ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ ಕಾಸ್ಪ್ಲೇ ಚಾಂಪಿಯನ್‌ಶಿಪ್ ನ ಅಂತಿಮ ಸ್ಪರ್ಧಿಗಳ ಘೋಷಣೆ - ಸೃಜನಶೀಲತೆ ಮತ್ತು ಅಭಿಮಾನಿ ಸಂಸ್ಕೃತಿಯ ಆಚರಣೆ

 Posted On: 16 APR 2025 2:01PM |   Location: Mumbai

ಕಳೆದ ಶನಿವಾರ, ಹೈದರಾಬಾದ್ ನಗರವು ಮೈಂಡ್‌ ಸ್ಪೇಸ್ ಸೋಷಿಯಲ್‌ ನಲ್ಲಿ ನಡೆದ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಕಾಸ್‌ಪ್ಲೇ ಚಾಂಪಿಯನ್‌ಶಿಪ್ ಮೀಟ್‌‌ ಅಪ್‌ ನಲ್ಲಿ ಸೃಜನಶೀಲತೆ ಮತ್ತು ಅಭಿಮಾನಿಗಳ ಅಬ್ಬರಕ್ಕೆ ಸಾಕ್ಷಿಯಾಯಿತು. ಎಂಇಎಐ, ಇಂಡಿಯನ್ ಕಾಮಿಕ್ಸ್ ಅಸೋಸಿಯೇಷನ್ ​​ಮತ್ತು ಕ್ರಿಯೇಟರ್ಸ್ ಸ್ಟ್ರೀಟ್‌ ಆಯೋಜಿಸಿದ, ಎಪಿಕೊ-ಕಾನ್‌, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಟಿವಿಎಜಿಎ ಮತ್ತು ಫರ್ಬಿಡನ್ ವರ್ಸ್ ಸಹಯೋಗದಲ್ಲಿ ನಡೆಸಲಾದ ಈ ಕಾರ್ಯಕ್ರಮವು ಭಾರಿ ಯಶಸ್ಸನ್ನು ಕಂಡಿತು, ವಾರಾಂತ್ಯದಲ್ಲಿ ಕಾಸ್‌ಪ್ಲೇ ಸಮುದಾಯಗಳು ಮತ್ತು ಅನಿಮೆ ವೇದಿಕೆಗಳಲ್ಲಿ ಟ್ರೆಂಡಿಂಗ್ ವಿಷಯವಾಯಿತು.

ಈಗ, ದೇಶಾದ್ಯಂತ ತೀವ್ರವಾದ ಹುಡುಕಾಟ ಮತ್ತು ಹೈದರಾಬಾದ್ ಮತ್ತು ಮುಂಬೈನಾದ್ಯಂತ ನಡೆದ ಉತ್ಸಾಹಭರಿತ ಸ್ಪರ್ಧೆಗಳ ನಂತರ, ಆಯೋಜಕರು ವೇವ್ಸ್‌ ಕಾಸ್ಪ್ಲೇ ಚಾಂಪಿಯನ್‌ಶಿಪ್‌ ನ ಅಂತಿಮ ಹಂತದಲ್ಲಿ ತಮ್ಮ ಸ್ಥಾನವನ್ನು ಗಳಿಸಿದ 29 ಅತ್ಯಂತ ಪ್ರತಿಭಾನ್ವಿತ ಕಾಸ್ಪ್ಲೇಯರ್‌ ಗಳನ್ನು ಘೋಷಿಸಿದ್ದಾರೆ. ಈ ಅಂತಿಮ ಸ್ಪರ್ಧಿಗಳು ವೇವ್ಸ್ 2025 ರ ಕ್ರಿಯೇಟೋಸ್ಫಿಯರ್‌‌ ನಲ್ಲಿ ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸುತ್ತಾರೆ.

ಫರ್ಬಿಡನ್ ವರ್ಸ್‌ ನ ಸಂಸ್ಥಾಪಕ ಮತ್ತು ಕಾಸ್‌ಪ್ಲೇ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಅಜಯ್ ಕೃಷ್ಣ, ಈ ಚಾಂಪಿಯನ್‌ಶಿಪ್ ಅನ್ನು ಇತರ ಸ್ಪರ್ಧೆಗಳಿಗಿಂತ ಭಿನ್ನವಾಗಿಸಲು, ಇತರ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಚಿತ್ರಿಸಲಾಗುವ ಇತರ ಜನಪ್ರಿಯ ಪಾತ್ರಗಳನ್ನು ಹೊರತುಪಡಿಸಿ ಭಾರತೀಯ ಪುರಾಣ ಮತ್ತು ಪಾಪ್ ಸಂಸ್ಕೃತಿಯತ್ತ ಗಮನ ಹರಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

