ಪ್ರಧಾನ ಮಂತ್ರಿಯವರ ಕಛೇರಿ
ಸೌದಿ ಅರೇಬಿಯಾ ಭೇಟಿಗೂ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನ ಹೇಳಿಕೆ
प्रविष्टि तिथि:
22 APR 2025 8:30AM by PIB Bengaluru
ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಮಂತ್ರಿ ಘನತೆವೆತ್ತ ಮೊಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರ ಆಹ್ವಾನದ ಮೇರೆಗೆ, ಇಂದು ನಾನು ಸೌದಿ ರಾಜ್ಯಕ್ಕೆ ಎರಡು ದಿನಗಳ ಅಧಿಕೃತ ಭೇಟಿಗೆ ತೆರಳುತ್ತಿದ್ದೇನೆ.
ಭಾರತವು ಸೌದಿ ಅರೇಬಿಯಾದೊಂದಿಗೆ ಹೊಂದಿರುವ ದೀರ್ಘಕಾಲದ ಮತ್ತು ಐತಿಹಾಸಿಕ ಬಾಂಧವ್ಯವನ್ನು ಬಹಳವಾಗಿ ಗೌರವಿಸುತ್ತದೆ. ಈ ಬಾಂಧವ್ಯವು ಇತ್ತೀಚಿನ ವರ್ಷಗಳಲ್ಲಿ ಕಾರ್ಯತಂತ್ರದ ಮಹತ್ವ ಮತ್ತು ವೇಗವನ್ನು ಪಡೆದುಕೊಂಡಿದೆ. ರಕ್ಷಣೆ, ವಾಣಿಜ್ಯ, ಹೂಡಿಕೆ, ಇಂಧನ ಮತ್ತು ಜನಸಂಪರ್ಕ ಸೇರಿದಂತೆ ಪರಸ್ಪರ ಲಾಭದಾಯಕ ಹಾಗೂ ಮಹತ್ವಪೂರ್ಣ ಸಹಭಾಗಿತ್ವವನ್ನು ನಾವು ಒಟ್ಟಾಗಿ ಅಭಿವೃದ್ಧಿಪಡಿಸಿದ್ದೇವೆ. ಪ್ರಾದೇಶಿಕ ಶಾಂತಿ, ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡುವಲ್ಲಿ ನಾವು ಸಮಾನ ಆಸಕ್ತಿ ಮತ್ತು ಬದ್ಧತೆಯನ್ನು ಹೊಂದಿದ್ದೇವೆ.
ಕಳೆದ ದಶಕದಲ್ಲಿ ಇದು ಸೌದಿ ಅರೇಬಿಯಾಕ್ಕೆ ನನ್ನ ಮೂರನೇ ಭೇಟಿ ಮತ್ತು ಐತಿಹಾಸಿಕ ನಗರವಾದ ಜೆಡ್ಡಾಗೆ ನನ್ನ ಮೊದಲ ಭೇಟಿಯಾಗಿದೆ. ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಎರಡನೇ ಸಭೆಯಲ್ಲಿ ಪಾಲ್ಗೊಳ್ಳಲು ಮತ್ತು 2023 ರಲ್ಲಿ ನನ್ನ ಸಹೋದರರಾದ ಘನತೆವೆತ್ತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಭಾರತಕ್ಕೆ ನೀಡಿದ ಅತ್ಯಂತ ಯಶಸ್ವಿ ರಾಜ್ಯ ಭೇಟಿಯ ನಂತರದ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ.
ನಮ್ಮ ದೇಶಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸಾಂಸ್ಕೃತಿಕ ಮತ್ತು ಮಾನವೀಯ ಸಂಬಂಧಗಳನ್ನು ಬಲಪಡಿಸಲು ಅಪಾರ ಕೊಡುಗೆ ನೀಡುತ್ತಿರುವ ಸೌದಿ ಅರೇಬಿಯಾದಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ.
*****
(रिलीज़ आईडी: 2123413)
आगंतुक पटल : 55
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam