ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್‌ 2025 - ಥೀಮ್ ಮ್ಯೂಸಿಕ್ ಸ್ಪರ್ಧೆ, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ವಿಜೇತರ ಘೋಷಣೆ

Posted On: 11 APR 2025 6:34PM by PIB Bengaluru

ಭಾರತೀಯ ಸಂಗೀತ ಉದ್ಯಮದ ಸಹಯೋಗದೊಂದಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು 32 ವೇವ್ಸ್‌ - ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸರಣಿಗಳಲ್ಲಿ ಒಂದಾದ ಥೀಮ್ ಮ್ಯೂಸಿಕ್ ಸ್ಪರ್ಧೆಯ ವಿಜೇತರನ್ನು ಘೋಷಿಸಿದೆ. ಚೊಚ್ಚಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್ 2025) ಮುಂಬೈನಲ್ಲಿ 2025ರ ಮೇ 01 ರಿಂದ 04 ರವರೆಗೆ ನಡೆಯಲಿದೆ.‌

  

ಭಾರತದ ವೈವಿಧ್ಯಮಯ ಸಂಗೀತ ಪ್ರತಿಭೆಯನ್ನು ಗುರುತಿಸಲು ವಿನ್ಯಾಸಗೊಳಿಸಲಾದ ಈ ಸ್ಪರ್ಧೆಗೆ ದೇಶಾದ್ಯಂತ ನೂರಾರು ನಮೂದುಗಳು ಬಂದವು. ಹೆಸರಾಂತ ತೀರ್ಪುಗಾರರ ತಂಡವು ಆರು ವಿಜೇತರನ್ನು ಅವರ ಸ್ವಂತಿಕೆ, ಸಂಗೀತದ ಗುಣಮಟ್ಟ ಮತ್ತು ವೇವ್ಸ್ ಥೀಮ್‌‌ ಗೆ ಅನುಗುಣವಾದ ಕಠಿಣ ಮೌಲ್ಯಮಾಪನದ ನಂತರ ಆಯ್ಕೆ ಮಾಡಿದೆ.

ಸ್ಪರ್ಧೆಯ ತೀರ್ಪುಗಾರರಲ್ಲಿ ಭಾರತೀಯ ಸಂಗೀತ ಉದ್ಯಮದ ಹೆಸರಾಂತರು ಇದ್ದರು: ಸೋಮೇಶ್ ಕುಮಾರ್ ಮಾಥುರ್ - ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಮತ್ತು ಮಾರ್ಗದರ್ಶಕ; ಸಾಂದಿಪ್ ಬಕ್ಚು - ಹಿನ್ನೆಲೆ ಗಾಯಕ ಮತ್ತು ಟಾಲಿವುಡ್ ನಟ; ಗುಲ್ರಾಜ್ ಸಿಂಗ್ - ಬಾಲಿವುಡ್‌ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ಮಾಪಕ.

 

ಥೀಮ್ ಮ್ಯೂಸಿಕ್ ಸ್ಪರ್ಧೆಯ ವಿಜೇತರು‌

ಸ್ಥಾನ

ಹೆಸರು

ನಗರ

ರಾಜ್ಯ

ವಿಜೇತ

ಕುನಾಲ್ ಕುಂಡು ಮತ್ತು ಅಲ್ಲಾಪ್ ಸರ್ದಾರ್

ಕೋಲ್ಕತ್ತಾ

ಪಶ್ಚಿಮ ಬಂಗಾಳ

ಮೊದಲನೇ ರನ್ನರ್-ಅಪ್

ವಿವೇಕ್ ದುಬೆ

ಮುಂಬೈ

ಮಹಾರಾಷ್ಟ್ರ

2ನೇ ರನ್ನರ್-ಅಪ್

ಭಾವಗಣೇಶ್ ತಂಬಿರನ್

ಕೊಯಮತ್ತೂರು

ತಮಿಳುನಾಡು

3ನೇ ರನ್ನರ್-ಅಪ್

ಜಯಂತನ್ ಆರ್

ಚೆನ್ನೈ

ತಮಿಳುನಾಡು‌

4ನೇ ರನ್ನರ್-ಅಪ್

ಜಯಂತನ್ ಆರ್‌

(ಎರಡನೇ ಸಂಯೋಜನೆ)

ಚೆನ್ನೈ

ತಮಿಳುನಾಡು

5ನೇ ರನ್ನರ್-ಅಪ್

ದೀಪ್ ರಾಜೇಶ್ ದಾಬ್ರೆ

ಪುಣೆ

ಮಹಾರಾಷ್ಟ್ರ

 

ವೇವ್ಸ್‌ ಕುರಿತು

ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದಲ್ಲಿ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.

ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.

ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here

PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್‌ ಆಗಿ

WAVES ಗೆ ನೋಂದಾಯಿಸಿ now

 

*****

 


(Release ID: 2121374) Visitor Counter : 11