ವೇವ್ಸ್‌ ನಲ್ಲಿ ನಡೆಯುವ ಮುಖ್ಯ ಚಾಂಪಿಯನ್‌ಶಿಪ್‌ ಗೆ ಮೊದಲು ಏಪ್ರಿಲ್ 19 ರಂದು ಮುಂಬೈನಲ್ಲಿ ವೈಲ್ಡ್‌ ಕಾರ್ಡ್ ಸ್ಪರ್ಧೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ, ಆಯ್ದ ಸಂಖ್ಯೆಯ ವೈಲ್ಡ್‌ ಕಾರ್ಡ್ ನಮೂದುಗಳನ್ನು ಅಂತಿಮ ಸ್ಪರ್ಧಿಗಳಿಗೆ ಸೇರಿಸಲಾಗುತ್ತದೆ, ಇದು ಅನಿರೀಕ್ಷಿತ ಪ್ರತಿಭೆಯನ್ನು ಸ್ಪರ್ಧೆಗೆ ತರುತ್ತದೆ ಮತ್ತು ಸ್ಪರ್ಧೆಯನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಏರಿಸುತ್ತದೆ. ಅಚ್ಚರಿ, ತೀವ್ರತೆ ಮತ್ತು ವಿಶ್ವ ದರ್ಜೆಯ ಕಾಸ್ಪ್ಲೇ ಚಾಂಪಿಯನ್‌ಶಿಪ್‌ ಗೆ ಸಿದ್ಧರಾಗಿ!

ಅಧಿಕೃತ ಅಂತಿಮ ಸ್ಪರ್ಧಿಗಳು:

1. ಕೈಜಾದ್ ಶೇಷಬರದರನ್ - ಮುಂಬೈ

2. ಪುನೀತ್ ವಿ - ಬೆಂಗಳೂರು

3. ಶೇಖ್ ಸಮೀರ್ ಕಲೀಂ - ಲಾತೂರ್

4. ತೇಜಲ್ ಸಂಜಯ್ ಮುಲಿಕ್ - ಮುಂಬೈ

5. ಅನುಪ್ ಭಾಟಿಯಾ - ಪುಣೆ

6. ನವದೀಪ್ ಸಿಂಗ್ ಪನ್ನು - ಮುಂಬೈ

7. ಆಕಾಶಿ ಗೌತಮ್ - ಲಕ್ನೋ

8. ಆದಿತ್ಯ ಕಾಲೆಬೆರೆ - ಪುಣೆ

9. ಸ್ವರಾಜ್ ಕಾಲೆಬೆರೆ - ಪುಣೆ

10. ಶ್ರೀಹರ್ಷ್ ನರ್ವಾಡೆ - ಪುಣೆ

11. ವಿವೇಕ್ ದಿಲೀಪ್ ಮಾನೆ - ಪುಣೆ

12. ಇಶಾ ಜೋಶಿ - ಮುಂಬೈ

13. ಕೇದಾರ್ ಪಂಡಿತ್ - ಮುಂಬೈ

14. ಆರ್ಶಿ ದಿಯೋರಿ - ಗುವಾಹಟಿ

15. ಮಾರ್ಶಿ ದಿಯೋರಿ - ಗುವಾಹಟಿ

16. ಮುಹಮದ್ ಪಿಯಾಲ್ ಶೇಖ್ - ಮುಂಬೈ

17. ಪ್ರಣಯ್ ಪಾನಪಾಟೀಲ್ - ಮುಂಬೈ

18. ಗೌರವ್ ವಿಶ್ವಕರ್ಮ - ಪುಣೆ

19. ಅಖಿಲ್ - ಹೈದರಾಬಾದ್

20. ಸ್ತಯಾ - ಹೈದರಾಬಾದ್

21. ನೂಪುರ್ ಮುಂಡಾ - ಹೈದರಾಬಾದ್

22. ನಕ್ಷತ್ರ - ಹೈದರಾಬಾದ್

23. ರುಚಿರಾ ಕೊರೊಲಿನ್ - ಹೈದರಾಬಾದ್

24. ಸೋನಾಲಿ - ಹೈದರಾಬಾದ್

25. ನೀರಜ್ ಕುಮಾರ್ - ಹೈದರಾಬಾದ್

26. ಶ್ರಾವಣಿ - ಹೈದರಾಬಾದ್

27. ಅಖಿಲ್ ಸಿ.ಎಚ್. - ಹೈದರಾಬಾದ್

28. ನಯನಾ ಸಾಯಿ ಶ್ರೀ - ಹೈದರಾಬಾದ್

29. ಲೀಲಾಧರ್ – ಹೈದರಾಬಾದ್

 

ಅಂತಿಮ ಸ್ಪರ್ಧಿಗಳನ್ನು ಅವರ ಕಲೆಗಾರಿಕೆ, ಸ್ವಂತಿಕೆ, ಪ್ರದರ್ಶನ ಮತ್ತು ಪಾತ್ರದ ವಿಶ್ವಾಸಾರ್ಹತೆಗೆ ಸಮರ್ಪಣೆಯ ಆಧಾರದ ಮೇಲೆ ಆಯ್ಕೆ ಮಾಡಲಾಯಿತು.

ವೇವ್ಸ್‌ ಕುರಿತು

ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದಲ್ಲಿ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.

ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.

ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here

PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್‌ ಆಗಿ

ವೇವ್ಸ್‌ ಗೆ ನೋಂದಾಯಿಸಿ now

 

*****


Release ID: (Release ID: 2122088)   |   Visitor Counter: Visitor Counter : 21