ಪ್ರಧಾನ ಮಂತ್ರಿಯವರ ಕಛೇರಿ
14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ ಶ್ರೀ ರಾಮ್ ಪಾಲ್ ಕಶ್ಯಪ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
Posted On:
14 APR 2025 7:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹರಿಯಾಣದ ಯಮುನಾನಗರದಲ್ಲಿ ಕೈತಾಲ್ ನ ಶ್ರೀ ರಾಮ್ ಪಾಲ್ ಕಶ್ಯಪ್ ಅವರನ್ನು ಭೇಟಿ ಮಾಡಿದರು. ತಾವು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಮ್ಮನ್ನು ಭೇಟಿಯಾಗುವವರೆಗೂ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಶ್ರೀ ಕಶ್ಯಪ್ ಅವರು 14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದರು ಎಂದು ತಿಳಿದು ಶ್ರೀ ಮೋದಿಯವರು ವಿನೀತರಾದರು. ಸಾಮಾಜಿಕ ಕಾರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಅರ್ಥಪೂರ್ಣ ಕಾರ್ಯಗಳತ್ತ ತಮ್ಮ ಶಕ್ತಿಯನ್ನು ಕೇಂದ್ರೀಕರಿಸುವಂತೆ ಅವರು ನಾಗರಿಕರನ್ನು ಆಗ್ರಯಿಸಿದರು.
Xನ ಪ್ರತ್ಯೇಕ ಪೋಸ್ಟ್ ಗಳಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು:
"ಯಮುನಾನಗರದಲ್ಲಿ ನಡೆದ ಇಂದಿನ ಸಾರ್ವಜನಿಕ ಸಭೆಯಲ್ಲಿ, ನಾನು ಕೈತಾಲ್ ನ ಶ್ರೀ ರಾಮ್ ಪಾಲ್ ಕಶ್ಯಪ್ ಅವರನ್ನು ಭೇಟಿಯಾದೆ. 'ಮೋದಿ ಪ್ರಧಾನಿಯಾಗುವುವವರೆಗೆ ಮತ್ತು ನಾನೇ ಅವರನ್ನು ಭೇಟಿಯಾಗದ ನಂತರ ಮಾತ್ರ ಪಾದರಕ್ಷೆಗಳನ್ನು ಧರಿಸುತ್ತೇನೆ' ಎಂದು ಅವರು 14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದರು. ಇಂದು ಅವರು ನನ್ನನ್ನು ಭೇಟಿಯಾದರು.
ಶ್ರೀ ರಾಮ್ ಪಾಲ್ ಕಶ್ಯಪ್ ಅವರಂತಹ ಜನರಿಂದ ನಾನು ವಿನೀತನಾಗಿ, ಅವರ ಪ್ರೀತಿಯನ್ನು ಸ್ವೀಕರಿಸುತ್ತೇನೆ ಆದರೆ ಅಂತಹ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬರನ್ನು ನಾನು, ದಯವಿಟ್ಟು ಸಾಮಾಜಿಕ ಕಾರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದಾದರೂ ವಿಷಯದ ಬಗ್ಗೆ ಗಮನ ಹರಿಸಿ ಎಂದು ವಿನಂತಿಸಲು ಬಯಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
https://x.com/narendramodi/status/1911756643777618032?s=46
https://x.com/narendramodi/status/1911755163636736002?s=46
*****
(Release ID: 2121781)
Visitor Counter : 9