. 2024-25ರ ಹಣಕಾಸು ವರ್ಷದಲ್ಲಿ, ತಂಬಾಕು ರಫ್ತುಗಳು ಭಾರತೀಯ ಖಜಾನೆಗೆ 1979 US ಮಿಲಿಯನ್ ಡಾಲರ್ (ರೂ.16,728 ಕೋಟಿ) ಕೊಡುಗೆ ನೀಡಿವೆ.
*****
(Release ID: 2123593)
Visitor Counter : 31